

ಮೇಷ: ಆರೋಗ್ಯದ ಬಗ್ಗೆ ಅಸಡ್ಡೆ ಬೇಡ. ಯಾರನ್ನು ಕೂಡ ನೋಯಿಸಬಾರದು ಎಂದುಕೊಂಡರೂ ಆಪ್ತರಿಗೆ ಬೇಸರವಾದೀತು. ಅದೃಷ್ಟಸಂಖ್ಯೆ: 9
ವೃಷಭ: ಪ್ರಮುಖ ಕೆಲಸಗಳನ್ನು ಬಿಟ್ಟು ಬಹಳಕಾಲದ ತನಕ ಯಾರಿಗಾಗಿಯೋ ಕಾಯಬೇಕಾಗುತ್ತದೆ. ಕಾದು ಕಾದು ಸುಸ್ತಾಗುತ್ತೀರಿ. ಅದೃಷ್ಟಸಂಖ್ಯೆ: 1
ಮಿಥುನ: ಇತರರ ಮೇಲೆ ನಿಮ್ಮ ನಂಬಿಕೆಯನ್ನು ಹೇರಲು ಹೋದರೆ ಎಡವಟ್ಟಾಗಬಹುದು. ತಾಳ್ಮೆಯಿಂದ ಲಾಭವಿದೆ. ಅದೃಷ್ಟಸಂಖ್ಯೆ: 3
ಕಟಕ: ನಿಮ್ಮ ಸ್ವಾತಂತ್ರ್ಯ ಕಂಡು ಇತರರಿಗೆ ಹೊಟ್ಟೆಕಿಚ್ಚು ಉಂಟಾಗಬಹುದು. ಆದರೆ ಮಾತಿನಲ್ಲಿ ಹಿಡಿತವಿರಲಿ. ಅದೃಷ್ಟಸಂಖ್ಯೆ: 7
ಸಿಂಹ: ನಿಮ್ಮ ಯೋಚನಾವಿಧಾನವನ್ನು ಪುನಃ ವಿಮಶಿಸಿದರೆ ಒಳ್ಳೆಯದು. ದೊಡ್ಡ ಪ್ರಮಾಣದ ಹೂಡಿಕೆ ಬೇಡ. ಅದೃಷ್ಟಸಂಖ್ಯೆ: 3
ಕನ್ಯಾ: ಸದ್ಯದಲ್ಲೇ ದೊಡ್ಡ ಕೆಲಸ ಸಿಗುವಂತಹ ಅವಕಾಶವಿದೆ. ಸಿಕ್ಕಿದಲ್ಲಿ ಲಾಭವಿದೆ. ದೇವರ ಮೇಲೆ ಭಾರ ಹಾಕಿ ಯತ್ನಿಸಿ. ಅದೃಷ್ಟಸಂಖ್ಯೆ: 2
ತುಲಾ: ಸ್ವಲ್ಪ ಹಿನ್ನಡೆ ಇದೆ. ಕೆಲಸ ಮಾಡಿಕೊಡುತ್ತೇವೆ ಎಂದವರು ಹಿಂದೇಟು ಹಾಕಬಹುದು. ದೇವತಾರಾಧನೆ ಮಾಡಿ. ಅದೃಷ್ಟಸಂಖ್ಯೆ: 5
ವೃಶ್ಚಿಕ: ಅನಿರೀಕ್ಷಿತ ಧನಾಗಮನವಾದರೂ ನಿಮ್ಮ ಅತಿಯಾಸೆ ಪೂರೈಸುವಷ್ಟು ಹಣ ಸಿಗದು. ಕಾಲುನೋವು ಕಾಡುತ್ತದೆ. ಅದೃಷ್ಟಸಂಖ್ಯೆ: 4
ಧನಸ್ಸು: ಮಾಡಿಕೊಡಬೇಕಾದ ಕೆಲಸಗಳು ಹೆಚ್ಚಾಗಿವೆ. ದೈಹಿಕ ಸಾಮರ್ಥ್ಯದ ಮಿತಿಯನ್ನು ಅರಿತು ಕೆಲಸ ಮಾಡಿದರೆ ಕ್ಷೇಮ. ಅದೃಷ್ಟಸಂಖ್ಯೆ: 9
ಮಕರ: ಸ್ನೇಹಿತ ಅಥವಾ ಸಂಗಾತಿಯ ವಿರೋಧದಿಂದ ಕೈಗೆ ಬಂದ ಅವಕಾಶವನ್ನು ಬಿಡಬೇಕಾಗುತ್ತದೆ. ವೃಥಾ ಹಣ ಖರ್ಚಾದೀತು. ಅದೃಷ್ಟಸಂಖ್ಯೆ: 6
ಕುಂಭ: ಉದ್ಯೋಗಸ್ಥಳದಲ್ಲಿ ಬದಲಾವಣೆ. ಕೋಪ ನಿಮ್ಮ ದೊಡ್ಡ ಶತ್ರು. ಆಡುವ ಮಾತುಗಳ ಬಗ್ಗೆ ಸ್ವಲ್ಪ ಎಚ್ಚರ ಇರಲಿ. ಅದೃಷ್ಟಸಂಖ್ಯೆ: 1
ಮೀನ: ಸಹೋದರರಿಗಾಗಿ ಓಡಾಡಬೇಕಾಗುತ್ತದೆ. ಅನಿವಾರ್ಯವಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಅದೃಷ್ಟಸಂಖ್ಯೆ: 3