

ಮೇಷ: ಉದ್ಯೋಗದಲ್ಲಿ ಶ್ರಮ. ಧನಾರ್ಜನೆಗೆ ಕೊರತೆ ಇರದು. ಗೃಹೋಪಕರಣ ವಸ್ತು ಸಂಗ್ರಹದಲ್ಲಿ ಅನುಕೂಲ.ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 9
ವೃಷಭ: ಬರಹಗಾರರಿಗೆ, ಆಹಾರೋದ್ಯಮಿಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲ. ಸ್ಥಿರಾಸ್ತಿ ವಿಚಾರದಲ್ಲಿ ಬದಲಾವಣೆ. ಶುಭಸಂಖ್ಯೆ:1
ಮಿಥುನ: ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ. ಸ್ಥಿರವಾದ ಧನ ಸಂಪತ್ತು. ಆರೋಗ್ಯದತ್ತ ಗಮನಹರಿಸಿ. ಸಮಾಧಾನಚಿತ್ತರಾಗಿ. ಶುಭಸಂಖ್ಯೆ:2
ಕಟಕ: ಆರೋಗ್ಯದ ಬಗ್ಗೆ ಗಮನಿಸಿ. ದೈಹಿಕ ಶ್ರಮ. ಧನಾರ್ಜನೆ. ಮಾತನಾಡುವಾಗ ಚರ್ಚೆಗೆ ಅವಕಾಶ ನೀಡದಿರಿ. ಸಂಯಮವಿರಲಿ. ಶುಭಸಂಖ್ಯೆ: 8
ಸಿಂಹ: ಒತ್ತಡವಿದ್ದರೂ ಸಹೋದರ ಮತ್ತು ಕಾರ್ವಿುಕ ವರ್ಗದವರಿಂದ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7
ಕನ್ಯಾ: ದಾಕ್ಷಿಣ್ಯ ಸಲ್ಲದು. ಪಾಲುದಾರಿಕೆಯಲ್ಲಿ ಬದಲಾವಣೆ. ವಿದ್ಯಾರ್ಥಿಗಳಿಗೆ ಉತ್ತಮ ಫಲ. ದಾಂಪತ್ಯದಲ್ಲಿ ಪರಸ್ಪರ ಸಹಕಾರ ಅಗತ್ಯ. ಶುಭಸಂಖ್ಯೆ: 5
ತುಲಾ: ವ್ಯವಹಾರಗಳಲ್ಲಿ ತಲ್ಲೀನತೆ. ಮಿತ್ರರ ಭೇಟಿ. ದೀರ್ಘ ಪ್ರಯಾಣ ಸಂಭವ. ಪರರ ವಿಚಾರವನ್ನು ಆಲಿಸಿ, ನಿರ್ಣಯ ನಿಮ್ಮದಾಗಿರಲಿ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ಅಭಿವೃದ್ಧಿ. ನಿರೀಕ್ಷೆಗೂ ಮೀರಿ ಸಂಪಾದನೆ. ನಿಮ್ಮ ವಾಕ್ ಚತುರತೆಗೆ ಜನಾದಾರ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಶುಭಸಂಖ್ಯೆ: 7
ಧನುಸ್ಸು: ಬಂಧುಗಳ ಆಗಮನ. ಮಾತೃ ಸಮಾನರಿಂದ ಪೋ›ತ್ಸಾಹ. ವ್ಯವಹಾರದಲ್ಲಿ ಹಿರಿಯರ ಸಹಕಾರದಿಂದ ಪ್ರಗತಿ. ಧನ ಲಾಭ. ಶುಭಸಂಖ್ಯೆ: 3
ಮಕರ: ಆರೋಗ್ಯ ಅಲಕ್ಷಿಸಬೇಡಿ. ಪರಿಶ್ರಮದಿಂದ ಕೂಡಿದ ದಿನಚರಿ. ತಾಳ್ಮೆ ಅಗತ್ಯ. ಸಹೋದರ ಸಮಾನರಿಂದ ಸಹಕಾರ. ಶುಭಸಂಖ್ಯೆ: 6
ಕುಂಭ: ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ವರಮಾನ ಪ್ರಾಪ್ತಿ. ಅನ್ಯರನ್ನು ಅವಲಂಬಿಸದೇ ಸ್ವಪ್ರಯತ್ನದಲ್ಲಿ ಮುನ್ನಡೆಯಿರಿ. ಶುಭಸಂಖ್ಯೆ: 4
ಮೀನ: ಉತ್ತಮ ಆರೋಗ್ಯ. ಕೈಗೊಂಡ ಕಾರ್ಯ ಸಫಲವಾಗಿ ಮಾನಸಿಕ ತೃಪ್ತಿ. ಹೆಚ್ಚಿನ ವರಮಾನ. ದೇವತಾಕಾರ್ಯದಿಂದ ನೆಮ್ಮದಿ. ಶುಭಸಂಖ್ಯೆ: 1