ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅಧಿಕ ಧನಾಗಮನ, ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ

Nitya Bhavisya Vijayavani
Published on

ಮೇಷ: ಅಧಿಕ ನಷ್ಟ ಆಗಬಹುದು. ಶತ್ರು ದಮನ. ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ. ಶುಭಸಂಖ್ಯೆ: 9

ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವವು. ಸಹೋದರಿಯಿಂದ ಅನುಕೂಲ. ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಶುಭಸಂಖ್ಯೆ: 3

ಮಿಥುನ: ಉದ್ಯೋಗ ಸ್ಥಳ, ಗೃಹ ಬದಲಾವಣೆಗೆ ಆಲೋಚನೆ. ನಿಮ್ಮ ಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತವಾಗಿ ಧನಾಗಮನ. ಶುಭಸಂಖ್ಯೆ: 7

ಕಟಕ: ವ್ಯವಹಾರದಲ್ಲಿ ಅಧಿಕ ಧನಾಗಮನ. ಅನಗತ್ಯ ತಿರುಗಾಟ ಮಾಡಬೇಕಾದೀತು. ಧೈರ್ಯ, ದಕ್ಷತೆ ದಿಟ್ಟತನ ಪ್ರದರ್ಶಿಸುವಿರಿ. ಶುಭಸಂಖ್ಯೆ: 8

ಸಿಂಹ: ಆದಾಯ ಮತ್ತು ನಷ್ಟ ಸಮಪ್ರಮಾಣ. ಉತ್ತಮ ಹೆಸರು, ಗೌರವ. ಅಭಿವೃದ್ಧಿ ಹೊಂದುವ ಹಂಬಲ. ಆರ್ಥಿಕ ಒತ್ತಡದಿಂದ ಮುಕ್ತಿ. ಶುಭಸಂಖ್ಯೆ: 6

ಕನ್ಯಾ: ಮಗಳ ವಿವಾಹದ ವಿಷಯದಲ್ಲಿ ಚಿಂತೆ. ಉದ್ಯೋಗ ಒತ್ತಡ. ವ್ಯಾಪಾರಸ್ಥರಿಗೆ ಅಧಿಕ ನಷ್ಟ. ರಾಜಕೀಯದವರಿಂದ ಸಂಕಷ್ಟ. ಶುಭಸಂಖ್ಯೆ: 8

ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರ ಪ್ರಾಪಿ. ಉದ್ಯೋಗ ಲಾಭ. ಆದಾಯದಲ್ಲಿ ಕುಂಠಿತ. ಅದೃಷ್ಟ ವಂಚಿತ ಎಂಬ ಬೇಸರ. ಶುಭಸಂಖ್ಯೆ: 1

ವೃಶ್ಚಿಕ: ಸರ್ಕಾರದಿಂದ ಅನುಕೂಲ. ಸ್ತ್ರೀಯರಿಗೆ ಅನುಕೂಲಕರ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ. ಶುಭಸಂಖ್ಯೆ: 6

ಧನುಸ್ಸು: ಗಣ್ಯರ ಭೇಟಿ. ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ. ಪ್ರಯಾಣದಲ್ಲಿ ತೊಂದರೆ ಸಾಧ್ಯತೆ. ಉದ್ಯೋಗ ಸಮಸ್ಯೆಗಳು. ಶುಭಸಂಖ್ಯೆ: 3

ಮಕರ: ಅಡಿಕೆ, ಕಾಫಿ ಬೆಳೆಗಾರರಿಗೆ ನಷ್ಟದ ಭೀತಿ. ಸಂಗಾತಿಯೊಂದಿಗೆ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಾನಸಿಕವಾಗಿ ಒತ್ತಡ. ಶುಭಸಂಖ್ಯೆ: 2

ಕುಂಭ: ಅಪರಿಚಿತರಿಂದ ಮೋಸವಾಗಬಹುದು, ಎಚ್ಚರದಿಂದಿರಿ. ಆಹಾರದಿಂದ ಸಮಸ್ಯೆ. ಅಧಿಕಾರಿ ಗಳಿಂದ ವಿನಾಕಾರಣ ತೊಂದರೆ. ಶುಭಸಂಖ್ಯೆ: 2

ಮೀನ: ಪ್ರೀತಿ-ಪ್ರೇಮದ ವಿಷಯಗಳಲ್ಲಿ ವೈಮನಸ್ಯ, ವಾಗ್ವಾದ ಉಂಟಾದೀತು. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟದ ಪ್ರಮಾಣ ಅಧಿಕ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net