

ಮೇಷ: ನಿಮ್ಮ ಭಾವಪ್ರಪಂಚದ ಆಳ - ಅಗಲಗಳನ್ನು ಅರಿಯುವ ಹೊಸ ವ್ಯಕ್ತಿಯ ಭೇಟಿ ಆಗಲಿದ್ದೀರಿ. ಉತ್ಸಾಹ ಕೂಡ ವೃದ್ಧಿಸಲಿದೆ. ಶುಭಸಂಖ್ಯೆ: 2
ವೃಷಭ: ಕಲ್ಲುಮುಳ್ಳುಗಳಿದ್ದರೂ ದಾಟಿಕೊಂಡು ಜಯಿಸುವಿರಿ. ದುರ್ಗಾಸ್ತುತಿ ಮಾಡಿ ನಿಲ್ಲದೆ ಮುಂದುಮುಂದಕ್ಕೆ ಸಾಗಿ. ಶುಭಸಂಖ್ಯೆ: 8
ಮಿಥುನ: ಹಳೆಯ ತಪ್ಪುಗಳನ್ನು ವಿಮರ್ಶಿಸಿಕೊಂಡರೆ ಉತ್ತಮ. ನೈಜ ಪ್ರೀತಿಯನ್ನು ನೀಡಬಲ್ಲ ಆಪ್ತರ ಒಡನಾಟ ಸಾಧ್ಯ. ಶುಭಸಂಖ್ಯೆ: 4
ಕಟಕ: ಕುಲದೇವರ ಅನುಗ್ರಹದಿಂದ ಧನಲಾಭಕ್ಕೆ ಹೊಸ ಪಥವೊಂದು ಕಂಡುಬರಲಿದೆ. ಆದರೆ ಜಡತೆಯನ್ನು ಬಿಡಿ. ಶುಭಸಂಖ್ಯೆ: 7
ಸಿಂಹ: ಅನಿಶ್ಚಿತ ಮಾನಸಿಕ ತಲ್ಲಣಗಳಿಂದ ಹೊರಕ್ಕೆ ಬರಲಿದ್ದೀರಿ. ಚಂದ್ರಶೇಖರನಾದ ಶಿವನನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 9
ಕನ್ಯಾ: ವ್ಯಾಪಾರ ವಹಿವಾಟುಗಳಲ್ಲಿ ಎಲ್ಲರನ್ನೂ ಅತಿಯಾಗಿ ನಂಬದಿರಿ. ಹಳೆಯ ಅನುಭವಗಳೇ ನಿಮ್ಮನ್ನು ಕಾಪಾಡಲಿವೆ. ಶುಭಸಂಖ್ಯೆ: 6
ತುಲಾ: ನಯವಂಚಕರು ನಿಮ್ಮನ್ನು ಮರುಳು ಮಾಡಿ ದೋಚುವ ಕೆಲಸ ನಡೆಸಬಹುದು. ಮೈಯ್ಯೆಲ್ಲ ಕಣ್ಣಾಗಿದ್ದರೆ ಕ್ಷೇಮ. ಶುಭಸಂಖ್ಯೆ: 3
ವೃಶ್ಚಿಕ: ಚಿತ್ರರಂಗದ ಬಗ್ಗೆ ನಿಮಗಿರುವ ಆಸಕ್ತಿಯಲ್ಲಿ ತಪ್ಪೇನಿಲ್ಲ. ಆದರೆ ನಿಮ್ಮ ಭವಿಷ್ಯಕ್ಕೆ ಅದೇ ದೊಡ್ಡ ಮುಳ್ಳಾಗದಿರಲಿ. ಶುಭಸಂಖ್ಯೆ: 5
ಧನುಸ್ಸು:ನಿಮ್ಮ ಸಜ್ಜನಿಕೆಯನ್ನು ಪರೀಕ್ಷಿಸುವ ಪ್ರಯತ್ನ ನಡೆಯಬಹುದು. ಹೆದರದಿರಿ. ಮಾತಾ ಭವಾನಿಯ ಶ್ರೀರಕ್ಷೆ ಇದೆ. ಶುಭಸಂಖ್ಯೆ: 1
ಮಕರ: ನಿಮಗಿಂತ ಜಾಣರಾದವರನ್ನು ಸಂಧಿಸುವ ಅವಕಾಶವಿದೆ. ಮುಗುಳ್ನಗೆಯಿಂದ ಅವರನ್ನು ಆದರಿಸಿದರೆ ಲಾಭವಾಗಲಿದೆ. ಶುಭಸಂಖ್ಯೆ: 2
ಕುಂಭ: ನಿಮ್ಮ ಯೋಜನೆಗೆ ಉತ್ತಮವಾದ ಪ್ರಾರಂಭಿಕ ಯಶಸ್ಸು ದೊರಕಲಿದೆ. ನಂಬಿದ ಕುಲದೈವದ ಅನುಗ್ರಹ ಕೂಡ ನಿಮಗಿದೆ. ಶುಭಸಂಖ್ಯೆ: 8
ಮೀನ: ಜಗತ್ತಿನ ಯಾವುದೋ ಮೂಲೆಯಿಂದ ಶುಭಕರವಾದ ಸಮಾಚಾರವೊಂದನ್ನು ಕೇಳುವ ಅವಕಾಶ ಒದಗಲಿದೆ. ಶುಭಸಂಖ್ಯೆ: 4