ಈ ರಾಶಿಯವರಿಗಿಂದು ಸಹೋದರರಿಂದ ಧನ ಸಹಾಯ ಒದಗಿಬರಲಿದೆ, ಶುಭವಾರ್ತೆ ಕೇಳುವಿರಿ: ನಿತ್ಯಭವಿಷ್ಯ

Daily Horoscope
Published on

ಮೇಷ: ಸಲಹೆಗಳನ್ನು ನಿರಾಕರಿಸದೇ ಸ್ವೀಕರಿಸಲು ಮನಸ್ಸು ಮಾಡಿ. ವಿದ್ಯಾರ್ಥಿಗಳಿಗೆ ಶುಭದಿನ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಶುಭಸಂಖ್ಯೆ: 3

ವೃಷಭ: ಶಿಕ್ಷಕರಿಗೆ ಪ್ರಶಸ್ತಿ, ಸನ್ಮಾನಗಳು ಲಭ್ಯ. ಸೇವಾಧಾರಿತ ವೃತ್ತಿಪರರಿಗೆ ಲಾಭ ಬರಲಿದೆ. ವಾಹನ ಮಾರಾಟಗಾರರಿಗೆ ನಿರೀಕ್ಷಿತ ಯಶ. ಶುಭಸಂಖ್ಯೆ: 7

ಮಿಥುನ: ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ. ಸಹೋದರರಿಂದ ಧನ ಸಹಾಯ ಒದಗಿಬರಲಿದೆ. ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 2

ಕಟಕ: ಸ್ಟಾಕ್ ಷೇರಿನ ವ್ಯವಹಾರದಲ್ಲಿ ಮಧ್ಯಮ ಪ್ರಗತಿ. ಜ್ವರದ ಸಮಸ್ಯೆ ಕಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಲಕ್ಷ್ಯ ಬೇಡ. ಶುಭಸಂಖ್ಯೆ: 4

ಸಿಂಹ: ಸ್ನೇಹಿತರೊಂದಿಗೆ ವಾಗ್ವಾದ. ತಂದೆಯ ಆರೋಗ್ಯದಲ್ಲಿ ಏರಿಳಿತ. ಹಿರಿಯ ಅಧಿಕಾರಿಗಳಿಂದ ಮೋಸವಾಗುವ ಸಂಭವ, ಎಚ್ಚರ. ಶುಭಸಂಖ್ಯೆ: 9

ಕನ್ಯಾ: ವಕೀಲರಿಗೆ ವೃತ್ತಿಯಲ್ಲಿ ಹಿನ್ನಡೆಯಾಗುವುದು. ನೀರು ಸರಬರಾಜು ವ್ಯಾಪಾರಿಗಳಿಗೆ ಹಾಗೂ ಹಾಲಿನ ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 6

ತುಲಾ: ವಿದ್ಯಾರ್ಥಿಗಳಿಗೆ ಅಶುಭ. ಏಕಾಗ್ರತೆ ಸಾಧಿಸಿ. ಮನಸ್ಸು ದುರ್ಬಲವಾದಂತೆ ಭಾಸವಾಗುತ್ತದೆ, ಧೃತಿಗೆಡಬೇಡಿ. ವ್ಯಾಪಾರದಲ್ಲಿ ಹಾನಿ. ಶುಭಸಂಖ್ಯೆ: 2

ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ ಸಿಗುವುದು. ಶಿಕ್ಷಕರಿಗೆ ವೇತನ ಸಂಬಂಧ ಶುಭ ಸುದ್ದಿ. ಹಣಕಾಸಿನ ವ್ಯವಹಾರಸ್ಥರಿಗೆ ಒತ್ತಡ. ಶುಭಸಂಖ್ಯೆ: 9

ಧನುಸ್ಸು: ವಾಹನ ಅಪಘಾತ ಸಂಭವ, ಹುಷಾರಾಗಿ ಇರಿ. ವಿವಾಹದಲ್ಲಿ ವಿವಾದ. ಪಾಲುದಾರಿಕೆಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 3

ಮಕರ: ಉನ್ನತ ಗಣಿ ಉದ್ಯಮದಾರರಿಗೆ ಮುನ್ನಡೆ. ವಿದ್ಯುತ್ ಕೆಲಸದವರಿಗೆ ಆದಾಯ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಥಾಳುವಿರಿ. ಶುಭಸಂಖ್ಯೆ: 4

ಕುಂಭ: ಹಿತಶತ್ರುಗಳ ಕುರಿತು ಎಚ್ಚರವಿರಲಿ. ಕಂಪ್ಯೂಟರ್ ವ್ಯಾಪಾರಿಗಳಿಗೆ ಶುಭ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ: 7

ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲ. ರಕ್ತದೊತ್ತಡದ ಸಮಸ್ಯೆ. ಉದ್ಯೋಗದಲ್ಲಿ ಪ್ರಯತ್ನದಿಂದ ಯಶ ದೊರೆತು ನೆಮ್ಮದಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net