ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಹಟಮಾರಿಗಳೆಂಬ ಹಣೆಪಟ್ಟಿ ಸಿಗಲಿದೆ..

Nitya-Bhavishya-vvani-1-2-1
Published on

ಮೇಷ: ಚಾತುರ್ಯದ ಮನೋಭಾವ ಹೊಂದಿರುವ ಒಬ್ಬರು ನಿಮ್ಮ ಪಾಲುದಾರರಾಗಬಲ್ಲರು. ಇದರಿಂದ ಲಾಭವೂ ಇದೆ. ಶುಭಸಂಖ್ಯೆ: 5

ವೃಷಭ: ವಿನೂತನ ಸಾಹಸಕ್ಕಾಗಿ ಪ್ರಯತ್ನಪಡುವ ನಿರ್ಧಾರ ಸ್ವಾಗತಾರ್ಹವೇ ಆಗಿದೆ. ಆದರೆ ಅತಿಯಾದ ಗಡಿಬಿಡಿ ಬೇಡ. ಶುಭಸಂಖ್ಯೆ: 2

ಮಿಥುನ: ಹಿರಿಯರ ಬಗೆಗಿನ ತಾತ್ಸಾರದ ಭಾವನೆಯನ್ನು ಬಿಡಿ. ಹಿರಿಯರಿಂದ ಜೀವನಕ್ಕೆ ಬೇಕಾದ ಯಶಸ್ಸಿನ ಕೀಲಿಕೈ ಲಭಿಸುತ್ತದೆ. ಶುಭಸಂಖ್ಯೆ: 9

ಕಟಕ: ಅತಿಥಿ ಸತ್ಕಾರದಿಂದಾಗಿ ಹಲವಾರು ಜನ ಹೊಸ ಪ್ರಭಾವಿಗಳ ಸಂಪರ್ಕ ಒದಗಿಬರಲಿದೆ. ಭವಿಷ್ಯದ ಬಗ್ಗೆ ನಿರಾಳವಾಗಿರಿ. ಶುಭಸಂಖ್ಯೆ: 8

ಸಿಂಹ: ಮೌನವೇ ಬಂಗಾರ ಎಂಬ ಗಾದೆಮಾತನ್ನು ಪಾಲಿಸಿ. ಅಲ್ಲದೆ ಸಂತುಲಿತ ಮಾತುಗಳು ಕೂಡ ಗೆಲುವನ್ನು ತಂದುಕೊಡಬಲ್ಲವು. ಶುಭಸಂಖ್ಯೆ: 3

ಕನ್ಯಾ: ವ್ಯರ್ಥ ವೆಚ್ಚಕ್ಕೆ ಕಡಿವಾಣ ಹಾಕಲು ಕಾಲಮಿತಿ ನಿಗದಿಪಡಿಸಿ. ಬಾಳಸಂಗಾತಿಯಿಂದ ಹೊಸ ಸಲಹೆಗಳು ಸಿಗಬಹುದಾಗಿದೆ. ಶುಭಸಂಖ್ಯೆ: 6

ತುಲಾ: ಹಟಮಾರಿಗಳೆಂದು ನಿಮಗೆ ಹಣೆಪಟ್ಟಿಯನ್ನು ಅಂಟಿಸಬಹುದು. ಹಾಗಾಗದಂತೆ ಮುಗುಳು ನಗೆಯಲ್ಲೇ ದಿನ ಕಳೆಯಿರಿ. ಶುಭಸಂಖ್ಯೆ: 1

ವೃಶ್ಚಿಕ: ಉನ್ನತವಾದ ವಿದ್ಯಾಭ್ಯಾಸವನ್ನು ಮಾಡಲು ಬಯಸುವವರಿಗಾಗಿ ಹೊಸ ವ್ಯವಸ್ಥೆಯೊಂದು ತಾನಾಗಿಯೇ ಕೈಗೂಡಿ ಬರಲಿದೆ. ಶುಭಸಂಖ್ಯೆ: 4

ಧನುಸ್ಸು: ಕೆಲಸ ವಿಳಂಬವಾಗುವಂತೆ ಕಾಣಿಸಬಹುದು. ಆದರೆ ನಿಮ್ಮ ಬುದ್ಧಿಶಕ್ತಿಯಿಂದಾಗಿ ಸಿದ್ಧಿಯ ದಾರಿಯೊಂದು ತೆರೆಯುತ್ತದೆ. ಶುಭಸಂಖ್ಯೆ: 7

ಮಕರ: ಮಹಾವಿಷ್ಣುವಿನ ಕೃಪಾಶೀರ್ವಾದದಿಂದಾಗಿ ನಿಮ್ಮ ಪಾಲಿಗೆ ಹೊಸ ಹೊಸ ಅವಕಾಶಗಳು ಬರಲಿವೆ. ಆದರೆ ನಿರಾಕರಿಸದಿರಿ. ಶುಭಸಂಖ್ಯೆ: 5

ಕುಂಭ: ಕುಟುಂಬದವರೊಡನೆ ಆಪ್ತವಾಗಿ ಬೆರೆಯುವಿರಿ. ಕನಸಿನ ಹೊಸದೇ ಆದ ಯೋಜನೆಗಳು ಕೂಡ ಈ ಸಂದರ್ಭದಲ್ಲಿ ಹರಳುಗಟ್ಟಲಿವೆ. ಶುಭಸಂಖ್ಯೆ: 2

ಮೀನ: ಮನೋರಂಜಕವಾದ ಉತ್ಸಾಹಿ ಮಾತುಗಳಿಂದ ಮನೆಯಲ್ಲಿ ಹರ್ಷದ ವಾತಾವರಣಕ್ಕೆ ಚಾಲನೆ ಸಿಗುತ್ತದೆ. ಶಿವನನ್ನು ಭಜಿಸಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net