

ಮೇಷ: ಮನೆಯಲ್ಲಿ ಉಂಟಾಗುತ್ತಿರುವ ಕಿರಿಕಿರಿಗಳ ಬಗ್ಗೆ ಕೊರಗದೆಯೇ ಸಂಗಾತಿಯೊಡನೆ ಮುಕ್ತವಾಗಿ ಮಾತಾಡಿ. ಶುಭಸಂಖ್ಯೆ: 6
ವೃಷಭ: ವೃತ್ತಿಯಲ್ಲಿನ ಗೊಂದಲಗಳ ಪರಿಹಾರಕ್ಕೆ ಹಿರಿಯರ ಸಲಹೆ ಪಡೆಯಲು ಸಕಾಲ. ಕುಲದೇವರ ದಯೆ ಇದೆ. ಶುಭಸಂಖ್ಯೆ: 1
ಮಿಥುನ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಸತ್ಯವನ್ನು ಮರೆಯುತ್ತಲೇ ಇದ್ದೀರಿ. ಆದಷ್ಟು ಎಚ್ಚರ ಹೊಂದಿದ್ದರೆ ಒಳಿತಿದೆ. ಶುಭಸಂಖ್ಯೆ: 9
ಕಟಕ: ಹೊಸ ವ್ಯಾಪಾರದಿಂದ ನೀವು ಭಾವಿಸಿದಷ್ಟು ಲಾಭ ಬರದು. ಹಳೆಯದನ್ನೇ ಹೊಸದಾಗಿ ಮಾರ್ಪಡಿಸಿದರೆ ಲಾಭ. ಶುಭಸಂಖ್ಯೆ: 2
ಸಿಂಹ: ನೀವು ಧೈರ್ಯಶಾಲಿಗಳು ಎಂಬುದು ನಿಜ. ಆದರೆ ಕೆಲವು ವಿಚಾರಗಳಲ್ಲಿ ಧೈರ್ಯದ ಜತೆಗೆ ಸ್ವಲ್ಪ ಎಚ್ಚರಿಕೆಯೂ ಇರಲಿ. ಶುಭಸಂಖ್ಯೆ: 5
ಕನ್ಯಾ: ನಿಮ್ಮ ದಾರಿಯಲ್ಲಿ ಹೊಸ ಬೆಳವಣಿಗೆಗಳು ತೊಡಕಾಗಬಲ್ಲವು. ಉತ್ಸಾಹದಿಂದ ನುಗ್ಗಿದರೆ ಯಶಸ್ವಿಯಾಗುವಿರಿ. ಶುಭಸಂಖ್ಯೆ: 8
ತುಲಾ: ಯಾವುದೋ ಯೋಚನೆಗಳೊಂದಿಗೆ ಮನೆ ಬಿಟ್ಟರೂ ಅನಿರೀಕ್ಷಿತವಾದ ಹೊಸ ಯೋಜನೆ ಕೈಗೂಡಿಬರಲಿದೆ. ಶುಭಸಂಖ್ಯೆ: 3
ವೃಶ್ಚಿಕ: ಅನೇಕ ಪ್ರತಿಷ್ಠಿತರ ಜತೆಗೆ ಇರುವಂತಹ ನಿಮ್ಮ ಒಡನಾಟಗಳು ನೂತನ ಕಾರ್ಯಯೋಜನೆಗಳಿಗೆ ಅಡಿಗಲ್ಲಾಗಿ ಗೆಲ್ಲಿಸಬಲ್ಲವು. ಶುಭಸಂಖ್ಯೆ: 7
ಧನಸ್ಸು: ಆರಂಭಿಸಿದ ಕೆಲಸಕಾರ್ಯಗಳು ನಿರೀಕ್ಷೆಯನ್ನು ಮೀರಿ ಸುಲಭವಾಗಿ ನಡೆದುಹೋಗಲಿವೆ. ಮನೆಯಲ್ಲೂ ಶಾಂತಿ ಇದೆ. ಶುಭಸಂಖ್ಯೆ: 4
ಮಕರ: ರಸ್ತೆಯಲ್ಲಿ ಹೋಗುವಾಗ ಕೂಡ ಯೋಚನೆ ಮಾಡಬೇಡಿ. ಪ್ರಯಾಣದಲ್ಲಿ ಕೊಂಚ ಜಾಗ್ರತೆ ವಹಿಸುವುದು ಅಗತ್ಯ. ಶುಭಸಂಖ್ಯೆ: 6
ಕುಂಭ: ಒಂದು ಬಾರಿಗೆ ಒಂದು ಕೆಲಸ ಮಾತ್ರ ಮಾಡಿ ಮುಗಿಸಿ. ಎರಡು ದೋಣಿಗಳ ಪ್ರಯಾಣದಿಂದ ದಣಿವಾದೀತು. ಶುಭಸಂಖ್ಯೆ: 9
ಮೀನ: ತಲ್ಲಣಗಳಿಗೆ ಅಂಜದಿದ್ದರೆ ನಿಶ್ಚಿಂತೆಯಿಂದ ಇರಬಹುದು. ಶ್ರೀ ಅಂಬಾಭವಾನಿಯನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿ. ಶುಭಸಂಖ್ಯೆ: 1