ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೊಸ ಪರಿಚಯಸ್ಥರಿಂದ ಆರ್ಥಿಕ ಸಹಾಯ, ಸಂಸಾರದಲ್ಲಿ ವಿಶ್ವಾಸ ವೃದ್ಧಿ

Nithya Bhavishya
Published on

ಮೇಷ: ಬಂಧುಗಳಿಂದ ಅಯಾಚಿತ ನೆರವು ಸಿಗಲಿದೆ. ಹೊಸ ಉದ್ಯಮದಲ್ಲಿ ಪ್ರಗತಿ. ಮಹಿಳೆಯರ ಪ್ರತಿಭೆಗೆ ಉತ್ತೇಜನ ಸಿಗಲಿದೆ. ಶುಭಸಂಖ್ಯೆ: 2

ವೃಷಭ: ಉಳಿತಾಯ ಯೋಜನೆ ಏಜೆಂಟರಿಗೆ ಸುದಿನ. ಸರ್ಕಾರಿ ನೌಕರರಿಗೆ ಹೆಚ್ಚಿದ ಒತ್ತಡ. ಆದರೂ ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ: 6

ಮಿಥುನ: ಸ್ನೇಹಿತರೊಂದಿಗೆ ಉತ್ತಮ ಸಂಬಂಧ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲು. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಶುಭಸಂಖ್ಯೆ: 8

ಕಟಕ: ಸ್ವಂತ ಉದ್ಯೋಗದಲ್ಲಿ ಯಥಾಸ್ಥಿತಿ. ಹೋಟೆಲ್ ಉದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಪ್ರಯತ್ನ ನಿರಂತರವಾಗಿರಲಿ. ಶುಭಸಂಖ್ಯೆ:4

ಸಿಂಹ: ಕ್ರಿಯಾಶಕ್ತಿಯಿಂದ ಆದಾಯ ಹೆಚ್ಚಿಸಿಕೊಳ್ಳುವಿರಿ. ಹೊಸ ಪರಿಚಯಸ್ಥರಿಂದ ಆರ್ಥಿಕ ಸಹಾಯ. ಸಂಸಾರದಲ್ಲಿವಿಶ್ವಾಸ ವೃದ್ಧಿ.ಶುಭಸಂಖ್ಯೆ: 2

ಕನ್ಯಾ: ಮನೆಯಲ್ಲಿ ಶಾಂತಿ ಸಮಾಧಾನ. ಆತ್ಮೀಯರ ಭೇಟಿಯಿಂದ ಸಂತೋಷ. ಉದ್ಯೋಗ ಸ್ಥಾನದಲ್ಲಿ ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 8

ತುಲಾ: ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ಸುಧಾರಣೆ. ಹಿರಿಯರಿಂದ ಸೂಕ್ತ ಮಾರ್ಗದರ್ಶನ. ಗೃಹಾಲಂಕಾರಕ್ಕೆ ಧನವ್ಯಯವಾದೀತು. ಶುಭಸಂಖ್ಯೆ:1

ವೃಶ್ಚಿಕ: ಸಾಮಾಜಿಕ ಜಾಲತಾಣದ ಹೆಚ್ಚಿನ ಬಳಕೆಯಿಂದ ಅನಾರೋಗ್ಯ ಸಮಸ್ಯೆ. ಉದ್ಯೋಗ ಸ್ಥಾನದಲ್ಲಿ ನಿಮ್ಮ ಹಿರಿತನಕ್ಕೆ ಬೆಲೆ ಸಿಗಲಿದೆ. ಶುಭಸಂಖ್ಯೆ: 6

ಧನುಸ್ಸು: ಅಮಾಯಕರ ಮೇಲೆ ಅಪವಾದ ಹೊರಿಸಿ ಪಶ್ಚಾತಾಪ ಪಡುವಿರಿ. ಸಣ್ಣ ಪ್ರಮಾಣದ ಉದ್ಯಮಸ್ಥ ಮಹಿಳೆಯರಿಗೆ ಆರ್ಥಿಕ ಪ್ರಗತಿ. ಶುಭಸಂಖ್ಯೆ:7

ಮಕರ: ಕೆಲಸದ ಒತ್ತಡ ಕಡಿಮೆಯಾಗಲಿದೆ. ನಿಮ್ಮ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಸಿಗಲಿದೆ. ಮಗಳಿಗೋಸ್ಕರ ದೂರ ಪ್ರಯಾಣ. ಶುಭಸಂಖ್ಯೆ: 9

ಕುಂಭ:  ತೈಲ ಉತ್ಪನ್ನಗಳ ಮಾರಾಟಗಾರರಿಗೆ ಅನಿರೀಕ್ಷಿತ ಲಾಭ. ಸೇವಾ ಕಾರ್ಯಗಳಲ್ಲಿ ಕೈಜೋಡಿಸಿ. ನೂತನ ಗೃಹ ನಿರ್ವಣಕ್ಕೆ ಸಿದ್ಧತೆ. ಶುಭಸಂಖ್ಯೆ:3

ಮೀನ: ಸ್ವಉದ್ಯೋಗದವರಿಗೆ ಸುದಿನ. ಕಲಾವಿದರಿಗೆ ಕೀರ್ತಿ. ಮಾತೃಮೂಲವಾದ ಆಸ್ತಿ ವಿಚಾರ ಇತ್ಯರ್ಥ. ಅವಿವಾಹಿತರಿಗೆ ವಿವಾಹ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net