ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ವಿರಸ..

nity
Published on

ಮೇಷ: ವಿಶೇಷ ಧನಲಾಭವಾಗಲಿದೆ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ: 3

ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ ಆಗಬಹುದು. ಶುಭಸಂಖ್ಯೆ: 5

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ. ಮನಸ್ಸಿನ ಚಂಚಲತೆಯೇ ಅವನತಿಗೆ ಕಾರಣವಾದೀತು. ಏಕಾಗ್ರತೆಗೆ ಧ್ಯಾನ ಮಾಡಿ. ಶುಭಸಂಖ್ಯೆ: 7

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತು ಪ್ರಾಪ್ತಿಯಾಗುವ ಸಾಧ್ಯತೆ. ಶುಭಸಂಖ್ಯೆ: 8

ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗ ವಿಚಾರದಲ್ಲಿ ಅವಮಾನ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ವಿಘ್ನ, ಬೇಸರ. ಶುಭಸಂಖ್ಯೆ: 2

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿಯಾಗುವುದು. ಶುಭಸಂಖ್ಯೆ:1

ತುಲಾ: ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆ. ಸಮಾಧಾನದಿಂದಿರಿ. ಶುಭಸಂಖ್ಯೆ: 9

ವೃಶ್ಚಿಕ: ಕೇತು ರಾಶಿಗತನಾದಾಗ ಎಲ್ಲ ಕೆಲಸಗಳಲ್ಲಿ ವಿಳಂಬವಾದರೂ ಅಂತ್ಯದಲ್ಲಿ ಜಯ- ಕಾರ್ಯ ಸಿದ್ಧಿ ನಿಮ್ಮದೇ. ಚಿಂತೆಬಿಡಿ. ಶುಭಸಂಖ್ಯೆ: 7

ಧನಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 6

ಮಕರ: ದೈಹಿಕ ಶ್ರಮ. ಲಿತಾಂಶದಲ್ಲಿ ನಿರಾಸೆ ಕಾಡೀತು. ಒತ್ತಡದ ಜೀವನ. ಹೊಟ್ಟೆಗೆ ಸಂಬಂಧಪಟ್ಟಂತೆ ನೋವು. ಶುಭಸಂಖ್ಯೆ:7

ಕುಂಭ: ಶತ್ರುಗಳಿಂದ ತೊಂದರೆ. ಯಾವುದರಲ್ಲೂ ದೃಢತೆ ಇಲ್ಲ. ಆಹಾರ ಸೇವಿಸುವಾಗ ಎಚ್ಚರ, ಮಿತಿ ಇರಲಿ. ಶುಭಸಂಖ್ಯೆ:5

ಮೀನ : ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನದಿಂದ ಖುಷಿ. ಮಾತ್ರವಲ್ಲ, ಧನಲಾಭವೂ ಆಗಲಿದೆ. ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net