ಈ ರಾಶಿಯವರಿಗಿಂದು ಆದಾಯದಲ್ಲಿ ಹೆಚ್ಚಳದಿಂದಾಗಿ ಮಾನಸಿಕ ನೆಮ್ಮದಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಹಿಳೆಯರಿಗೆ ಆದಾಯದಲ್ಲಿ ವೃದ್ಧಿ. ಉದ್ಯೋಗ ನಿಮಿತ್ತ ಪ್ರಯಾಣ ಸಾಧ್ಯತೆ. ಧಾನ್ಯ ಮಾರಾಟಗಾರರಿಗೆ ಉತ್ತಮ ಲಾಭ. ಶುಭಸಂಖ್ಯೆ: 9

ವೃಷಭ: ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಗಳ ಬಾಧೆ ನಿವಾರಣೆಯಾಗಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ. ಶುಭಸಂಖ್ಯೆ: 4

ಮಿಥುನ: ರಾಜಕೀಯ ಉನ್ನತಿಗಾಗಿ ಚಿಂತನೆ. ಹೆಚ್ಚಿನ ಪರಿಶ್ರಮದಿಂದ ಯಶ. ವ್ಯವಹಾರದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಿರಿ. ಶುಭಸಂಖ್ಯೆ: 2

ಕಟಕ: ವಾಹನ ಮಾರಾಟಗಾರರಿಗೆ ಲಾಭ. ಕಳೆದುಕೊಂಡ ವಸ್ತು ಸಿಗುವ ಸಾಧ್ಯತೆ. ಮಗಳ ವಿವಾಹ ಸಂಬಂಧ ಒತ್ತಡ ಎದುರಾದೀತು. ಶುಭಸಂಖ್ಯೆ: 7

ಸಿಂಹ: ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನ. ಸಂಗಾತಿಯ ಯೋಚನೆಗೆ ಪುರಸ್ಕಾರ ನೀಡುವುದು ಉತ್ತಮ. ಶುಭಸಂಖ್ಯೆ: 3

ಕನ್ಯಾ: ನೌಕರಿಯಲ್ಲಿ ಇರುವವರಿಗೆ ಬಿಡುವು ದೊರಕುವ ಸಾಧ್ಯತೆ. ಮಕ್ಕಳ ಸಹಕಾರದಿಂದಾಗಿ ಮನೆಯಲ್ಲಿ ಸಂತಸ ಮೂಡಲಿದೆ. ಶುಭಸಂಖ್ಯೆ: 5

ತುಲಾ: ಸುಖ -ಸಂತೋಷ -ನೆಮ್ಮದಿ ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ವಿಶೇಷ ಪ್ರವಾಸ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶ ಇಲ್ಲ. ಶುಭಸಂಖ್ಯೆ: 9

ವೃಶ್ಚಿಕ: ಆಸ್ತಿ ಖರೀದಿ ಸಾಧ್ಯತೆ. ವಿದ್ಯಾರ್ಥಿಗಳು ದೃಢ ನಿರ್ಧಾರ ತೆಗೆದುಕೊಳ್ಳಿ. ಸಂತಾನ ಅಪೇಕ್ಷಿತರಿಗೆ ಸಿಹಿಸುದ್ದಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 4

ಧನುಸ್ಸು: ವಿದೇಶಿ ಕಂಪೆನಿಯೊಂದರಲ್ಲಿ ಅವಕಾಶ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಕಿರಿಕಿರಿ. ಶುಭಸಂಖ್ಯೆ: 1

ಮಕರ: ಕೇಂದ್ರ ಸರ್ಕಾರದ ಹುದ್ದೆ ದೊರಕುವ ಸಾಧ್ಯತೆ. ಆದಾಯದಲ್ಲಿ ಹೆಚ್ಚಳದಿಂದಾಗಿ ಮಾನಸಿಕ ನೆಮ್ಮದಿ. ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ: 6

ಕುಂಭ: ಖಾಸಗಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಒತ್ತಡ. ಕುಟುಂಬದ ಹಿರಿಯರಿಗೆ ಅನಾರೋಗ್ಯ. ಮಗನ ಭವಿಷ್ಯದ ಚಿಂತೆ. ಶುಭಸಂಖ್ಯೆ: 8

ಮೀನ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಆಘಾತ. ಕುಟುಂಬದ ಸಮಸ್ಯೆಗೆ ಹಿರಿಯರಿಂದ ಪರಿಹಾರ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net