ಈ ರಾಶಿಯವರಿಗಿಂದು ಗಣ್ಯರ ಭೇಟಿಯಾಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಹೊಸ ಉದ್ಯಮದ ಯೋಚನೆ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ತಲೆನೋವಿನ ಸಮಸ್ಯೆಕಾಡಲಿದೆ. ಶುಭಸಂಖ್ಯೆ: 1

ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಲಾಭವಾಗುವುದು. ಸರ್ಕಾರಿ ಕೆಲಸದಲ್ಲಿ ಮಂದಗತಿ. ಅಧಿಕಾರಿಗಳೊಂದಿಗೆ ವಾದವಿವಾದ ಬೇಡ. ಶುಭಸಂಖ್ಯೆ: 9

ಮಿಥುನ: ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಿ. ಸರ್ಕಾರದಿಂದ ಧನಾದಾಯ. ವಿದೇಶಿ ವ್ಯಾಪಾರಸ್ಥರಿಗೆ ಶುಭದಾಯಕವಾದ ದಿನ. ಶುಭಸಂಖ್ಯೆ: 5

ಕಟಕ: ಸಾಲದ ಸೌಲಭ್ಯ ದೊರೆಯುತ್ತದೆ. ಕೆಲಸಗಳಿಗೆ ಆತ್ಮಸ್ಥೈರ್ಯ ಬೇಕು. ವಸ್ತುಗಳ ಸಂಗ್ರಹಣೆಯಲ್ಲಿ ಆಸಕ್ತಿ ತೋರಿಸುವಿರಿ. ಶುಭಸಂಖ್ಯೆ: 8

ಸಿಂಹ: ಗಣ್ಯರ ಭೇಟಿಯಾಗಲಿದೆ. ಅಪರಿಚಿತರ ಬಗ್ಗೆ ಎಚ್ಚರವಿರಲಿ. ವಿವಾದಗಳಿಂದ ದೂರವಿರಿ. ಮಾತನಾಡುವ ಮುನ್ನ ಯೋಚಿಸಿ. ಶುಭಸಂಖ್ಯೆ: 8

ಕನ್ಯಾ: ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಲಾಭವಿದೆ. ಮೂಳೆ ತೊಂದರೆ ಸಾಧ್ಯತೆ, ಎಚ್ಚರವಹಿಸಿ. ಶುಭಸಂಖ್ಯೆ: 3

ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಉತ್ತಮ ದಿನ. ಲೆಕ್ಕ ಪರೀಕ್ಷಕರಿಗೆ ಅಶುಭ. ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವಿರಲಿ. ಶುಭಸಂಖ್ಯೆ: 6

ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಗಾರರಿಗೆ ಲಾಭ. ಪಿತ್ರಾರ್ಜಿತ ಆಸ್ತಿ ದೊರೆಯಲಿದೆ. ಆಭರಣಗಳ ಕುಸುರಿ ಕಲಾವಿದರಿಗೆ ಬೇಡಿಕೆ. ಶುಭಸಂಖ್ಯೆ: 2

ಧನುಸ್ಸು: ಆಹಾರ ಪದಾರ್ಥ ವ್ಯಾಪಾರದಲ್ಲಿ ಅಭಿವೃದ್ಧಿ. ವಿದ್ಯುತ್ ಕೆಲಸಗಾರರು ಎಚ್ಚರದಿಂದಿರಿ. ಗೃಹ ನಿರ್ವಣಕ್ಕೆ ತೊಂದರೆ ಇರದು. ಶುಭಸಂಖ್ಯೆ: 7

ಮಕರ: ಮನಸ್ಸಿಗೆ ಚಿಂತೆ ಕಾಡುವುದು. ವಿವಾಹಕ್ಕೆ ಅಡಚಣೆ ಉಂಟಾಗಬಹುದು. ಸಾಲ ಮಾಡಬೇಕಾಗುವ ಪರಿಸ್ಥಿತಿ ಎದುರಾಗಬಹುದು. ಶುಭಸಂಖ್ಯೆ: 9

ಕುಂಭ: ಸುಖ ಭೋಜನ. ಅನಗತ್ಯ ತಿರುಗಾಟ ಮಾಡಬೇಕಾಗು ವುದು. ಕುಟುಂಬದಲ್ಲಿ ಸೌಖ್ಯ.ಕುಲದೇವರ ಆರಾಧನೆ ಮರೆಯಬೇಡಿ. ಶುಭಸಂಖ್ಯೆ:5

ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗಬಹುದು. ಶತ್ರುಭಯ ಕಾಡಬಹುದು. ವಿದ್ಯಾರ್ಥಿಗಳಲ್ಲಿ ಆತಂಕ ಕಾಡೀತು, ನಿರ್ಲಕ್ಷಿಸಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net