

ಮೇಷ: ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಮುಖ ತಿರುವು. ನಿರ್ಧಾರ ಕೈಗೊಳ್ಳುವ ಮುನ್ನ ಕುಟುಂಬದೊಂದಿಗೆ ಸಮಾಲೋಚಿಸಿ. ಶುಭಸಂಖ್ಯೆ: 7
ವೃಷಭ: ತಂದೆಯ ಆರೋಗ್ಯದಲ್ಲಿ ಏರುಪೇರು. ಹಣಕಾಸಿನ ಸಮಸ್ಯೆ ಕಾಡಬಹುದು. ಹಿರಿಯ ಅಧಿಕಾರಿಗಳಿಂದ ಒತ್ತಡ ಬಂದೀತು. ಶುಭಸಂಖ್ಯೆ: 8
ಮಿಥುನ: ಭವಿಷ್ಯದ ಚಿಂತೆ ಕಾಡಬಹುದು. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆ ದೊರೆಯಲಿದೆ. ಚಿನ್ನದ ವ್ಯಾಪಾರಿಗಳಿಗೆ ಶುಭದಿನ. ಶುಭಸಂಖ್ಯೆ: 9
ಕಟಕ: ಉನ್ನತ ಶಿಕ್ಷಣದ ಕನಸು ನನಸು. ದಿನಸಿ ವ್ಯಾಪಾರಿಗಳಿಗೆ ಧನ ನಷ್ಟ. ಖಾಸಗಿ ಕ್ಷೇತ್ರದಲ್ಲಿ ಕಾರ್ಯಸಿದ್ದಿ. ಭೂ ವಿವಾದಕ್ಕೆ ಅಂತ್ಯ. ಶುಭಸಂಖ್ಯೆ: 3
ಸಿಂಹ: ಮಕ್ಕಳ ಕಡೆ ಗಮನ ಕೊಡಿ. ಕಾರ್ಯದೊತ್ತಡದಿಂದ ತಾಳ್ಮೆ ಕಳೆದುಕೊಳ್ಳಬೇಡಿ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 4
ಕನ್ಯಾ: ಅವಿವಾಹಿತರಿಗೆ ಶುಭದಿನ. ಕಾರ್ಯ ಸಾಧನೆಗೆ ಹಿತ ಶತ್ರುಗಳಿಂದ ಅಪಸ್ವರ. ಸಂಗಾತಿಯ ಸಲಹೆಯನ್ನು ಪಾಲಿಸಿ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 5
ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೆ ಅವಕಾಶ ಬೇಡ. ಮಗಳ ಭವಿಷ್ಯದ ಚಿಂತೆ. ಪಾಲುದಾರರಲ್ಲಿ ವೈಮನಸ್ಯ. ಶುಭಸಂಖ್ಯೆ: 7
ವೃಶ್ಚಿಕ: ಸಹೋದರರೊಂದಿಗೆ ಮನಸ್ತಾಪ. ಹಿರಿಯರಿಂದ ಸೂಕ್ತ ಸಮಯದಲ್ಲಿ ಮಾರ್ಗದರ್ಶನ. ಸ್ನೇಹಿತನಿಂದ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 8
ಧನುಸ್ಸು: ಮನೆಯಲ್ಲಿ ಸಂತೋಷದ ವಾತಾವರಣ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಮಕರ: ಪ್ರಮುಖ ವಿಷಯದಲ್ಲಿ ಗೊಂದಲದ ನಿರ್ಧಾರ ಕೈಗೊಳ್ಳುವ ಸ್ಥಿತಿ. ಉನ್ನತ ವಿದ್ಯಾಭ್ಯಾಸದ ಅವಕಾಶ ದೊರೆತು ಸಂತಸದ ವಾತಾವರಣ. ಶುಭಸಂಖ್ಯೆ: 2
ಕುಂಭ: ಕುಟುಂಬದಲ್ಲಿ ವಿಶೇಷ ಗೌರವ ಪ್ರಾಪ್ತಿ. ಸಂಗಾತಿ ಯಿಂದ ಹಣದ ನಷ್ಟ. ತಂದೆಯೊಂದಿಗೆ ವೈಮನಸ್ಯ. ಸಾರ್ವಜನಿಕ ರಂಗದಲ್ಲಿ ಗೌರವ. ಶುಭಸಂಖ್ಯೆ: 4
ಮೀನ: ಕಚೇರಿಯಲ್ಲಿ ಅಸಹನೆಯಿಂದ ವರ್ತಿಸಬೇಡಿ. ಆತ್ಮಾಭಿಮಾನ ಬೆಳೆಸಿಕೊಳ್ಳಿ. ಉದ್ಯೋಗ ಬದಲಾವಣೆ ಸಾಧ್ಯತೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1