ಈ ರಾಶಿಯವರ ಮನಸ್ಸಿನಲ್ಲಿ ಕಾಡುತ್ತಿದ್ದ ಭಯ-ಭೀತಿ ಇಂದು ನಿವಾರಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸಣ್ಣಪುಟ್ಟ ವಿಷಯಗಳಿಂದ ಕಲಹ, ಮಕ್ಕಳಿಂದ ಶುಭಸುದ್ದಿ. ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಖರ್ಚು, ಸಾಲಬಾಧೆ. ಶುಭಸಂಖ್ಯೆ: 5

ವೃಷಭ: ಭೂಮಿ ಕೊಳ್ಳುವಿಕೆ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಮನಕ್ಲೇಷ. ಸ್ತ್ರೀ ಲಾಭ. ತಾಯಿಯ ಕಡೆಯಿಂದ ನೆರವು. ಶುಭಸಂಖ್ಯೆ: 2

ಮಿಥುನ: ಆತ್ಮೀಯರ ಆಗಮನದಿಂದ ಮನಶ್ಶಾಂತಿ. ಪ್ರತಿಭೆಗೆ ತಕ್ಕ ಫಲ. ಮಾನಸಿಕ ನೆಮ್ಮದಿ. ಬಾಕಿ ಹಣ ವಸೂಲಿಯಾಗುವುದು. ಶುಭಸಂಖ್ಯೆ: 6

ಕಟಕ: ಅಧ್ಯಾತ್ಮದ ವಿಚಾರದಲ್ಲಿ ಹಿರಿಯರ ಬೆಂಬಲ. ಸ್ಥಳ ಬದಲಾವಣೆ. ಅಪಕೀರ್ತಿ. ವಾಹನ ಸಂಚಾರದಿಂದ ತೊಂದರೆ. ಶುಭಸಂಖ್ಯೆ: 1

ಸಿಂಹ: ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ. ಶತ್ರು ಬಾಧೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರು ಪೇರು. ಉದ್ಯೋಗದಲ್ಲಿ ಪ್ರಗತಿ. ಮನಃಶಾಂತಿ. ಶುಭಸಂಖ್ಯೆ: 2

ಕನ್ಯಾ: ಗೃಹದಲ್ಲಿ ಹಾನಿ. ಸಲ್ಲದ ಅಪವಾದ. ಉದ್ಯೋಗದಲ್ಲಿ ಕಿರಿ-ಕಿರಿ. ಅನಾರೋಗ್ಯ. ವಾಹನ ಅಪಘಾತ ಸಾಧ್ಯತೆ, ಎಚ್ಚರದಿಂದಿರಿ. ಶುಭಸಂಖ್ಯೆ: 7

ತುಲಾ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅಧಿಕ ಧನವ್ಯಯ. ದ್ರವ್ಯ ನಷ್ಟ. ಪತಿ-ಪತ್ನಿಯರಲ್ಲಿ ವಿರಸ. ಪಾಪಬುದ್ಧಿ. ಶುಭಸಂಖ್ಯೆ: 3

ವೃಶ್ಚಿಕ: ಸಾಲಗಾರರಿಂದ ತೊಂದರೆ. ಮಾನಸಿಕ ಒತ್ತಡ. ಕೋಪ ಜಾಸ್ತಿ. ಅಶಾಂತಿ. ಕಾರ್ಯ ವಿಕಲ್ಪ. ಅತಿಯಾದ ನೋವು. ಶುಭಸಂಖ್ಯೆ: 8

ಧನುಸ್ಸು: ಗುರು ಹಿರಿಯರಲ್ಲಿ ಭಕ್ತಿ, ಉನ್ನತ ಸ್ಥಾನಮಾನ ಲಭಿಸುವ ಸಾಧ್ಯತೆ. ಮನಸ್ಸಿನಲ್ಲಿ ಕಾಡುತ್ತಿದ್ದ ಭಯ ಭೀತಿ ನಿವಾರಣೆ. ಶುಭಸಂಖ್ಯೆ: 1

ಮಕರ: ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ. ವಿದ್ಯಾಭಿವೃದ್ಧಿಯಾಗಿ ಮಾನಸಿಕ ನೆಮ್ಮದಿ. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 3

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಆಲಸ್ಯ ಮನೋ ಭಾವ. ತಿರುಗಾಟ. ಭೂಲಾಭ. ದಾಯಾದಿಗಳಲ್ಲಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 2

ಮೀನ: ಕೆಲಸ ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಿಗೆ ಹಿನ್ನಡೆ. ನೀಚ ಜನರ ಸಹವಾಸ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ಥಳ ಬದಲಾವಣೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net