ನಿತ್ಯ ಭವಿಷ್ಯ: ಈ ರಾಶಿಯವರು ನಿಮ್ಮ ಸ್ಥಿತಿಗತಿ ನೋಡಿ ಹೊಟ್ಟೆಕಿಚ್ಚುಪಡುವವರ ಸಂಖ್ಯೆ ಜಾಸ್ತಿ ಇರುತ್ತದೆ

Nitya-Bhavishya-vvani-1-2-1
Published on

ಮೇಷ: ಸಿಟ್ಟು, ಪೂರ್ವಾಗ್ರಹ ಬಿಟ್ಟು ಆಲೋಚಿಸಿ. ಯಾರಿಗೆ ಸಹಾಯ ಮಾಡಲಿ ಎಂದು ನೀವೇ ನಿರ್ಧಾರ ಮಾಡಿ. ಅದೃಷ್ಟಸಂಖ್ಯೆ: 7

ವೃಷಭ: ಮಕ್ಕಳು ಮಾತು ಕೇಳಲಿಲ್ಲ ಎಂದು ಅವರ ಮೇಲೆ ಕೋಪಿಸಿಕೊಳ್ಳುತ್ತೀರಿ. ಅವರನ್ನು ಅರ್ಥಮಾಡಿಕೊಳ್ಳಿ. ಅದೃಷ್ಟಸಂಖ್ಯೆ: 4

ಮಿಥುನ: ನಿಮ್ಮ ಸ್ಥಿತಿಗತಿ ನೋಡಿ ಹೊಟ್ಟೆಕಿಚ್ಚುಪಡುವವರ ಸಂಖ್ಯೆ ಜಾಸ್ತಿ ಇರುತ್ತದೆ. ನಿಮ್ಮ ಮೇಲೆ ಆಪಾದನೆ ಬಂದೀತು. ಅದೃಷ್ಟಸಂಖ್ಯೆ: 6

ಕಟಕ: ಮನಸ್ಸಿಲ್ಲದೆ ನಗುತ್ತೀರಿ. ನಿಮ್ಮ ಉಪಸ್ಥಿತಿ ಇತರರಿಗೆ ಸಂತಸ ತರುತ್ತದೆ. ನಿಮ್ಮ ಭಾವನೆ ಯಾರಿಗೂ ತಿಳಿಯದು. ಅದೃಷ್ಟಸಂಖ್ಯೆ: 5

ಸಿಂಹ: ಬಾಳಸಂಗಾತಿಯಿಂದ ಧನಾಗಮನದ ಸಾಧ್ಯತೆ. ದೂರಪ್ರಯಾಣ ನಿಮಗೆ ಲಾಭವನ್ನು ತರುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 2

ಕನ್ಯಾ: ಅಧಿಕಾರದಲ್ಲಿ ಇದ್ದರೂ ನಿಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂಬ ಕಸಿವಿಸಿ. ಆರ್ಥಿಕ ಚಿಂತೆಯಿಂದ ಬೇಸರ. ಅದೃಷ್ಟಸಂಖ್ಯೆ: 1

ತುಲಾ: ಯಾವುದೋ ಕೆಲಸ ಮಾಡಲು ಹೋಗಿ ಚೆನ್ನಾಗಿ ಮಾಡುತ್ತೀರಿ. ನಿಮ್ಮ ನಿರೀಕ್ಷೆಗೂ ಮೀರಿ ಲಾಭ ಬರಲಿದೆ. ಅದೃಷ್ಟಸಂಖ್ಯೆ: 9

ವೃಶ್ಚಿಕ: ಸ್ನೇಹಿತರೊಂದಿಗೆ ಮನಸ್ತಾಪ ಆಗಬಹುದು. ದೂರಪ್ರಯಾಣದಲ್ಲಿ ವಸ್ತುಗಳನ್ನು ಕಳೆದುಕೊಂಡೀರಿ. ಎಚ್ಚರ. ಅದೃಷ್ಟಸಂಖ್ಯೆ: 3

ಧನಸ್ಸು: ಹೊಟ್ಟೆನೋವು, ಅಜೀರ್ಣ ಇತ್ಯಾದಿಗಳು ಕಾಡಬಹುದು. ಪ್ರಯಾಣದ ಆಲೋಚನೆ ಏರುಪೇರಾಗಬಹುದು. ಅದೃಷ್ಟಸಂಖ್ಯೆ: 6

ಮಕರ: ಮಕ್ಕಳಿಂದ ಹೆಚ್ಚಿನ ಖರ್ಚು. ವ್ಯಾಪಾರಿಗಳು ಒಳ್ಳೆಯ ಲಾಭ. ಆಡುವ ಮಾತಿನ ಮೇಲೆ ಸ್ವಲ್ಪ ಗಮನ ಇರಲಿ. ಅದೃಷ್ಟಸಂಖ್ಯೆ: 9

ಕುಂಭ: ಸಾಲಕ್ಕಾಗಿ ದೊಡ್ಡ ಜನರನ್ನು ಕೇಳಬೇಡಿ. ಗುರುಹಿರಿಯರ ಸಹಕಾರ ಕೂಡ ಸದ್ಯಕ್ಕೆ ನಿಮಗೆ ದೊರೆಯುವುದಿಲ್ಲ. ಅದೃಷ್ಟಸಂಖ್ಯೆ: 3

ಮೀನ: ಸಂಗಾತಿಯ ಜತೆ ಸಂತಸವಾಗಿ ದಿನ ಕಳೆಯಬಹುದು. ಅನಿರೀಕ್ಷಿತ ಧನಲಾಭ. ಹೊಸ ವಸ್ತ್ರ ಖರೀದಿಸುವಿರಿ. ಅದೃಷ್ಟಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net