

ಮೇಷ: ನಿಮ್ಮ ನಿರೀಕ್ಷೆಗಳು ಹುಸಿ ಆಗಬಹುದು. ಕೆಲಸದ ಕ್ಷೇತ್ರದಲ್ಲಿ ಒತ್ತಡ ಹೆಚ್ಚುವುದರಿಂದ ಆಯಾಸ. ಗುರುವನ್ನು ಆರಾಧಿಸಿ. ಶುಭಸಂಖ್ಯೆ: 2
ವೃಷಭ: ಜನ್ಮದ ರಾಹು ಆರೋಗ್ಯ ಸಮಸ್ಯೆಗೆ ಕಾರಣ ಆಗುತ್ತಾನೆ. ಮಾನಸಿಕ ತಳಮಳ. ಅಶಾಂತಿ. ದೇವಿಯನ್ನು ಪೂಜಿಸಿ. ಶುಭಸಂಖ್ಯೆ: 8
ಮಿಥುನ: ಮಕ್ಕಳಿಂದ ಸಿಹಿ ಸುದ್ದಿ. ಹಲವು ದಿನಗಳಿಂದ ಪರಿಹಾರ ಕಾಣದೇ ಇದ್ದ ಭೂ ವಿವಾದ ಸುಖಾಂತ್ಯವಾಗಿ ನೆಮ್ಮದಿ. ಶುಭಸಂಖ್ಯೆ: 3
ಕಟಕ: ಬಂಧುಗಳ ಅನಿರೀಕ್ಷಿತ ಆಗಮನ. ಮನೆಯಲ್ಲಿ ಸಡಗರ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಾಯಿಯ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 4
ಸಿಂಹ: ನಿಮ್ಮ ದುಶ್ಚಟಗಳಿಂದ ಮನೆಯಲ್ಲಿ ಸಕಾರಣ ಅಸಮಾಧಾನ. ಸಹೋದ್ಯೋಗಿಗಳಿಂದ ಸಾಂತ್ವನ. ಸ್ಕಂದನನ್ನು ಪೂಜಿಸಿ. ಶುಭಸಂಖ್ಯೆ: 9
ಕನ್ಯಾ: ನಿಮ್ಮ ಧೋರಣೆ ಅವಮಾನಕ್ಕೆ ಕಾರಣ ಆಗಬಹುದು. ಸಮಾಧಾನದಿಂದ ಇರಿ. ಆರೋಗ್ಯದ ಕಡೆ ಗಮನ ಇರಲಿ. ಶುಭಸಂಖ್ಯೆ: 6
ತುಲಾ: ಸ್ನೇಹಿತರ ಸಹಕಾರ ಒದಗಿ ಬರಲಿದೆ. ಭವಿಷ್ಯದ ಉನ್ನತಿಯ ಸಾಕಾರವಾಗಿ ಸಂತಸ. ದಿನಾಂತ್ಯದಲ್ಲಿ ನಿರಾಸೆ. ಶುಭಸಂಖ್ಯೆ: 3
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಪುನರ್ ಚಾಲನೆ. ಗಣೇಶನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7
ಧನಸ್ಸು: ಸಾಮಾಜಿಕ ಜೀವನದಲ್ಲಿ ಸಹನೆ ಇರಲಿ. ದುಡುಕು ಸ್ವಭಾವ ಬಿಡಿ. ಅದುವೇ ನಿಮ್ಮ ಅವನತಿಗೆ ಕಾರಣವಾಗಬಹುದು. ಶುಭಸಂಖ್ಯೆ: 1
ಮಕರ: ಉದ್ಯೋಗ ಅರಸುವವರಿಗೆ ಕಾರ್ಯ ಸಿದ್ಧಿ. ವ್ಯಾಪಾರದಲ್ಲಿ ನಷ್ಟವಾಗಬಹುದು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 2
ಕುಂಭ: ಸಂಬಂಧವಿಲ್ಲದ ವಿಷಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಅನವಶ್ಯಕ ಖರ್ಚು. ಈಶ್ವರನನ್ನು ಪೂಜಿಸಿ. ಶುಭಸಂಖ್ಯೆ: 6
ಮೀನ : ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಕಚೇರಿಯಲ್ಲಿ ಹೊಸ ಅನುಭವ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 8