ಈ ರಾಶಿಯವರು ಇಂದು ಹಿರಿಯರ ಬೋಧನೆಯನ್ನು ತಾಳ್ಮೆಯಿಂದ ಆಲಿಸಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನೀವು ಅಂದುಕೊಂಡಂತೆ ನಡೆಯುತ್ತದೆ. ತಾಳ್ಮೆ ಇರಲಿ. ಸ್ತ್ರೀಯರು ಹೆಚ್ಚು ಜಾಗರೂಕರಾಗಿರಿ. ನೂತನ ವಸ್ತು ಖರೀದಿ. ಶುಭಸಂಖ್ಯೆ: 1

ವೃಷಭ: ಚೈತನ್ಯದಾಯಕ ದಿನ. ರೋಗ ಉಪಶಮನ. ಖಿನ್ನತೆಯಿಂದ ಹೊರಬನ್ನಿ. ಸಮಾಧಾನದಿಂದಿರಿ. ಪ್ರಯಾಣ ಮುಂದೂಡಿ. ಶುಭಸಂಖ್ಯೆ: 9

ಮಿಥುನ: ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮಾತಾಪಿತರ ಆಶೀರ್ವಾದ ಪಡೆಯಿರಿ. ಹೆಚ್ಚಿನ ಜವಾಬ್ದಾರಿ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 2

ಕಟಕ: ಯಾವುದಕ್ಕೂ ಪ್ರತಿಕ್ರಿಯೆ ನೀಡಬೇಡಿ. ಆಗುವುದೆಲ್ಲ ಒಳ್ಳೆಯದಕ್ಕೆ. ಶುಭ ಕಾರ್ಯಗಳಲ್ಲಿ ವಿಳಂಬ. ರಾಜಕೀಯದಲ್ಲಿ ವಿಶೇಷ. ಶುಭಸಂಖ್ಯೆ: 4

ಸಿಂಹ: ಪರಿವರ್ತನೆಯ ದಿನ. ರಾಜಕೀಯದವರಿಗೆ ಚಟುವಟಿಕೆ ಜೋರು. ಮಿತ್ರರ ಸಮಾಗಮ. ಅನ್ಯಮನಸ್ಸು ಬಿಟ್ಟು ವ್ಯವಹರಿಸಿ. ಶುಭಸಂಖ್ಯೆ: 6

ಕನ್ಯಾ: ಕೆಲಸಕಾರ್ಯಗಳಲ್ಲಿ ಕಿರಿಕಿರಿ. ಹಿರಿಯರ ಬೋಧನೆಯನ್ನು ತಾಳ್ಮೆಯಿಂದ ಆಲಿಸಿ. ಬೇಕಾಬಿಟ್ಟಿ ವ್ಯವಹರಿಸಿದರೆ ಅಪಮಾನ. ಶುಭಸಂಖ್ಯೆ: 9

ತುಲಾ: ಚಿಂತಿಸಬೇಡಿ, ಅನಿರೀಕ್ಷಿತವಾದ ಘಟನೆಗಳಿಗೆ ಸಾಕ್ಷಿಯಾಗುವಿರಿ. ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 8

ವೃಶ್ಚಿಕ: ಮಾತು, ಆಹಾರದಲ್ಲಿ ಮಿತವಿರಲಿ. ಯೋಚಿಸದೆ ಕೈಗೊಂಡ ನಿರ್ಧಾರದಿಂದ ಗೊಂದಲ. ದೇವಾಲಯಕ್ಕೆ ಭೇಟಿ, ವಿಶೇಷ ಪೂಜೆ. ಶುಭಸಂಖ್ಯೆ: 6

ಧನುಸ್ಸು: ಪರಿವರ್ತನೆಯ ದಿನ. ಹಣ ಹೂಡುವಿಕೆಯಲ್ಲಿ ಎಚ್ಚರವಿರಲಿ. ಮೋಸ ಹೋದೀರಿ ಜೋಕೆ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 1

ಮಕರ: ನಿಮ್ಮ ಸಹನೆಗೆ ಸವಾಲೆನಿಸುವಂತಹ ದಿನ. ಕಾನೂನು ವ್ಯಾಜ್ಯಗಳ ಪರಿಹಾರ. ನಿವೇಶನ ಖರೀದಿಗೆ ವ್ಯವಹಾರ ಕುದುರುವುದು. ಶುಭಸಂಖ್ಯೆ: 5

ಕುಂಭ: ಮಾನಸಿಕ ಒತ್ತಡ ನಿವಾರಿಸಿಕೊಂಡು ವ್ಯವಹರಿಸಿ. ಸಜ್ಜನರ ಸಂಪರ್ಕ. ಆದಾಯ ವ್ಯಯದಲ್ಲಿ ಸಮತೋಲನ ಕಾಯ್ದುಕೊಳ್ಳಿ. ಶುಭಸಂಖ್ಯೆ: 2

ಮೀನ: ಬಂಧು ಮಿತ್ರರಲ್ಲಿ ಸಾವಧಾನದಿಂದ ವರ್ತಿಸಿ. ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭ. ಶುಭಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net