ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಸ್ನೇಹಿತರ ಎದುರು ಅವಮಾನವಾಗಲಿದೆ..

Nitya-Bhavishya-vvani-1-2-1
Published on

ಮೇಷ: ಯಾರದ್ದೋ ತಪ್ಪಿಗೆ ನಿಮಗೆ ಅವಮಾನವಾದರೂ ಕೊನೆಗೆ ನಿಮ್ಮ ಬಗ್ಗೆ ಗೌರವ. ಸ್ನೇಹಿತನಿಗೆ ಕೊಟ್ಟ ಹಣ ಬರುತ್ತದೆ. ಶುಭಸಂಖ್ಯೆ: 2

ವೃಷಭ: ಕೈಗೆ ಬಂದಿದ್ದು ಬಾಯಿಗಿಲ್ಲ ಎಂಬ ಸ್ಥಿತಿ. ಪದೇಪದೆ ಬಾಧಿಸುವ ರೋಗ. ವೈದ್ಯರ ಸಲಹೆ ಸರಿಯಾಗಿ ಪಾಲಿಸಿ. ಶುಭಸಂಖ್ಯೆ: 5

ಮಿಥುನ: ಹಿತಶತ್ರುಗಳ ಭಯ. ತಾಯಿಯ ಮಾರ್ಗದರ್ಶನ. ಭೂ ವ್ಯವಹಾರದಲ್ಲಿ ಭ್ರಮನಿರಸನ. ಸುಬ್ರಹ್ಮಣ್ಯನನ್ನು ಭಜಿಸಿ. ಶುಭಸಂಖ್ಯೆ: 3

ಕಟಕ: ಸಹೋದರಿಯರಿಂದ ಸಹಾಯ, ಸಾಂತ್ವನ ದೊರೆಯಲಿದೆ. ಕುಟುಂಬದಲ್ಲಿ ಸಮೃದ್ಧಿ. ಅನಿರೀಕ್ಷಿತ ಧನಲಾಭ. ಶುಭಸಂಖ್ಯೆ: 2

ಸಿಂಹ: ಸ್ನೇಹಿತರ ಎದುರು ಅವಮಾನ. ಮನಸ್ಸಿನ ಚಂಚಲತೆಯಿಂದ ನಿರಾಸೆ. ಮಾತಿನಿಂದ ಶತ್ರು ಸೃಷ್ಟಿ. ಸುದರ್ಶನ ಮಂತ್ರ ಜಪಿಸಿ. ಶುಭಸಂಖ್ಯೆ: 7

ಕನ್ಯಾ: ಮನಸ್ಸಿನ ಪ್ರಶಾಂತತೆ ನೆಮ್ಮದಿ ಕೊಡಬಲ್ಲದು. ಕಾರ್ಯಗಳಲ್ಲಿ ಜಯ. ದಿನದ ಅಂತ್ಯದಲ್ಲಿ ಮಾನಸಿಕ ಕಿರಿಕಿರಿ. ಶುಭಸಂಖ್ಯೆ: 8

ತುಲಾ: ವಿವೇಚನೆ ಇಲ್ಲದೆ ಅನವಶ್ಯಕ ಖರ್ಚು. ಕೆಟ್ಟ ಚಟಗಳಿಂದ ಕುಟುಂಬದ ನೆಮ್ಮದಿಗೆ ಭಂಗ. ದೇವಿ ಸ್ತೋತ್ರ ಪಠಿಸಿ. ಶುಭಸಂಖ್ಯೆ: 4

ವೃಶ್ಚಿಕ: ಹಿತೈಷಿಗಳ ಸಮಾಗಮ. ಶತ್ರುಗಳಿಗೆ ಅವಮಾನ, ವ್ಯಥೆ. ಬಹಳ ದಿನಗಳಿಂದ ಬರಬೇಕಾಗಿದ್ದ ಹಣ ಬಂದು ಖುಷಿ. ಶುಭಸಂಖ್ಯೆ: 9

ಧನಸ್ಸು: ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆತ್ಮೀಯರ ಭೇಟಿ. ಕಚೇರಿಯಲ್ಲಿ ಪ್ರಶಂಸೆ. ನಾಳೆ ಮಾಡುವ ಕೆಲಸ ಇಂದೇ ಮಾಡಿ. ಶುಭಸಂಖ್ಯೆ: 7

ಮಕರ: ಪರಿಶ್ರಮ ಪಟ್ಟರೂ ಫಲಿತಾಂಶ ಶೂನ್ಯ. ನಿರಾಸೆ. ದಿನದ ಅಂತ್ಯದಲ್ಲಿ ಕೊಂಚ ಸಮಾಧಾನ. ನರಸಿಂಹನನ್ನು ಆರಾಧಿಸಿ. ಶುಭಸಂಖ್ಯೆ: 8

ಕುಂಭ: ಹಳೇ ನೋವು ಪುನರಾವರ್ತನೆ. ವೈದ್ಯರ ಸಲಹೆ ಪಾಲಿಸಿ. ಮಕ್ಕಳಿಂದ ಖರ್ಚು. ಕಚೇರಿ ಕೆಲಸ ವಿಫಲ. ಶನಿಯನ್ನು ಪೂಜಿಸಿ. ಶುಭಸಂಖ್ಯೆ: 6

ಮೀನ : ಸಂಗಾತಿಯಿಂದ ಸಾಂತ್ವನ ಸಹಕಾರ. ಬಿಡುವಿನ ವೇಳೆಯ ಸದ್ವಿನಿಯೋಗ ಮಾಡಿ.ಇಷ್ಟ ಬಂಧುಗಳ ಭೇಟಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net