

ಮೇಷ: ಸಾಫಲ್ಯ ಹಾಗೂ ವೈಫಲ್ಯ ಎರಡೂ ನಿಮ್ಮ ಜತೆಗೆ ಒಟ್ಟಾಗಿಯೇ ಬರುತ್ತವೆ. ತಾಯಿ ಚಾಮುಂಡಿಯ ಸ್ತುತಿಯಿಂದ ನಿಮಗೆ ಕ್ಷೇಮವಿದೆ. ಶುಭಸಂಖ್ಯೆ: 5
ವೃಷಭ: ಸಾಧನಾಬಲದಿಂದ ಅಲೌಕಿಕ ಪ್ರೇರಣೆಯೊಂದು ಲಭ್ಯವಾಗಲಿದೆ. ವ್ಯಾವಹಾರಿಕತೆಯೂ ನಿಮ್ಮ ಶಕ್ತಿಯಾಗಿದ್ದರೆ ನಷ್ಟವೇನೂ ಇಲ್ಲ. ಶುಭಸಂಖ್ಯೆ: 4
ಮಿಥುನ: ಆಪ್ತರ ಭೇಟಿಯ ಯೋಗ. ಅನೇಕ ಖರ್ಚುಗಳು ನಿರೀಕ್ಷಿತವೇ ಆಗಿವೆ. ಆದರೆ ಹೊಸದೇ ಬಗೆಯ ಹರ್ಷವನ್ನೂ ಅನುಭವಿಸುವಿರಿ. ಶುಭಸಂಖ್ಯೆ: 6
ಕಟಕ: ಹೊಸ ಉತ್ಸಾಹದಿಂದ ಮುಂದುವರಿಯುವ ಕಾರಣ ಹಲವು ಕಾರ್ಯಗಳು ಸಮಾಪ್ತಿಯಾಗಲಿವೆ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 3
ಸಿಂಹ: ನಿಮ್ಮ ವೈಚಾರಿಕತೆಗೆ ವಿಶೇಷವಾದ ಮಹತ್ವ ಸಿಗಲಿದೆ. ಹಾಸ್ಯಲಹರಿಗಳಿಂದಲೇ ಕಾರ್ಯದಲ್ಲಿ ಸಫಲತೆಯನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 1
ಕನ್ಯಾ: ಹೊಸ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಸಿದ್ಧ ಮಾಡಬೇಕಾಗುತ್ತದೆ. ಅಂಜದೆ ಸವಾಲುಗಳನ್ನು ಸ್ವೀಕರಿಸಿ. ಇದರಿಂದ ಲಾಭವಿದೆ. ಶುಭಸಂಖ್ಯೆ: 9
ತುಲಾ: ಕೆಲಸಕಾರ್ಯಗಳು ಸರಾಗವಾಗಿ ಸಾಗುತ್ತಿದ್ದರೂ ಬೇರೆಡೆಗೇ ಹೆಚ್ಚು ಗಮನ ಕೊಡುತ್ತಿರುತ್ತೀರಿ. ಮೃತ್ಯುಂಜಯನ ಸ್ತುತಿ ಮಾಡಿ. ಶುಭಸಂಖ್ಯೆ: 2
ವೃಶ್ಚಿಕ: ಈ ದಿನದ ವರ್ತಮಾನವು ನಿಮ್ಮ ಕೈಹಿಡಿದು ಒಳ್ಳೆಯ ದಾರಿಯಲ್ಲಿಯೇ ಮುಂದೆ ನಡೆಸಲಿದೆ. ಉಲ್ಲಾಸದಿಂದಲೇ ವರ್ತಿಸಿ. ಶುಭಸಂಖ್ಯೆ: 8
ಧನುಸ್ಸು: ಸತ್ಯ, ನೀತಿ ಮುಂತಾದ ಧೋರಣೆಗಳನ್ನು ಹೊಂದಿದ್ದೀರಿ. ಇದಕ್ಕೆ ವಿರುದ್ಧವಾದ ಜನರನ್ನು ಕೂಡ ಸಹನೆಯಿಂದ ಎದುರಿಸಿ. ಶುಭಸಂಖ್ಯೆ: 7
ಮಕರ: ಕೈಗೆತ್ತಿಕೊಳ್ಳಲಿರುವ ಮಂಗಳಕಾರ್ಯಗಳಲ್ಲಿ ಶೀಘ್ರ ಬೆಳವಣಿಗೆ ಕಂಡುಬರಲಿದೆ. ಕುಲದೇವರ ಕೃಪಾಶೀರ್ವಾದವೂ ಲಭಿಸುತ್ತದೆ. ಶುಭಸಂಖ್ಯೆ: 5
ಕುಂಭ: ಅವಕಾಶಗಳು ನಿಮ್ಮನ್ನು ಯಶಸ್ಸಿನ ಕಡೆಗೆ ಕರೆದೊಯ್ಯುತ್ತಿವೆ. ಹೆಚ್ಚಿನ ಕ್ರಿಯಾಶೀಲತೆಯಿಂದ ಹೊಸ ಹಂತಕ್ಕೆ ಏರಲಿದ್ದೀರಿ. ಶುಭಸಂಖ್ಯೆ: 4
ಮೀನ: ಕೆಲವು ದಿನಗಳಿಂದ ಸ್ಥಗಿತಗೊಂಡಂತಿದ್ದ ಕಾರ್ಯಗಳು ಮುಂದುವರಿಯಲಿವೆ. ಮನೆಯಲ್ಲೂ ಸಂತಸದ ವಾತಾವರಣವಿರಲಿದೆ. ಶುಭಸಂಖ್ಯೆ: 6