ಈ ರಾಶಿಯವರನ್ನು ದೇವರೇ ಮುನ್ನಡೆಸುತ್ತಾನೆ: ವಾರಭವಿಷ್ಯ

Vaara-Bhavishya
Published on

ಮೇಷ ರಾಶಿ

ಮನುಷ್ಯನು ತನ್ನನ್ನು ತಾನು ಅವಲೋಕಿಸಿಕೊಂಡು ದೈವ ಭಕ್ತಿ , ಧರ್ಮ, ಉಪಕಾರ ಸ್ಮರಣೆ, ಸ್ವತಃ ಸಮಯಕ್ಕೆ ಸಲ್ಲಬೇಕಾದ ಉಪಕಾರ ಮಾಡಿದ್ದಾನೆಯೆ ಎಂಬುದನ್ನು ಚಿತ್ರಗುಪ್ತ ಲೆಕ್ಕ ಹಾಕುತ್ತಿರುತ್ತಾನೆ. ದ್ವಾದಶ ಗುರು ನೆಮ್ಮದಿ ತರದು. ವ್ಯಕ್ತಿತ್ವ ಹಾಳು ಮಾಡಿ ಕುಂದು ಉಂಟು ಮಾಡುತ್ತಾನೆ. ಏಪ್ರಿಲ್ 21ರ ನಂತರ ಒಳ್ಳೆಯ ಸಮಯ ಇದೆ. ದತ್ತಾತ್ರೇಯ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ.

ವೃಷಭ ರಾಶಿ

ವೃಷಭ ಎಂದರೆ ನಂದೀಶ್ವರ. ಏಕಾದಶದಲ್ಲಿ ಗುರು ಇರುವುದರಿಂದ ಕ್ಷೇಮ ಮಂಗಳ ಉಂಟು ಮಾಡುವ ಪಾರ್ವತಿ ಪರಮೇಶ್ವರರನ್ನು ಪೂಜಿಸಿ. ದ್ವಾದಶಕ್ಕೆ ರಾಹು ಇದ್ದಾನೆ. ದುರ್ಗೆಯನ್ನು ಪೂಜಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ. ಶುಭ ಸಂಖ್ಯೆ ಒಂಬತ್ತು.

ಮಿಥುನ ರಾಶಿ

ಬುಧನು ರವಿ ಜತೆ ಇರುವುದರಿಂದ ನಿಮ್ಮ ಶ್ರಮಕ್ಕೆ ತಕ್ಕ ಫಲ ಕೊಡುತ್ತಾನೆ. ಮನುಷ್ಯನು ಉಸಿರಾಡುವವರೆಗೂ ಮಾನ ಪ್ರಾಣ ಕಾಪಾಡಲು ದೈವ ಚಿಂತನೆ ನಮ್ಮಲ್ಲಿ ಇರಬೇಕು. ಈ ಜಗತ್ತಿನ ಸೃಷ್ಟಿ ಮಹಾವಿಷ್ಣುವಿನಿಂದ. ವಿಷ್ಣುವನ್ನು ಆರಾಧಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಮನೋಕಾಮನೆಗಳನ್ನು ಪಡೆಯಬಹುದು.

ಕಟಕ ರಾಶಿ

ಮನುಷ್ಯನಿಗೆ ಗ್ರಹಗಳು ಅಷ್ಟೇನೂ ಚೆನ್ನಾಗಿಲ್ಲದೆ ಇರುವಾಗಲೂ ಚಿಂತೆ ಮಾಡುವ ಅಗತ್ಯ ಇಲ್ಲ. ಕಾಲ ಕಾಲಕ್ಕೆ ಊಟ ಮಾಡಿದರೆ ಹಸಿವೆ ಆಗುವುದಿಲ್ಲ. ನಿತ್ಯ ದೈವ ಪ್ರಾರ್ಥನೆ ಇದ್ದರೆ ಯಾವ ಗ್ರಹ ಏನೂು ಮಾಡುವುದಿಲ್ಲ. ಪರಮಾತ್ಮನ ಕೃಪೆ ಇದ್ದರೆ ಮುಂದೆ ಸಾಗಲು ಸಾಧ್ಯ. ಜೀವನದಲ್ಲಿ ಬರುವ ತೊಡಕನ್ನು ದಾಟಿ ಮುಂದೆ ಹೋಗಲು ಭಗವಂತನ ಪ್ರಾರ್ಥನೆ ಮಾಡಿ, ಒಳ್ಳೆಯದಾಗುತ್ತದೆ.

ಸಿಂಹ ರಾಶಿ

ಶನಿ ಮತ್ತು ಗುರು ಇಬ್ಬರೂ ಗೋಚಾರದಲ್ಲಿ ಶುಭ ಫಲ ಕೊಡಲು ಆಸಕ್ತರಾಗಿದ್ದಾರೆ. ಆದರೂ ಸಿಂಹ ರಾಶಿಯವರು ಬಳಲದೆ, ಕುಗ್ಗದೆ, ಇಟ್ಟ ಹೆಜ್ಜೆ ತೆಗೆಯದೆ ಸಂಕಲ್ಪದಂತೆ ನಡೆಯುವ ವ್ಯಕ್ತಿಗಳು. ದೈವ ಪ್ರಾರ್ಥನೆ ಸದಾ ಇರಲಿ. ಆದಿತ್ಯ ಹೃದಯ ಪಾರಾಯಣ ಮಾಡಿ. ಸೂರ್ಯ ಅಷ್ಟೋತ್ತರ ಪಠಿಸಿ.

ಕನ್ಯಾ ರಾಶಿ

ರಾಶ್ಯಾಧಿಪತಿ ಷಷ್ಟದಲ್ಲಿ ಸೂರ್ಯನ ಜತೆ ಇದ್ದು ಶನಿಯು ಆರರಲ್ಲಿ ಇರುವುದು ನಿಮಗೆ ಲಾಭ ಕೀರ್ತಿ ತರಲಿದೆ. ಮುಂದೆಯೂ ಸುಖ ಇರಬೇಕಾದರೆ ಜೀವನದಲ್ಲಿ ಹಾದುಹೋದ ವ್ಯಕ್ತಿಗಳನ್ನು ಸ್ಮರಿಸಿ ದ್ರೋಹ ಬಗೆಯದೆ ಮುಂದೆ ಸಾಗಿದರೆ ಭಗವಂತನೇ ನಿಮ್ಮನ್ನು ಕಾಪಾಡುತ್ತಾನೆ. ಗುರು, ರಾಹು ಸಂಯೋಜನೆಯಲ್ಲಿ ಶರೀರ ಅಸ್ವಸ್ಥ ಆಗುತ್ತದೆ. ಧನ್ವಂತರಿ ಹೋಮ ಪೂಜೆ ಮಾಡಿ, ಅಷ್ಟೋತ್ತರ ಪಾರಾಯಣ ಮಾಡಿ.

ತುಲಾ ರಾಶಿ

ಪಂಚಮದಲ್ಲಿ ಶನಿ ಇದ್ದ ಕ್ಷಣ ನಿಮ್ಮನ್ನು ಕಷ್ಟದ ವ್ಯವಹಾರಗಳಲ್ಲಿ ಸಿಲುಕಿಸುತ್ತಾನೆ ಎಂದು ಹೇಳಲು ಆಗದು. ಶನಿಯ ಉಚ್ಚ ರಾಶಿಯಲ್ಲಿ ಜನಿಸಿದ ನಿಮಗೆ ಶನಿಯು ಎಲ್ಲೇ ಇದ್ದರೂ ಸುಖ ಕೊಡುತ್ತಾನೆ. ಮೇಷಕ್ಕೆ ಗುರು ಬರಲು ಶುಭವು, ಸುಖವು ಸಿಗುತ್ತದೆ.

ವೃಶ್ಚಿಕ ರಾಶಿ

ದೇವರು ಕೊಟ್ಟಾಗ ಎಲ್ಲವನ್ನೂ ಸರಿಪಡಿಸಿಕೊಳ್ಳಬಹುದು. ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ಆಕಸ್ಮಿಕವಾಗಿ ತಲೆದೋರುವ ನಷ್ಟಗಳು ಕಷ್ಟಗಳಾಗಿವೆ. ಸಂಧಾನ ಮಾಡಿಕೊಂಡರೆ ನಿಮ್ಮ ಬೇಡಿಕೆಗಳು ಈಡೇರುತ್ತವೆ. ಸಂಧಾನ ವಿಫಲ ಆದರೂ ಪರವಾಗಿಲ್ಲ, ಸವಲತ್ತುಗಳು ಯಥೇಚ್ಛವಾದ ಧನವು ಬಂದೇ ಬರುತ್ತದೆ. ಹಣದ ಸಂಕಷ್ಟದಲ್ಲಿ ಇರುವಾಗ ದೇವರು ಕೊಟ್ಟಷ್ಟೆ ಸಾಲದು ಎಂದುಕೊಂಡರೆ ನಷ್ಟ ಆಗುವುದು ನಿಮಗೆ. ಸುಖ-ಶಾಂತಿ ಕೊಡುವ ಸುಬ್ರಮಣ್ಯನನ್ನು ಪ್ರಾರ್ಥಿಸಿ.

ಧನುರ್ ರಾಶಿ

ದೋಣಿ ಮುಂದೆ ಸಾಗಿದರೆ ಮಾತ್ರ ದಡವನ್ನು ತಲುಪಬಹುದು. ನಾವಿಕನು ಎಲ್ಲರ ಕ್ಷೇಮ ನೋಡುತ್ತಾನೆ. ಯಾರನ್ನಾದರೂ ಹತ್ತಿಸಿಕೊಳ್ಳದಿದ್ದರೆ ಹಿಂದೆ ಹೋಗ ಬೇಕಾಗುತ್ತದೆ. ನಿಮ್ಮ ಆಸೆ ಆಕಾಂಕ್ಷೆ ಕುಂಠಿತ ಆಗಿದ್ದರೆ ಚಿಂತೆ ಮಾಡುವ ಅಗತ್ಯ ಇಲ್ಲ. ಧೈರ್ಯ ಸಾಹಸ ನಿಮ್ಮ ಧ್ಯೇಯ ಆಗಿರಲಿ. ಗುರು ಪಂಚಮಕ್ಕೆ ಬರುತ್ತಾನೆ. ಇಷ್ಟಸಿದ್ಧಿ ಆಗುತ್ತದೆ. ದುರ್ಗೆಯನ್ನು ಪ್ರಾರ್ಥಿಸಿ.

ಮಕರ ರಾಶಿ

ಮಕರಾಧಿಪತಿ ಕುಂಭದಲ್ಲಿ ಬಂದಿರುವುದು ನಿಮ್ಮ ಕಷ್ಟಗಳು ನೀಗುವುದರ ಸಂಕೇತ. ರಾಶಿಗೆ ಮೂರರಲ್ಲಿ ಗುರು ಇದ್ದಾನೆ.ನಷ್ಟ ಲೆಕ್ಕ ಹಾಕಿಕೊಳ್ಳದೆ ಬಂದಿದ್ದು ಜೋಪಾನ ಮಾಡಿಕೊಳ್ಳುವುದು ಒಳಿತು. ಅನನ್ಯವಾದ ಶಿವ ಭಕ್ತಿ ಇರಲಿ. ನಿಮ್ಮ ದಾರಿಯಲ್ಲಿ ಸಾಗಿರಿ. ಭಗವಂತನು ನಿಮ್ಮ ಈ ದಾರಿಯನ್ನು ಮೆಚ್ಚುತ್ತಾನೆ.

ಕುಂಭ ರಾಶಿ

ದ್ವಾದಶದಿಂದ ಜನ್ಮಕ್ಕೆ ಶನಿ ಬಂದು ದ್ವಿತೀಯದಲ್ಲಿ ಗುರು ಇದ್ದಾನೆ. ಆದರೆ, ತೃತೀಯದಲ್ಲಿ ರಾಹು ಇದ್ದು, ಶನಿಯ ಸಂಚಾರ ಆರಂಭ ಆಗಿದ್ದರೂ ಗುರು ಬಲ ನಿಮ್ಮನ್ನು ಎಲ್ಲ ಕಷ್ಟ ನಷ್ಟ ದಿಂದ ಪಾರು ಮಾಡಿ ಶೇಕಡಾ 70ರಷ್ಟು ಒಳಿತನ್ನು ಮಾಡುತ್ತಾನೆ. ಕುಂಭಾಸಿ ಗಣಪತಿಯನ್ನು ಪ್ರಾರ್ಥಿಸಿ, ಶುಭವಾಗುತ್ತದೆ.

ಮೀನ ರಾಶಿ

ಲಗ್ನದಲ್ಲಿ ಗುರು ಇದ್ದು, ದ್ವಾದಶದಲ್ಲಿ ಶನಿ ಇದ್ದಾನೆ. ಮನುಷ್ಯನು ನಕಾರಾತ್ಮಕ ಚಿಂತನೆ ಮಾಡಬಾರದು. ಅದಕ್ಕೆ ನಮ್ಮ ಪೂರ್ವಜರು ಎಲಾ್ಲ ಮಕ್ಕಳಿಗೂ ಶಾಲೆ ದೇವತಾ ಪ್ರಾರ್ಥನೆ, ರಾಷ್ಟ್ರಭಕ್ತಿ, ಸತ್ಯ ಧರ್ಮ ವಿಚಾರ ಹೇಳಿಕೊಡುತ್ತಾರೆ. ದೈವ ಪ್ರಾರ್ಥನೆಯತ್ತ ನಿಮ್ಮ ಗಮನ ಹರಿಸಿ. ದೇವರೇ ನಿಮ್ಮನ್ನು ಮುನ್ನಡೆಸುತ್ತಾನೆ. ಶನಿ ಪ್ರದೋಷದ ಕಥೆ ಪಾರಾಯಣ ಮಾಡಿ. ಶಿವ ಸಹಸ್ರ ನಾಮ ಪಾರಾಯಣ ಮಾಡಿ. ಮನಸ್ಸಿಗೆ ಆನಂದ ದೊರೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net