ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭ ಆಗಲಿದೆ

Nitya-Bhavishya-vvani-1-2-1
Published on

ಮೇಷ: ಅನಿರೀಕ್ಷಿತ ಅತಿಥಿ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಪ್ರಶಂಸೆ ದೊರೆಯಲಿದೆ. ಶುಭಸಂಖ್ಯೆ: 2

ವೃಷಭ: ಜೀವನದ ಕನಸು ಸಾಕಾರಗೊಳ್ಳಲಿದೆ. ಮಕ್ಕಳ ವಿಷಯದಲ್ಲಿ ಅಸಡ್ಡೆ ಬೇಡ. ಸಹೋದೊ್ಯೕಗಿಗಳಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ. ಶುಭಸಂಖ್ಯೆ: 7

ಮಿಥುನ: ವೈದ್ಯರ ಸಲಹೆಯನ್ನು ತಿರಸ್ಕರಿಸಬೇಡಿ. ಹಳೇ ರೋಗ ಉಲ್ಬಣ. ಆತಿ್ಮೕಯರೊಂದಿಗೆ ವಿಹಾರ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 3

ಕಟಕ: ಪತ್ನಿಯೊಂದಿಗೆ ಮನಸ್ತಾಪ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ ದೊರೆಯಲಿದೆ. ಕುಟುಂಬದೊಂದಿಗೆ ಕೂತು ಮಾತನಾಡಿ. ಶುಭಸಂಖ್ಯೆ: 6

ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಆತಿ್ಮೕಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9

ಕನ್ಯಾ: ತಪ್ಪು ನಿರ್ಧಾರಗಳಿಂದ ಸಮಸ್ಯೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರ ಸಮಸ್ಯೆ. ಆತಿ್ಮೕಯರೊಂದಿಗೆ ಭೋಜನ. ಶುಭಸಂಖ್ಯೆ: 3

ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 2

ವೃಶ್ಚಿಕ: ಅಪರೂಪದ ವ್ಯಕ್ತಿಯ ಭೇಟಿ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಗೆ ಸರಿಯಾದ ಸಲಹೆ ನೀಡಿ. ಶುಭಸಂಖ್ಯೆ: 1

ಧನುಸ್ಸು: ಹಳೆಯ ವಿಚಾರಗಳನ್ನು ಕೆದಕಬೇಡಿ. ಸಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಶುಭಸಂಖ್ಯೆ: 9

ಮಕರ: ಕೌಟುಂಬಿಕ ಸಮಸ್ಯೆ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಪರಿಹಾರ ಸಿಗುತ್ತದೆ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

ಕುಂಭ: ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಿ. ಹಲವುದಿನಗಳಿಂದ ನಿರೀಕ್ಷಿಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ. ಶುಭಸಂಖ್ಯೆ: 4

ಮೀನ: ವ್ಯಾಪಾರದಲ್ಲಿ ವಿಶೇಷ ಲಾಭ. ಕುಟುಂಬದೊಂದಿಗೆ ವಿಹಾರ. ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸುವುದು ಉತ್ತಮ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net