VIDEO| ಭಾರಿ ಸದ್ದು ಮಾಡುತ್ತಿದೆ ಡಿಕೆಶಿ ಪುತ್ರಿ ಐಶ್ವರ್ಯಾರ ನಿಶ್ಚಿತಾರ್ಥ ವಿಡಿಯೋ...!

DKS Daughter
Published on

ಬೆಂಗಳೂರು: ಕಳೆದ ಜೂನ್​ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು​ ತಮ್ಮ ಪುತ್ರಿ ಐಶ್ವರ್ಯಾರ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಮಗ ಅಮಾರ್ಥ್ಯ ಹೆಗ್ಡೆ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಮದುವೆ ನಿಶ್ಚಯ ಕಾರ್ಯಕ್ರಮ ಎರಡು ಕುಟುಂಬ ಸಮುಖದಲ್ಲೇ ಅದ್ಧೂರಿಯಾಗಿ ನೆರವೇರಿತು.

ಈ ವೇಳೆ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದೀಗ ನಿಶ್ಚಿತಾರ್ಥದ ವಿಡಿಯೋ ಝಲಕ್​ ಬಹಳ ಸದ್ದು ಮಾಡುತ್ತಿದೆ. ಎರಡು ಕುಟುಂಬದ ಆತ್ಮೀಯತೆ ಹಾಗೂ ಐಶ್ವರ್ಯಾ ಮತ್ತು ಅಮಾರ್ಥ್ಯ ನಡುವಿನ ಪ್ರೀತಿಯ ಕ್ಷಣಗಳನ್ನು ವಿಡಿಯೋದಲ್ಲಿ ಬಹಳ ಸೊಗಸಾಗಿ ಚಿತ್ರೀಕರಿಸಲಾಗಿದ್ದು, ಅದರ ಝಲಕ್​ ನೀವಿಲ್ಲಿ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net