ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿಶೇಷ ಆದಾಯ ಬರಲಿದೆ

Nitya Bhavisya Vijayavani
Published on

ಮೇಷ: ಹಣಕಾಸಿನ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ತಾಮ್ರದ ವ್ಯಾಪಾರಸ್ಥರಿಗೆ ಬೇಡಿಕೆ. ರೇಷ್ಮೆ ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 1

ವೃಷಭ: ಕೃಷಿಯ ಕಡೆ ಒಲವು ತೋರಿಸುವಿರಿ. ಮಹಿಳಾ ವೈದ್ಯರಿಗೆ ವಿಶೇಷ ದಿನ. ಬ್ಯಾಂಕಿಂಗ್ ಸಂಸ್ಥೆಗಳಿಗೆ ವಿಶೇಷ ಆದಾಯ ಬರಲಿದೆ. ಶುಭಸಂಖ್ಯೆ: 9

ಮಿಥುನ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ವಾಹನ ಚಾಲಕರಿಗೆ ಲಾಭ. ವಿವಾಹಕ್ಕೆ ಕಂಕಣ ಕೂಡಿಬರಲಿದೆ. ಶುಭಸಂಖ್ಯೆ: 5

ಕಟಕ: ಸಮಾಜಸೇವೆಯಿಂದ ಜನಪ್ರಿಯರಾಗುವಿರಿ. ಮಕ್ಕಳ ಆರೋಗ್ಯ ವಿಷಯದಲ್ಲಿ ಎಚ್ಚರ ವಹಿಸಿ. ರಾಜಕೀಯದಲ್ಲಿ ಯಶಸ್ಸು. ಶುಭಸಂಖ್ಯೆ:7

ಸಿಂಹ: ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ ದೊರೆಯಲಿದೆ. ರಾಜಕಾರಣಿಗಳಿಗೆ ಇಂದು ಸುಸಮಯ. ಶುಭಸಂಖ್ಯೆ: 3

ಕನ್ಯಾ: ಹೂವಿನ ವ್ಯಾಪಾರಿಗಳಿಗೆ ಹೆಚ್ಚು ಆದಾಯ. ರೈತರ ಫಸಲಿಗೆ ಬೇಡಿಕೆ, ಉದ್ಯೋಗಸ್ಥ ಮಹಿಳೆಯರ ಆರ್ಥಿಕತೆಯಲ್ಲಿ ಚೇತರಿಕೆ. ಶುಭಸಂಖ್ಯೆ: 8

ತುಲಾ: ಕಬ್ಬಿಣ ಮತ್ತು ಮರಳು ಮಾರಾಟಸ್ಥರಿಗೆ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರ. ಹಳೆಯ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 4

ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಅಸ್ವಸ್ಥತೆ ಕಾಡಲಿದೆ. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ಬೇಡಿಕೆ. ಶುಭಸಂಖ್ಯೆ: 3

ಧನುಸ್ಸು: ಹೈನುಗಾರಿಕೆಗೆ ಉತ್ಪನ್ನಗಳಿಗೆ ಬೇಡಿಕೆ. ಮನರಂಜನಾ ವಿಭಾಗದವರಿಗೆ ಅವಕಾಶ. ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲ. ಶುಭಸಂಖ್ಯೆ: 6

ಮಕರ: ಪಾಲುದಾರಿಕೆಯಲ್ಲಿ ಸಮಸ್ಯೆಯಾಗಲಿದೆ. ಆರಕ್ಷಕ ವರ್ಗದವರು ಎಚ್ಚರವಹಿಸಿ. ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸುಸಮಯ. ಶುಭಸಂಖ್ಯೆ: 7

ಕುಂಭ:  ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಗೊಂದಲ. ಧಾರ್ವಿುಕ ಕ್ಷೇತ್ರಗಳ ಭೇಟಿ. ಸ್ವಯಂ ಉದ್ಯೋಗದ ಮಹಿಳೆಯರಿಗೆ ಧನಲಾಭ. ಶುಭಸಂಖ್ಯೆ: 2

ಮೀನ: ನಿದ್ರಾಹೀನತೆ ಅತಿಯಾಗಿ ಕಾಡಬಹುದು. ಕುಶಲಕರ್ವಿುಗಳಿಗೆ ಬೇಡಿಕೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net