ಈ ರಾಶಿಯವರಿಗೆ ಇಂದು ಸಂಗಾತಿಯೊಂದಿಗೆ ವಿರಸ: ನಿತ್ಯಭವಿಷ್ಯ

Nitya-Bhavishya-vvani-1-2-1-1
Published on

ಮೇಷ: ವಿಶೇಷ ಧನಲಾಭ. ಆತ್ಮೀಯರ ಭೇಟಿಯಿಂದ ಸಂತಸ ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗ ಶಮನ. ಶುಭಸಂಖ್ಯೆ: 3

ವೃಷಭ: ಅನವಶ್ಯಕ ತಿರುಗಾಟ, ಸಂಗಾತಿಯೊಂದಿಗೆ ವಿರಸ. ದೃಢ ನಿರ್ಧಾರಕ್ಕೆ ಪರದಾಟ. ಮಕ್ಕಳಿಂದ ಕಿರಿಕಿರಿ. ಶುಭಸಂಖ್ಯೆ: 8

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ. ಮನಸ್ಸಿನ ಚಂಚಲತೆಯೇ ನಿಮ್ಮ ಅವನತಿಗೆ ಕಾರಣವಾದೀತು. ಶುಭಸಂಖ್ಯೆ: 4

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ವಸ್ತ್ರ ಲಾಭ ಸಾಧ್ಯತೆ. ಶುಭಸಂಖ್ಯೆ: 3

ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗ ವಿಚಾರದಲ್ಲಿ ಅವಮಾನ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ: 5

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6

ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ: 2

ವೃಶ್ಚಿಕ: ಕೇತು ರಾಶಿಗತನಾದಾಗ ಎಲ್ಲ ಕೆಲಸಗಳಲ್ಲಿ ವಿಲಂಬವಾದರೂ ಅಂತ್ಯದಲ್ಲಿ ಜಯ- ಕಾರ್ಯಸಿದ್ಧಿ ನಿಮ್ಮದೇ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸ ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 1

ಮಕರ: ದೈಹಿಕ ಶ್ರಮ. ಫಲಿತಾಂಶದಲ್ಲಿ ನಿರಾಸೆ ಕಾಡೀತು. ಒತ್ತಡದ ಜೀವನ. ಹೊಟ್ಟೆಗೆ ಸಂಬಂಧಪಟ್ಟಂತೆ ನೋವು. ಶುಭಸಂಖ್ಯೆ: 9

ಕುಂಭ: ಶತ್ರುಗಳಿಂದ ತೊಂದರೆ. ಯಾವುದರಲ್ಲೂ ದೃಢತೆ ಇಲ್ಲ. ಆಹಾರ ಸೇವಿಸುವಾಗ ಎಚ್ಚರ, ಮಿತಿ ಇರಲಿ. ಶುಭಸಂಖ್ಯೆ: 5

ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಉತ್ತಮ ಭೋಜನದಿಂದ ಖುಷಿ. ಮಾತ್ರವಲ್ಲ, ಧನಲಾಭವೂ ಆಗಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net