

ಮೇಷ: ಕಚೇರಿಯಲ್ಲಿ ಅನವಶ್ಯಕ ಮನಸ್ತಾಪವಾದೀತು. ಮಕ್ಕಳಿಂದ ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆ ಸಾಧ್ಯತೆ. ಶುಭಸಂಖ್ಯೆ: 1
ವೃಷಭ: ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುವುದು. ಅನಾರೋಗ್ಯ ಸಮಸ್ಯೆ ಎದುರಾಗುವುದು, ಎಚ್ಚರ. ಸಾಲ ಮಾಡುವ ಆಲೋಚನೆ. ಶುಭಸಂಖ್ಯೆ: 2
ಮಿಥುನ: ಅಧಿಕ ಧನ ನಷ್ಟ ಉಂಟಾಗಬಹುದು. ಪ್ರೀತಿ ಪ್ರೇಮದ ವಿಷಯಗಳಿಂದ ಸಮಸ್ಯೆ. ಮಕ್ಕಳ ನಡವಳಿಕೆಯಿಂದ ಬೇಸರವಾದೀತು. ಶುಭಸಂಖ್ಯೆ: 3
ಕಟಕ: ಧನನಷ್ಟ. ಆತ್ಮಗೌರವಕ್ಕೆ ಧಕ್ಕೆ. ಆಸೆ-ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಸ್ಪರ್ಧಾತ್ಮಕ ವಿಷಯಗಳಿಗೆ ಸ್ವಲ್ಪ ಅಡೆತಡೆ. ಶುಭಸಂಖ್ಯೆ: 9
ಸಿಂಹ: ಮಾನಸಿಕ ವೇದನೆ ಉಂಟಾಗುವುದು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ: 6
ಕನ್ಯಾ: ಮಿತ್ರರಿಂದ ನಷ್ಟ. ಉದ್ಯೋಗ ಲಾಭ. ವಸ್ತ್ರಾಭರಣ ಖರೀದಿಗೆ ಹಣವ್ಯಯವಾಗುವುದು. ಉದ್ಯೋಗಸ್ಥ ಮಹಿಳೆಯರ ಬಡ್ತಿ. ಶುಭಸಂಖ್ಯೆ: 5
ತುಲಾ: ಉತ್ತಮ ಧನ ಸಂಪಾದನೆ. ಅನಿರೀಕ್ಷಿತವಾಗಿ ಅದೃಷ್ಟ ಬರುವುದು. ಗುಪ್ತನಿಧಿ ಲಭಿಸುವುದು. ಮರೆತುಹೋದ ಹಣ ದೊರಕುವುದು. ಶುಭಸಂಖ್ಯೆ: 7
ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ. ಕುತಂತ್ರದಿಂದ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು. ಸಾಲಬಾಧೆ. ಶುಭಸಂಖ್ಯೆ: 4
ಧನುಸ್ಸು: ಸಂಕಷ್ಟ ಅನುಭವಿಸುವಿರಿ. ಪ್ರೇಮದಿಂದ ಚಿಂತೆ. ಅಧಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಿ. ಶುಭಸಂಖ್ಯೆ: 2
ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವವು. ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಲಾಭವಾಗಿ ಬಹುದಿನದ ಕನಸು ನನಸು. ಶುಭಸಂಖ್ಯೆ: 2
ಕುಂಭ: ಮಕ್ಕಳ ನಡವಳಿಕೆಯಲ್ಲಿ ಬೇಸರ. ಮನೆಯ ವಾತಾವರಣದಲ್ಲಿ ಸಂತಸ. ಖರ್ಚು ನಿಯಂತ್ರಣಕ್ಕೆ ಹಿರಿಯರ ಸ್ಮರಣೆ ಮಾಡಿ. ಶುಭಸಂಖ್ಯೆ: 5
ಮೀನ: ಸಾಲ ಮಾಡುವ ಪರಿಸ್ಥಿತಿ ಬಂದರೂ ಭಯಬೇಡ. ಶತ್ರು ದಮನವಾಗುವುದು. ಅಧಿಕ ಖರ್ಚು. ಪ್ರಯಾಣದಲ್ಲಿ ಸ್ವಲ್ಪ ಅಡೆತಡೆ. ಶುಭಸಂಖ್ಯೆ: 9