

ಮೇಷ: ನಂಬಿದವರೇ ನಿಮಗೆ ಮೋಸ ಮಾಡಬಹುದು ಎಚ್ಚರವಾಗಿರಿ. ಬಂಧುಗಳೊಂದಿಗೆ ಆತ್ಮಾಭಿಮಾನದಿಂದ ವರ್ತಿಸಿ. ಶುಭಸಂಖ್ಯೆ: 9
ವೃಷಭ: ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಯಿಂದ ಪ್ರಶಂಸೆಗೆ ಪಾತ್ರರಾಗುವಿರಿ. ದುಂದು ವೆಚ್ಚ ಬೇಡ. ಭವಿಷ್ಯದ ಚಿಂತೆ ಇರಲಿ. ಶುಭಸಂಖ್ಯೆ: 1
ಮಿಥುನ: ಕಲಾವಿದರಿಗೆ ವಿಶೇಷ ಯಶಸ್ಸು ಪ್ರಾಪ್ತಿಯಾಗಲಿದೆ. ಪತ್ನಿಯೊಂದಿಗೆ ವಿರಸ. ವ್ಯಾಪಾರದಲ್ಲಿ ಕೆಲಸಗಾರರಿಂದ ನಷ್ಟ. ಶುಭಸಂಖ್ಯೆ: 6
ಕಟಕ: ಮಕ್ಕಳ ಮೇಲೆ ಕುರುಡುಪ್ರೀತಿಯನ್ನು ತೋರಿಸಬೇಡಿ. ಉಪಯುಕ್ತವಾದ ಕೆಲಸ ಮಾಡಿ. ಗುರು ಹಿರಿಯರ ಸಲಹೆ ಸ್ವೀಕರಿಸಿ. ಶುಭಸಂಖ್ಯೆ:3
ಸಿಂಹ: ಹಿರಿಯ ಅಧಿಕಾರಿಗಳಿಂದ ನಿಮ್ಮ ಕಾರ್ಯವೈಖರಿಯ ಬಗ್ಗೆ ಅಸಮಾಧಾನ. ಸೌಜನ್ಯವಿರಲಿ. ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 1
ಕನ್ಯಾ: ನಿಮ್ಮ ಹಿರಿತನದ ಬಗ್ಗೆ ಹೆಮ್ಮೆ ಇರಲಿ. ವಿದ್ಯಾರ್ಥಿಗಳಿಗೆ ಇಂದು ಶುಭದಿನ. ವಿವಾಹ ಅಪೇಕ್ಷಿತರಿಗೆ ಕಾರ್ಯಸಿದ್ದಿಯಾಗಿ ಸಂತಸ. ಶುಭಸಂಖ್ಯೆ: 3
ತುಲಾ: ಮನೆ ಬದಲಾವಣೆಗೆ ನಿರ್ಧಾರ. ಸ್ನೇಹಿತನ ಭೇಟಿ. ಧಾರ್ವಿುಕ ಚಟುವಟಿಕೆಗಳ ಸಡಗರ . ಮನೆಯಲ್ಲಿ ಆಹ್ಲಾದಕರ ವಾತಾವರಣ. ಶುಭಸಂಖ್ಯೆ: 6
ವೃಶ್ಚಿಕ: ಪ್ರಯತ್ನಕ್ಕೆ ಅವಕಾಶಗಳು ತೆರೆದಿವೆ. ದೃಢ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಧನಾಗಮನ. ಪತ್ನಿಯ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 8
ಧನುಸ್ಸು: ನಿಮ್ಮ ಮಾತಿನಿಂದ ಜಟಿಲ ಸಮಸ್ಯೆ ಪರಿಹಾರ. ಬಂಧುಗಳ ಪ್ರಶಂಸೆ. ವಿಶೇಷ ಅಧಿಕಾರ-ಪ್ರಾಪ್ತಿ. ಮಕ್ಕಳ ಭವಿಷ್ಯದಚಿಂತೆ. ಶುಭಸಂಖ್ಯೆ: 4
ಮಕರ: ದಿನಸಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ಹಾನಿ. ಭೂ ವ್ಯವಹಾರದಲ್ಲಿ ಮೋಸ. ಸಾರ್ವಜನಿಕ ಕ್ಷೇತ್ರದಲ್ಲಿ ಅವಮಾನ ಸಾಧ್ಯತೆ. ಶುಭಸಂಖ್ಯೆ: 5
ಕುಂಭ: ನಿರೀಕ್ಷಿತ ಲಾಭ ಪ್ರಾಪ್ತಿಯಲ್ಲಿ ಎಡರು ತೊಡರು. ಗುರು ಸನ್ನಿಧಾನಕ್ಕೆ ಭೇಟಿ. ತಂದೆತಾಯಿಗಳ ಮಾತನ್ನು ಪಾಲಿಸಿ. ಶುಭಸಂಖ್ಯೆ:1
ಮೀನ: ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಧನಲಾಭ . ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತಗಾರರಿಗೆ ವಿಶೇಷ ಪ್ರೋತ್ಸಾಹ. ಶುಭಸಂಖ್ಯೆ: 2