ಈ ರಾಶಿಯವರಿಂದು ಯಾವುದೇ ಥರದ ಮಾತಿಗೂ ಸಿಟ್ಟಾಗಬೇಡಿ, ಸಿಟ್ಟಾದ್ರೆ ಕಾದಿದೆ ಆಪತ್ತು

Nitya-Bhavishya-vvani-1-2-1
Published on

ಮೇಷ: ಹಳೆಯ ಸೋಲುಗಳನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿರುವುದು ಬೇಡ. ಸಕಾರಾತ್ಮಕ ಚಿಂತನೆಯಿಂದ ಲಾಭವಿದೆ. ಶುಭಸಂಖ್ಯೆ: 1

ವೃಷಭ: ಯಶಸ್ಸಿಗೆ ಯಾವುದೇ ರೀತಿಯ ಅಡ್ಡ ದಾರಿ ಇಲ್ಲ. ನಿಮ್ಮಲ್ಲಿನ ನೈಜ ಪ್ರತಿಭೆಗೆ ಹೆಚ್ಚಿನ ಪ್ರಶಂಸೆ ದೊರೆಯಲಿದೆ. ಶುಭಸಂಖ್ಯೆ: 4

ಮಿಥುನ: ವೈಭವದ ಬದುಕನ್ನು ನಡೆಸುವ ಕನಸುಗಳಿವೆ. ಅದಕ್ಕೆ ತಕ್ಕ ಪರಿಶ್ರಮವನ್ನೂ ನಡೆಸಿದರೆ ಸಫಲತೆ ದೊರೆಯಲಿದೆ. ಶುಭಸಂಖ್ಯೆ: 7

ಕಟಕ: ಪದೇಪದೆ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಇಂದು ಯಾವುದೇ ಥರದ ಮಾತಿಗೂ ಸಿಟ್ಟಾಗಬೇಡಿ. ಶುಭಸಂಖ್ಯೆ: 8

ಸಿಂಹ: ಜೀವನದಲ್ಲಿನ ಸುಮಧುರ ಕ್ಷಣಗಳು ನಿಮ್ಮ ಕೈಗೆಟುಕಲಿವೆ. ಮಾನಸಿಕವಾದ ನೆಮ್ಮದಿಯಿಂದ ಮನೆಯಲ್ಲೂ ಹರ್ಷವಿದೆ. ಶುಭಸಂಖ್ಯೆ: 5

ಕನ್ಯಾ: ಹೊಸ ಉತ್ಸಾಹದಿಂದ ಕೆಲಸ ಆರಂಭ ಮಾಡುವುದಷ್ಟೇ ಅಲ್ಲ. ಹಳೆಯ ವಿಧಾನಗಳ ಬಗೆಗೂ ಆದರಣೆ ಇರಲಿ. ಶುಭಸಂಖ್ಯೆ: 2

ತುಲಾ: ಒಂದೇ ಸಲಕ್ಕೆ ಯಶಸ್ಸು ಸಿಕ್ಕಿಬಿಡಬೇಕು ಎಂಬ ನಿಮ್ಮ ಆಲೋಚನೆಯಲ್ಲಿ ತಪ್ಪಿಲ್ಲ. ಜತೆಗೆ ಕಾರ್ಯತ್ಪರತೆ ಕೂಡ ಇರಲಿ. ಶುಭಸಂಖ್ಯೆ: 3

ವೃಶ್ಚಿಕ: ಸಾಕಷ್ಟು ಜನ ತಾತ್ತಿ್ವಕ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮ್ಮ ಕಾರ್ಯಕ್ಕೆ ಅದು ಅಡಚಣೆ ಎಂದೆನಿಸದಿರಲಿ. ಶುಭಸಂಖ್ಯೆ: 6

ಧನಸ್ಸು: ಪಂಢರಿರಾಯನನ್ನು ಭಕ್ತಿಯಿಂದ ಪೂಜೆ ಮಾಡಿ. ನಿಮ್ಮ ಮನಸ್ಸಿನ ಸಂಕಲ್ಪಗಳೆಲ್ಲ ಶೀಘ್ರದಲ್ಲಿಯೇ ಕೈಗೂಡಲಿವೆ. ಶುಭಸಂಖ್ಯೆ: 9

ಮಕರ: ಹೋರಾಟದಲ್ಲಿ ನೀವೇ ನಾಯಕರಾಗುವ ಸಂದರ್ಭ ಬರಬಹುದು. ಅದಕ್ಕೂ ಮೊದಲು ಯೋಚಿಸಿಯೇ ನಿರ್ಧರಿಸಿ. ಶುಭಸಂಖ್ಯೆ: 1

ಕುಂಭ: ಅತಿಥಿಗಳ ಉಪಚಾರ ಮಾಡುವುದರಲ್ಲೇ ದಿನ ಕಳೆಯಬಹುದು. ಕೆಲಸಕ್ಕೆ ಅಡಚಣೆ ಆಗದಂತೆ ನೋಡಿಕೊಳ್ಳಿ. ಶುಭಸಂಖ್ಯೆ: 4

ಮೀನ: ವಿನೂತನ ಸಾಹಸಗಳನ್ನು ಮಾಡುವುದು ನಿಮ್ಮ ಸ್ವಭಾವ. ಇಂದಿನ ಪ್ರಯತ್ನದಲ್ಲೂ ನಿಮಗೆ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net