ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಆರೋಗ್ಯದತ್ತ ಗಮನ ಅಗತ್ಯ, ಕರಿದ ಪದಾರ್ಥ ತಿನ್ನಬೇಡಿ

Nitya-Bhavishya-vvani-1-2-1
Published on

ಮೇಷ: ನೀವು ಅನ್ಯರಿಗೆ ಧನಸಹಾಯ ನೀಡಬಹುದು. ನಿಮಗೆ ಅದರಿಂದ ಲಾಭವಿಲ್ಲ. ಹಣ ನೀಡುವ ಮೊದಲು ಪರಾಮಶಿಸಿ. ಅದೃಷ್ಟ ಸಂಖ್ಯೆ: 3

ವೃಷಭ: ರುಚಿಕರ ಆಹಾರ ಸೇವಿಸುವ ಮನಸ್ಸಾಗುತ್ತದೆ. ಅದೇ ರೀತಿ ರುಚಿರುಚಿ ಪದಾರ್ಥಗಳನ್ನು ತಿನ್ನುವ ಯೋಗ ಸಹ ಇದೆ. ಅದೃಷ್ಟ ಸಂಖ್ಯೆ: 5

ಮಿಥುನ: ಕೆಲಸಕ್ಕೆ ಹೋಗುವುದು, ಆರ್ಥಿಕ ವ್ಯವಹಾರ, ಎಲ್ಲದರಲ್ಲಿಯೂ ಮನಸ್ಸು ಬದಲಾವಣೆ ಬಯಸುತ್ತದೆ. ಅದೃಷ್ಟ ಸಂಖ್ಯೆ: 7

ಕಟಕ: ಪರಿಸರ ಮಾಲಿನ್ಯದಂತೆ ಮಾನಸಿಕ ಮಾಲಿನ್ಯ ನಿಮಗರಿವಿಲ್ಲದೆ ಹೆಚ್ಚುತ್ತಿದೆ. ಅದನ್ನು ಗಮನಿಸಿ ನಿಲ್ಲಿಸುವತ್ತ ಪ್ರಯತ್ನಿಸಿ. ಅದೃಷ್ಟ ಸಂಖ್ಯೆ: 6

ಸಿಂಹ: ನಿಮಗೆ ಎಲ್ಲಿ ಹೇಗೆ ಮಾತನಾಡಬೇಕೆಂದು ತಿಳಿದಿಲ್ಲ. ಆದುದರಿಂದ ಇಂದು ಮೌನವಾಗಿರುವುದೇ ಲೇಸು. ಅದೃಷ್ಟ ಸಂಖ್ಯೆ: 1

ಕನ್ಯಾ: ಕೆಲವರ ಮೇಲೆ ಸಿಟ್ಟು ಬರುತ್ತದೆ. ಕಾರಣ ನಿಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸುತ್ತಾರೆ. ಅದೃಷ್ಟ ಸಂಖ್ಯೆ: 2

ತುಲಾ: ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಬೇಕೇ ಎಂದು ಕೊರಗುತ್ತೀರಿ. ಆದರೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದೃಷ್ಟ ಸಂಖ್ಯೆ: 4

ವೃಶ್ಚಿಕ: ಯಾರದೋ ಜಗಳದಲ್ಲಿ ನ್ಯಾಯತೀರ್ವನಕ್ಕೆ ಹೋಗಿ ನಿಮಗೆ ಬೇಸರ ಆಗುವ ಸನ್ನಿವೇಶ ಎದುರಾಗಬಹುದಾಗಿದೆ. ಅದೃಷ್ಟ ಸಂಖ್ಯೆ: 5

ಧನಸ್ಸು: ನೀವು ತಪ್ಪು ಹೆಜ್ಜೆ ಇಡುವುದನ್ನು ಶತ್ರುಗಳು ಕಾದಿದ್ದಾರೆ. ಯಾವುದಕ್ಕೂ ತುಸು ಎಚ್ಚರ ವಹಿಸಿದರೆ ಉತ್ತಮ. ಅದೃಷ್ಟ ಸಂಖ್ಯೆ: 3

ಮಕರ: ಮೇಲಿಂದ ಮೇಲೆ ಒತ್ತಡ ತಂದು ಕೆಲಸಕಾರ್ಯ ಮಾಡಿಸಬೇಕಾದ ಪರಿಸ್ಥಿತಿ. ತಪ್ಪಿಸಿಕೊಳ್ಳುವುದು ಸಹ ಕಷ್ಟಸಾಧ್ಯ. ಅದೃಷ್ಟ ಸಂಖ್ಯೆ: 6

ಕುಂಭ: ಆರೋಗ್ಯದತ್ತ ಗಮನ ಅಗತ್ಯ. ಕರಿದ ಪದಾರ್ಥ ತಿನ್ನಬೇಡಿ. ಅನಾರೋಗ್ಯವೇ ಬರದಂತೆ ನೋಡಿಕೊಳ್ಳಿ. ಅದೃಷ್ಟ ಸಂಖ್ಯೆ: 7

ಮೀನ: ಹೆಚ್ಚಿನ ಕೆಲಸಕಾರ್ಯ ಮಾಡಿಕೊಡಲು ನಿಮಗರಿವಿಲ್ಲದೆ ಒಪ್ಪಿ ನಂತರ ಕಷ್ಟಪಟ್ಟು ಆ ಕೆಲಸ ಮಾಡಿ ಮುಗಿಸುವಿರಿ. ಅದೃಷ್ಟ ಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net