ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ

Nithya Bhavishya
Published on

ಮೇಷ: ಉನ್ನತ ಸ್ಥಾನಮಾನ ಸಿಗಲಿದೆ. ಪರರ ಆಸ್ತಿ ಕಲಹದಲ್ಲಿ ಮಧ್ಯಸ್ಥಿಕೆ ವಹಿಸುವಿರಿ. ದೈವಿಕ ಚಿಂತನೆ ಇರಲಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 5

ವೃಷಭ: ನೌಕರಿಯಲ್ಲಿ ಬಡ್ತಿ ದೊರೆತು ಸಮಾಧಾನ. ಕೈಹಾಕಿದ ಕೆಲಸಗಳಲ್ಲಿ ಜಯ. ಸುಖ ಭೋಜನ. ಬಂಧುಗಳಲ್ಲಿ ಕಲಹವಾದೀತು. ಶುಭಸಂಖ್ಯೆ: 8

ಮಿಥುನ: ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಿರಿ. ಷೇರು ವ್ಯವಹಾರದಲ್ಲಿ ಆದಾಯ. ಚಂಚಲ ಮನಸ್ಸು ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ:3

ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಭಾಗ್ಯವೃದ್ಧಿ. ಸಂಕಟ. ವಿನಾಕಾರಣ ಬಂಧುಗಳೊಂದಿಗೆ ನಿಷ್ಠ್ಠುರ. ಶುಭಸಂಖ್ಯೆ:8

ಸಿಂಹ: ವಹಿಸಿಕೊಂಡ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಹೊಸ ವ್ಯಕ್ತಿಗಳ ಪರಿಚಯ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಮಂದಗತಿ. ಶುಭಸಂಖ್ಯೆ:4

ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಮನೆಯಲ್ಲಿ ತಾಳ್ಮೆ ಅತಿಅಗತ್ಯ. ಕೃಷಿಕರಿಗೆ ಆಕಸ್ಮಿಕ ನಷ್ಟ. ಆಸ್ತಿ ವಿಚಾರದಲ್ಲಿ ಕಲಹ.ಶುಭಸಂಖ್ಯೆ:1

ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ ಬರಬಹುದು. ನಿದ್ರಾಭಂಗ. ಕಾಲು ನೋವು. ಆರ್ಥಿಕ ಸಂಕಷ್ಟ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ:9

ವೃಶ್ಚಿಕ: ಮಿತ್ರರಿಂದ ಆರ್ಥಿಕ ಸಹಾಯ. ಆಲಸ್ಯ ಮನೋಭಾವದಿಂದ ಅವಕಾಶ ಕಳೆದುಕೊಳ್ಳುವಿರಿ. ಸಣ್ಣವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ:2

ಧನುಸ್ಸು: ಮಾತಿನ ಮೇಲೆ ನಿಗಾ ಇರಲಿ. ಮಗನ ವಿವಾಹಕ್ಕೆ ಅಡಚಣೆಯಾಗುವುದು. ಗೃಹ ನಿರ್ವಣಕ್ಕೆ ಸಾಲ ಮಾಡುವ ಸಾಧ್ಯತೆ. ಶುಭಸಂಖ್ಯೆ: 7

ಮಕರ: ಹೊಸ ವ್ಯವಹಾರದಲ್ಲಿ ಕುಂಠಿತ. ನಿರ್ಧಾರ ತೆಗೆದುಕೊಳ್ಳಲು ಆಪ್ತರ ಸಲಹೆ. ಉದ್ಯೋಗಸ್ಥ ಮಹಿಳೆಯರಿಗೆ ಸಾಧಾರಣ ಫಲ. ಶುಭಸಂಖ್ಯೆ:4

ಕುಂಭ:  ಅನವಶ್ಯಕ ಖರ್ಚಿಗೆ ನೂರಾರು ದಾರಿ. ವಿರೋಧಿಗಳ ಕಿರುಕುಳ. ಅತಿ ಕೋಪದಿಂದ ನಷ್ಟ. ಅನ್ಯರ ಹಸ್ತಕ್ಷೇಪದಿಂದ ತೊಂದರೆ. ಶುಭಸಂಖ್ಯೆ:4

ಮೀನ: ಪ್ರಯತ್ನದಿಂದ ಕಾರ್ಯಜಯ. ತಿರುಗಾಟ. ನಂಬಿಕಸ್ಥರಿಂದ ಮೋಸ. ಋಣವಿಮೋಚನೆ. ಅನವಶ್ಯಕ ವಿಷಯಗಳಿಂದ ದೂರವಿರಿ.ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net