

ಮೇಷ: ಎಲ್ಲ ಕೆಲಸಗಳು ಸರಾಗವಾಗಿ ಮುಗಿದು ಮನಸ್ಸಿಗೆ ನೆಮ್ಮದಿ. ವ್ಯಕ್ತಿಯೊಬ್ಬರ ಒತ್ತಡದಿಂದ ತೊಂದರೆಗೆ ಸಿಲುಕುವ ಸಾಧ್ಯತೆ. ಶುಭಸಂಖ್ಯೆ: 7
ವೃಷಭ: ನಿತ್ಯದ ಕಾರ್ಯಕ್ರಮಗಳಿಂದ ಬದಲಾವಣೆ ಕಾಣಲಿರುವಿರಿ. ಕೆಲಸದವರಿಂದ ಯಶಸ್ಸನ್ನು ಸಾಧಿಸಲಿದ್ದೀರಿ. ಉತ್ತಮ ಲಾಭ. ಶುಭಸಂಖ್ಯೆ: 3
ಮಿಥುನ: ಸ್ಥಿರ, ಚರಾಸ್ತಿಗಳ ಬಗ್ಗೆ ದಾಯಾದಿಗಳಲ್ಲಿನ ಭಿನ್ನಾಭಿಪ್ರಾಯ ಬಗೆಹರಿಯುವುದು. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಶುಭಸಂಖ್ಯೆ: 3
ಕಟಕ: ಆರ್ಥಿಕ ವಿಚಾರದಲ್ಲಿ ಚೇತರಿಕೆ. ಹೊಸ ಉದ್ಯೋಗ ದಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಮನೆದೇವರ ಆರಾಧನೆಯಿಂದ ಶುಭ. ಶುಭಸಂಖ್ಯೆ: 6
ಸಿಂಹ: ಉತ್ತಮ ಆರೋಗ್ಯವನ್ನು ಹೊಂದುವಿರಿ. ಮನೆಯವರೊಂದಿಗೆ ಉತ್ತಮ ಬಾಂಧವ್ಯ. ಗಮನ ಕೊಟ್ಟು ಕಾರ್ಯನಿರ್ವಹಿಸಿ. ಶುಭಸಂಖ್ಯೆ: 4
ಕನ್ಯಾ: ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗ ಗೋಚರಿಸಲಿದೆ. ಸ್ನೇಹಿತರ ಸಹಕಾರದಿಂದ ವ್ಯವಹಾರ ಉತ್ತಮ. ಶುಭಸಂಖ್ಯೆ: 7
ತುಲಾ: ಕಚೇರಿ ಕೆಲಸಗಳಲ್ಲಿ ಕಿರಿಕಿರಿ ಅನುಭವಿಸಬೇಕಾದೀತು. ಬರಹಗಾರರು, ಮುದ್ರಣಕಾರರಿಗೆ ಅವಕಾಶಗಳು ಒದಗಿಬರಲಿದೆ. ಶುಭಸಂಖ್ಯೆ: 9
ವೃಶ್ಚಿಕ: ಹೊಸ ಕೆಲಸದ ಚಿಂತನೆಯಲ್ಲಿ ಯಶಸ್ಸು. ಹೆಂಚು, ಕಬ್ಬಿಣ ಸಿಮೆಂಟ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಅತಿಯಾದ ಅಹಂ ಬೇಡ. ಶುಭಸಂಖ್ಯೆ: 1
ಧನುಸ್ಸು: ನನೆಗುದಿಯಲ್ಲಿದ್ದ ಕೆಲಸ ಪೂರ್ಣಗೊಳ್ಳಲಿದೆ. ನಿರುತ್ಸಾಹ ದೂರವಾಗುವುದರಿಂದ ಹೆಚ್ಚಿನ ಅವಕಾಶ ನಿಮ್ಮದಾಗುವುದು. ಶುಭಸಂಖ್ಯೆ: 3
ಮಕರ: ಪತ್ರಕರ್ತರಿಗೆ ಹೊಸ ಸುದ್ದಿ ಗೌರವ ತಂದುಕೊಡಲಿದೆ. ಆಶಾವಾದಕ್ಕೆ ಪುಷ್ಟಿ ದೊರೆಯಲಿದೆ. ಅವಕಾಶವನ್ನು ಬಳಸಿಕೊಳ್ಳಿ. ಶುಭಸಂಖ್ಯೆ: 8
ಕುಂಭ: ವ್ಯಾಪಾರಗಳಲ್ಲಿ ಲಾಭ. ಸಂಪನ್ಮೂಲ ಕ್ರೋಡೀಕರಣ ದಲ್ಲಿ ಯಶ. ಮನಃಶಾಂತಿಗಾಗಿ ದೇವಾಲಯಕ್ಕೆ ಭೇಟಿ. ವಿಫುಲ ಅವಕಾಶ. ಶುಭಸಂಖ್ಯೆ: 9
ಮೀನ: ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ. ಗುರುಹಿರಿಯರ ಆಶೀರ್ವಾದದಿಂದ ಹೆಚ್ಚಿನ ಕೆಲಸಗಳು ನೆರವೇರುವವು. ಶುಭಸಂಖ್ಯೆ: 7