ಈ ರಾಶಿಯವರು ಇಂದು ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧನಲಾಭ. ಆತ್ಮೀಯರ ಭೇಟಿಯಿಂದ ಸಂತಸ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನವಾಗಿ ಸಮಾಧಾನ. ಶುಭಸಂಖ್ಯೆ: 6

ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಡಬೇಕಾದೀತು. ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ: 6

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ. ಮನಸ್ಸಿನ ಚಂಚಲತೆಯೇ ನಿಮ್ಮ ಅವನತಿಗೆ ಕಾರಣವಾದೀತು. ಏಕಾಗ್ರತೆ ಸಾಧಿಸಿ. ಶುಭಸಂಖ್ಯೆ: 1

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತುಲಾಭವಾಗುವ ಸಾಧ್ಯತೆ. ಶುಭಸಂಖ್ಯೆ: 6

ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗ ವಿಚಾರದಲ್ಲಿ ಅವ ಮಾನ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ವಿಘ್ನ ತಲೆದೋರಿ ಬೇಸರ. ಶುಭಸಂಖ್ಯೆ: 5

ಕನ್ಯಾ: ಉತ್ತಮ ಭೋಜನ. ಅನಿರೀಕ್ಷಿತ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿ. ಉಭಯ ಕುಶಲೋಪರಿ. ಶುಭಸಂಖ್ಯೆ: 2

ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ ತಲೆದೋರಬಹುದು. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ: 7

ವೃಶ್ಚಿಕ: ಎಲ್ಲ ಕೆಲಸಗಳಲ್ಲಿ ವಿಲಂಬವಾದರೂ ಅಂತ್ಯದಲ್ಲಿ ಜಯ ನಿಮ್ಮದೇ. ಸಾರ್ವಜನಿಕ ರಂಗದಲ್ಲಿ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 3

ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 4

ಮಕರ: ದೈಹಿಕ ಶ್ರಮ. ನಿರೀಕ್ಷಿತ ವಿಷಯದಲ್ಲಿ ನಿರಾಸೆ. ಒತ್ತಡದ ಜೀವನ. ಆಹಾರದ ವ್ಯತ್ಯಾಸದಿಂದ ಉದರ ಸಂಬಂಧಿ ವ್ಯಾಧಿ. ಶುಭಸಂಖ್ಯೆ: 9

ಕುಂಭ: ಶತ್ರುಗಳಿಂದ ತೊಂದರೆ ಉಂಟಾದೀತು. ಯಾವು ದರಲ್ಲೂ ದೃಢತೆ ಇಲ್ಲ. ಆಹಾರ ಸೇವಿಸುವಾಗ ಎಚ್ಚರ ಹಾಗೂ ಮಿತಿ ಇರಲಿ. ಶುಭಸಂಖ್ಯೆ: 3

ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಧನಲಾಭವೂ ಆಗಲಿದೆ. ದೇಹಾರೋಗ್ಯ ಕಾಪಾಡಿಕೊಳ್ಳಲು ಯೋಗ, ಧ್ಯಾನ ರೂಢಿಸಿಕೊಳ್ಳಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net