

ಮೇಷ: ಪಾಲುದಾರಿಕೆಯಲ್ಲಿ ಅನುಕೂಲ ಒದಗಿ ಬರಲಿದೆ. ಅನಾರೋಗ್ಯ ಸಮಸ್ಯೆ ಕಾಡಬಹುದು. ಮಾತನಾಡುವಾಗ ಎಚ್ಚರವಿರಲಿ. ಶುಭಸಂಖ್ಯೆ: 8
ವೃಷಭ: ಸ್ವಯಂಕೃತ ಅಪರಾಧದಿಂದ ಸಮಸ್ಯೆ ಸೃಷ್ಟಿಯಾಗಬಹುದು. ವ್ಯವಹಾರದಲ್ಲಿ ಅನುಕೂಲ. ಮಕ್ಕಳಿಂದ ಸಂಕಷ್ಟ ಸಾಧ್ಯತೆ. ಶುಭಸಂಖ್ಯೆ: 6
ಮಿಥುನ: ಸಾಲದ ನೆರವು ದೊರೆಯಲಿದೆ. ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ. ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 3
ಕಟಕ: ಸಾಲದ ಚಿಂತೆ ಕಾಡಲಿದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ವೈದ್ಯರ ಸಲಹೆ ಪಡೆಯಿರಿ. ಮಿತ್ರರಿಂದ ಅನುಕೂಲವಾಗಲಿದೆ. ಶುಭಸಂಖ್ಯೆ: 4
ಸಿಂಹ: ಉದ್ಯೋಗ ಲಾಭವಾಗುವ ಸಾಧ್ಯತೆ. ನೆಮ್ಮದಿ ಭಂಗವಾಗಲಿದೆ. ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ ಮೂಡುವ ಸಂಭವ. ಶುಭಸಂಖ್ಯೆ: 6
ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ. ಶುಭಸಂಖ್ಯೆ: 7
ತುಲಾ: ಉದ್ಯೋಗ ಬದಲಾವಣೆ ಸಾಧ್ಯತೆ, ಸ್ಥಳ ಬದಲಾವಣೆಯಿಂದ ಆರ್ಥಿಕ ಅನುಕೂಲ. ಮಾತಿನಿಂದ ಸಮಸ್ಯೆಯಾದೀತು. ಶುಭಸಂಖ್ಯೆ:1
ವೃಶ್ಚಿಕ: ತಂದೆಯಿಂದ ಧನಾಗಮನವಾದರೂ ಸಮಾಧಾನವಿಲ್ಲ. ಆರೋಗ್ಯದಲ್ಲಿ ಏರುಪೇರು. ಆರ್ಥಿಕ ಪರಿಸ್ಥಿತಿ ಡೋಲಾಯಮಾನ. ಶುಭಸಂಖ್ಯೆ: 6
ಧನುಸ್ಸು: ನಿಮ್ಮ ಪಾಲಿಗೆ ಸ್ವಲ್ಪ ಅನುಕೂಲಕರ ದಿವಸವಾದರೂ ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಕಾಡಬಹುದು. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 2
ಮಕರ: ಪಾಲುದಾರಿಕೆಯಲ್ಲಿ ನಷ್ಟವಾಗಬಹುದು. ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಅಪಾಯ. ಉದ್ಯೋಗದಲ್ಲಿ ಒತ್ತಡ. ನಿದ್ರಾಭಂಗ. ಶುಭಸಂಖ್ಯೆ: 5
ಕುಂಭ: ಸಾಲದ ಸಹಾಯ ಲಭಿಸುವುದು. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಉತ್ತಮ ಅವಕಾಶ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ:1
ಮೀನ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವ ಸಾಧ್ಯತೆ. ಹಣಕಾಸು ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 9