ಇಂದು ಈ ರಾಶಿಯವರ ಪ್ರತಿಭೆಗೆ ಹೊಳಪು ಕೊಡುವ ವೇದಿಕೆ ಲಭ್ಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಂತಾನ ಅಪೇಕ್ಷೆಗಳಿಗೆ ಶುಭ ಸುದ್ದಿ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಯಶ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 9

ವೃಷಭ: ಹೊಸ ಉದ್ದಿಮೆ ಪ್ರಾರಂಭಿಸಲು ನಿರ್ಧಾರ. ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 8

ಮಿಥುನ: ಉದ್ಯೋಗದಲ್ಲಿ ಸಮಸ್ಯೆಯಾದೀತು. ಸಾರ್ವಜನಿಕ ಜೀವನದಲ್ಲಿ ಅಧಿಕಾರ ಪ್ರಾಪ್ತಿ. ಮಕ್ಕಳ ಆರೋಗ್ಯದ ಬಗ್ಗೆ ಹುಷಾರು. ಶುಭಸಂಖ್ಯೆ: 1

ಕಟಕ: ವ್ಯಾಪಾರಸ್ಥರಿಗೆ ವಸ್ತುಗಳ ನಷ್ಟ ಸಾಧ್ಯತೆ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಹಾಯ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2

ಸಿಂಹ: ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಹಿರಿಯರ ಸಲಹೆ ಸೂಕ್ತ. ಅನಾರೋಗ್ಯದಿಂದ ಕ್ಷೋಭೆ. ಪಿತ್ರಾರ್ಜಿತ ಮೂಲದಿಂದ ಲಾಭ. ಶುಭಸಂಖ್ಯೆ: 9

ಕನ್ಯಾ: ಕಚೇರಿಯಲ್ಲಿ ಆತ್ಮಾಭಿಮಾನಕ್ಕೆ ಧಕ್ಕೆ ತರುವ ಘಟನೆ. ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿ ವಿಚಾರದಲ್ಲಿ ಕಿರಿಕಿರಿ. ಶುಭಸಂಖ್ಯೆ: 3

ತುಲಾ: ಹಿತಶತ್ರುಗಳಿಂದ ಕಚೇರಿಯಲ್ಲಿ ಉಪಟಳ. ಸಾಹಿತಿಗಳಿಗೆ ವಿಶೇಷ ಪೋ›ತ್ಸಾಹ. ಶೈಕ್ಷಣಿಕ ರಂಗದಲ್ಲಿ ಇರುವವರಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 6

ವೃಶ್ಚಿಕ: ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ. ಮಾತಿನಲ್ಲಿ ಮಿತಿ ಇರಲಿ. ಅನಾರೋಗ್ಯದಲ್ಲಿ ಚೇತರಿಕೆ. ನಿವೇಶನ ಖರೀದಿ ಸಾಧ್ಯತೆ. ಶುಭಸಂಖ್ಯೆ: 8

ಧನುಸ್ಸು: ಊರಿನಿಂದ ಅಶುಭ ವಾರ್ತೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ತಾಳ್ಮೆಯಿರಲಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2

ಮಕರ: ಸಕಾರಾತ್ಮಕ ಘಟನೆಗಳಿಂದ ಬದಲಾವಣೆ. ಕಚೇರಿಯಲ್ಲಿ ಸಮಸ್ಯೆ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಸಾಧ್ಯತೆ. ಶುಭಸಂಖ್ಯೆ: 1

ಕುಂಭ: ಸಹವರ್ತಿಗಳೊಂದಿಗೆ ವಿಹಾರ. ನ್ಯಾಯಾಲದ ನಿಮ್ಮ ಪರವಾಗಿ ತೀರ್ಪ. ನಿಮ್ಮ ಪ್ರತಿಭೆಗೆ ಹೊಳಪು ಕೊಡುವ ವೇದಿಕೆ ಲಭ್ಯ. ಶುಭಸಂಖ್ಯೆ: 4

ಮೀನ: ದೂರಪ್ರಯಾಣ ಸಾಧ್ಯತೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ನಟರಿಗೆ ವಿಶೇಷ ದಿನ. ಆರೋಗ್ಯ ಸಮಸ್ಯೆ ಕಾಡೀತು. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net