

ಮೇಷ: ಪ್ರಶಾಂತ ಸ್ವಭಾವದವರಾದ ನೀವು ಪರರನ್ನು ಆಕರ್ಷಿಸುತ್ತೀರಿ. ಹಾಗೆಂದು ಯಾರ ಒತ್ತಡಕ್ಕೂ ಮಣಿಯದಿದ್ದರೆ ಒಳಿತಾಗಲಿದೆ. ಶುಭಸಂಖ್ಯೆ: 2
ವೃಷಭ: ಹೊಸ ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಬರುವ ದಟ್ಟ ಸಾಧ್ಯತೆ ಕಾಣುತ್ತಿದೆ. ಅವರಲ್ಲಿ ಸರಿಯಾದವರನ್ನೇ ಆರಿಸಿ. ಶುಭಸಂಖ್ಯೆ: 8
ಮಿಥುನ: ತಪ್ಪು ಆಯ್ಕೆಗಳು ತೊಂದರೆ ನೀಡಲಿವೆ. ಎಲ್ಲ ಕೋನಗಳಲ್ಲೂ ಅಧ್ಯಯನವನ್ನು ಮಾಡಿಯೇ ಜವಾಬ್ದಾರಿಯನ್ನು ಸ್ವೀಕರಿಸಿ. ಶುಭಸಂಖ್ಯೆ: 6
ಕಟಕ: ನಿಮ್ಮ ಕ್ರಿಯಾಶೀಲತೆಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಆದರೆ ಹಳತನ್ನು ಒಮ್ಮೆಲೇ ದೂರ ಸರಿಸದಿದ್ದರೆ ಕ್ಷೇಮವಿದೆ. ಶುಭಸಂಖ್ಯೆ: 9
ಸಿಂಹ: ನಿಮ್ಮ ಕಾರ್ಯವ್ಯಾಪ್ತಿಯು ದೊಡ್ಡ ಪರಿಧಿಯನ್ನು ಪಡೆಯಬಹುದು. ಅವಸರಪಡದೆ ಚಿಂತಿಸಲು ಅವಕಾಶವನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 7
ಕನ್ಯಾ: ಮಕ್ಕಳ ಬಗೆಗಿನ ವಿನೂತನವಾದಂಥ ವಿಚಾರಗಳು ತಲೆನೋವನ್ನು ಹೆಚ್ಚಿಸಬಹುದು. ಚಾಮುಂಡಿಯನ್ನು ಸ್ತುತಿಸಿ. ಶುಭಸಂಖ್ಯೆ: 1
ತುಲಾ: ಇತರರಿಗೆ ನಿಮ್ಮದೇ ಸಿದ್ಧಾಂತಗಳು ಸಮಂಜಸ ಅಲ್ಲ ಎನಿಸಬಹುದು. ಸದ್ಯಕ್ಕೆ ಚಾತುರ್ಯದ ನಡೆ ಅನಿವಾರ್ಯವಾಗಿದೆ. ಶುಭಸಂಖ್ಯೆ: 3
ವೃಶ್ಚಿಕ: ಕೌಟುಂಬಿಕ ಸಮಸ್ಯೆಗಳಿಂದಾಗಿ ಹಲವು ರೀತಿಯ ಕಗ್ಗಂಟುಗಳನ್ನು ಎದುರಿಸಬೇಕಾಗುತ್ತದೆ. ತುಸು ಸಹನೆ ನಿಮ್ಮೊಳಗೆ ಇದ್ದಿರಲಿ. ಶುಭಸಂಖ್ಯೆ: 5
ಧನುಸ್ಸು: ಹಟಮಾರಿತನದ ಗುಣವನ್ನು ಹೊಂದಿರುವ ನೀವು ಅದನ್ನು ನಿಯಂತ್ರಣದಲ್ಲಿ ಇಡಬೇಕು. ಮೃದುವಾಗಿ ವ್ಯವಹರಿಸಿ. ಶುಭಸಂಖ್ಯೆ: 4
ಮಕರ: ಅತಿಯಾದ ನಿರೀಕ್ಷೆಯನ್ನು ಹೊಂದಿದ್ದೀರಿ. ಭೇಟಿಯಾದವರೆಲ್ಲ ಸಹಕಾರ ನೀಡಲಾರರು. ನೆರವಾಗುವವರೂ ಸಿಗುತ್ತಾರೆ. ಶುಭಸಂಖ್ಯೆ: 2
ಕುಂಭ: ಏಕಾಂಗಿಯಾಗಿರುವವರಿಗೆ ಹೊಸ ಜೀವನದ ಸಿದ್ಧಿಗೆ ಭಾವನಾತ್ಮಕ ಸಂಬಂಧವೊಂದು ಒದಗಿಬರಲಿದೆ. ಜಾಣ್ಮೆ ಇರಲಿ. ಶುಭಸಂಖ್ಯೆ: 8
ಮೀನ: ಕೆಲವು ವ್ಯವಹಾರಗಳನ್ನು ಅಂತಿಮಗೊಳಿಸಲು ಮಾರ್ಗಸೂತ್ರಗಳು ಸಿಗಲಿವೆ. ಈ ಕುರಿತಾಗಿ ಸ್ನೇಹಿತರ ಜತೆ ಚಿಂತನೆ ನಡೆಸಿ. ಶುಭಸಂಖ್ಯೆ: 6