ನಿತ್ಯ ಭವಿಷ್ಯ: ಈ ರಾಶಿಯವರಿಗೆ ಮಾತನಾಡುವುದು, ಕ್ಷಮೆ ಕೇಳುವುದು ಚಟವಾಗಿ ಪರಿಣಮಿಸದಿರಲಿ

Nitya-Bhavishya-vvani-1-2
Published on

ಮೇಷ: ಅನಿರೀಕ್ಷಿತವಾದ ಪುರಸ್ಕಾರವೊಂದನ್ನು ಪಡೆದು ಸಂತಸಗೊಳ್ಳುವ ಸಂದರ್ಭ ಸದ್ಯದಲ್ಲಿಯೇ ಕೂಡಿಬರಲಿದೆ. ಶುಭಸಂಖ್ಯೆ: 1

ವೃಷಭ: ಬರಿದೆ ನಾಟಕ, ಕೇವಲ ಪ್ರದರ್ಶನ ಎಂಬ ವ್ಯಂಗ್ಯದ ಮಾತುಗಳಿಗಾಗಿ ಖಂಡಿತ ತಲೆ ಕೆಡಿಸಿಕೊಳ್ಳದಿರಿ. ಶುಭಸಂಖ್ಯೆ: 6

ಮಿಥುನ: ಕಾರ್ಯಯೋಜನೆಗಳು ಒಂದೇ ಸ್ವರೂಪದಲ್ಲಿ ಹಳತಾಗದ ಹಾಗೆ ಹೊಸ ಸ್ವರೂಪ ಒದಗಿಸಿ. ಗೆಲ್ಲುವಿರಿ. ಶುಭಸಂಖ್ಯೆ: 9

ಕಟಕ: ನಿಮ್ಮ ಸ್ಥಾನಮಾನಗಳ ಬದಲಾವಣೆ ಮಾಡಲೆಂದು ಕಾರಸ್ಥಾನ ರೂಪಿಸುತ್ತಿರುವವರ ವಿರುದ್ಧ ತುಸು ಜಾಗ್ರತೆ ಇರಲಿ. ಶುಭಸಂಖ್ಯೆ: 8

ಸಿಂಹ: ಹಿರಿಯರೇ ಆಗಲಿ, ಕಿರಿಯರೇ ಆಗಲಿ ನೀಡುವ ಸಲಹೆ, ಕಿವಿಮಾತುಗಳನ್ನು ಆಲಿಸಿ. ಒಳಿತೇ ಆಗಲಿದೆ. ಶುಭಸಂಖ್ಯೆ: 4

ಕನ್ಯಾ: ಕಾಣಿಸುತ್ತಿರುವ ಬೆಂಕಿ ನಿಮಗೇನೂ ಹೊಸದಲ್ಲ. ಚಾತುರ್ಯದಿಂದ ಬಿಕ್ಕಟ್ಟುಗಳ ದಮನಕ್ಕೆ ಮುಂದಾಗಿ. ಶುಭಸಂಖ್ಯೆ: 9

ತುಲಾ: ಮಾತನಾಡುವುದು, ಕ್ಷಮೆ ಕೇಳುವುದು ನಿಮ್ಮ ಚಟವಾಗಿ ಪರಿಣಮಿಸದಿರಲಿ. ಇದರಿಂದ ವರ್ಚಸ್ಸಿಗೆ ಧಕ್ಕೆ. ಶುಭಸಂಖ್ಯೆ: 3

ವೃಶ್ಚಿಕ: ಕಾಶೀ ವಿಶ್ವೇಶ್ವರನನ್ನು ಶ್ರದ್ಧೆಯಿಂದ ಆರಾಧನೆ ಮಾಡಿ. ಇದರಿಂದ ಕಷ್ಟಗಳು ಬಹು ಬೇಗ ದೂರವಾಗಲಿವೆ. ಶುಭಸಂಖ್ಯೆ: 5

ಧನಸ್ಸು: ಮಾತನಾಡುವುದನ್ನು ಕೇಳಿಸಿಕೊಳ್ಳದಂತೆ ಇದ್ದರೂ, ಮಾತಿನ ತಪ್ಪು ಸಂಭವಿಸಿದಾಗ ಚುಚ್ಚುವವರ ಬಗ್ಗೆ ಜಾಗ್ರತೆ. ಶುಭಸಂಖ್ಯೆ: 7

ಮಕರ: ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಬಳಿಯುವಂತಹ ಜನರ ವಿರುದ್ಧ ಸಾಕಷ್ಟು ಎಚ್ಚರ ಇರಲಿ. ಶುಭಸಂಖ್ಯೆ: 9

ಕುಂಭ: ಮಹಾಲಕ್ಷ್ಮೀಯನ್ನು ಶ್ರದ್ಧೆಯಿಂದ ಆರಾಧಿಸಿ. ಗೆಲುವಿನ ನಗೆ ಬೀರಲು ವಿಶೇಷವಾದ ಅವಕಾಶವೊಂದು ಸಿಗಲಿದೆ. ಶುಭಸಂಖ್ಯೆ: 2

ಮೀನ: ವೈಫಲ್ಯಗಳನ್ನು ಮುಚ್ಚಲು ಮುಂದಾಗದಿರಿ. ಸೋಲನ್ನು ಒಪ್ಪಿಕೊಳ್ಳಿ. ಇದರಿಂದಾಗಿ ಮುಂದಿನ ಜಯ ಇಕ್ಕಟ್ಟಾಗದು. ಶುಭಸಂಖ್ಯೆ: 4  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net