ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಹಣಕಾಸಿನ ತೊಂದರೆಯಾಗಲಿದೆ

nity
Published on

ಮೇಷ: ಬಾಳ ಸಂಗಾತಿಯ ಸಲಹೆ ತೆಗೆದುಕೊಳ್ಳಲು ಮರೆಯಬೇಡಿ. ಅನಿರೀಕ್ಷಿತ ಅತಿಥಿಗಳ ಆಗಮನ. ಸಂತೋಷ ಕೂಟ. ಶುಭಸಂಖ್ಯೆ: 5

ವೃಷಭ: ಹಿತಶತ್ರುಗಳ ಉಪಟಳದಿಂದ ಬೇಸರ. ಸಹೋದರರಿಂದ ಸಹಾಯ ದೊರೆಯುವುದು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 3

ಮಿಥುನ: ಮಕ್ಕಳ ವಿಷಯದಲ್ಲಿ ಹೆಮ್ಮೆ. ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಶುಭಸಂಖ್ಯೆ: 2

ಕಟಕ: ಮನೆಗೆ ಸಂಬಂಧಿಸಿದ ಮಹತ್ವದ ನಿರ್ಧಾರಕ್ಕೆ ಚಾಲನೆ ದೊರೆಯಲಿದೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 7

ಸಿಂಹ: ಅಕ್ಕ ತಂಗಿಯರ ಬಾಂಧವ್ಯವನ್ನು ಹಠದಿಂದ ಹಾಳು ಮಾಡಿಕೊಳ್ಳಬೇಡಿ. ಅತಿಥಿಗಳನ್ನು ಆದರದಿಂದ ಸತ್ಕರಿಸಿ. ಶುಭಸಂಖ್ಯೆ: 9

ಕನ್ಯಾ: ಕುಟುಂಬದಲ್ಲಿ ಸಂಭ್ರಮ ಸಡಗರ. ಹಣದ ಸಮಸ್ಯೆ ಉಂಟಾಗಬಹುದು. ದಿನಾಂತ್ಯದಲ್ಲಿ ಧನಾಗಮ ಸಾಧ್ಯತೆ. ಶುಭಸಂಖ್ಯೆ: 6

ತುಲಾ: ನಿಮ್ಮ ಸಮಸ್ಯೆಗೆ ಸ್ನೇಹಿತರಿಂದ ಪರಿಹಾರ ದೊರೆತು ನೆಮ್ಮದಿ. ಕಲಾವಿದರಿಗೆ ವಿಶೇಷ ಸಂತೋಷದ ದಿನ. ಶುಭಸಂಖ್ಯೆ: 3

ವೃಶ್ಚಿಕ: ನ್ಯಾಯಾಲಯದ ಆದೇಶದ ನಿರೀಕ್ಷೆ, ನಿರಾಸೆ. ಅನಾರೋಗ್ಯದ ಸಮಸ್ಯೆ ಉಲ್ಬಣ. ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ. ಶುಭಸಂಖ್ಯೆ: 8

ಧನಸ್ಸು: ಮಾತಿನ ಬಗ್ಗೆ ನಿಗಾ ಇಡಿ. ಹಿತಶತ್ರುಗಳಿಂದ ಅಪಪ್ರಚಾರ. ದಿನಾಂತ್ಯದಲ್ಲಿ ಶುಭವಾರ್ತೆ ಬಂದು ಸಮಾಧಾನ. ಶುಭಸಂಖ್ಯೆ: 5

ಮಕರ: ಹಣದ ಅಪವ್ಯಯ. ನಿರೀಕ್ಷೆಯಲ್ಲಿ ಇದ್ದ ಹಣ ಬರದೇ ಇರಬಹುದು. ಅಭ್ಯಾಗತರ ಆಗಮನ. ಸಂತಸ. ಶುಭಸಂಖ್ಯೆ: 2

ಕುಂಭ: ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅಪಾಯ. ವ್ಯೆದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 9

ಮೀನ : ಅವಸರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ನೂರು ಸಲ ಸಾವಧಾನವಾಗಿ ಯೋಚಿಸಿ. ಅನಿರೀಕ್ಷಿತ ಧನಾಗಮ ಸಂತಸ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net