

ಮೇಷ: ಸರ್ಕಾರಿ ನೌಕರರಿಗೆ ಕಷ್ಟಕರ ದಿನ. ಸಾರಿಗೆ ವ್ಯವಹಾರದಲ್ಲಿ ನಷ್ಟ. ಉದ್ಯೋಗಸ್ಥ ಮಹಿಳೆಯರು ಚಿಂತನಶೀಲರಾಗಿ. ಕೋಪ ಬೇಡ. ಶುಭಸಂಖ್ಯೆ: 5
ವೃಷಭ: ನ್ಯಾಯಾಲಯದ ಕೆಲಸಗಳಲ್ಲಿ ಯಶ. ಉದ್ಯಮಿಗಳಿಗೆ ಆದಾಯದ ಹೊಸ ಮೂಲ ಲಭ್ಯ. ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಶುಭಸಂಖ್ಯೆ:9
ಮಿಥುನ: ಒತ್ತಡ ಕಡಿಮೆಯಾಗುತ್ತದೆ. ಬೆಂಕಿಯ ಬಗ್ಗೆ ಎಚ್ಚರ. ಕೃಷಿ ಉಪಕರಣ ದುರಸ್ತಿ ಮಾಡಿಸಿ. ವಿದ್ಯಾರ್ಥಿಗಳು ಗುರಿಯತ್ತ ಗಮನಿಸಿ. ಶುಭಸಂಖ್ಯೆ:9
ಕಟಕ: ವಿದೇಶದಿಂದ ಉದ್ಯೋಗಾವಕಾಶ. ಹಣಕಾಸು ವ್ಯವಹಾರದಲ್ಲಿ ಲಾಭ ಪಡೆಯಲಿದ್ದೀರಿ. ಆರೋಗ್ಯ ಹದಗೆಡುವ ಸಂಭವ. ಶುಭಸಂಖ್ಯೆ: 4
ಸಿಂಹ: ಬಡ್ತಿಯೊಂದಿಗೆ ವರ್ಗಾವಣೆ ಸಾಧ್ಯತೆ ಇದೆ. ಅನುಭವವಿಲ್ಲದ ವ್ಯವಹಾರದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬಾರದು. ಶುಭಸಂಖ್ಯೆ: 7
ಕನ್ಯಾ: ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಜೀವನ ಮಾಡಲು ಉತ್ತಮ ಅವಕಾಶ. ರಾಜಕೀಯದವರು ಸಾರ್ವಜನಿಕ ಸೇವೆಯತ್ತ ಗಮನ ಹರಿಸಿ.ಶುಭಸಂಖ್ಯೆ:3
ತುಲಾ: ಯುವ ಕಲಾವಿದರು ಗುರಿಯತ್ತ ಗಮನಹರಿಸಿ ಮುನ್ನಡೆಯಲು ಪ್ರಯತ್ನಿಸಿ. ವೀಸಾ ಸಮಸ್ಯೆಯಿಂದ ಸ್ವದೇಶಕ್ಕೆ ಬರಲು ವಿಳಂಬ. ಶುಭಸಂಖ್ಯೆ:1
ವೃಶ್ಚಿಕ: ಕೌಟುಂಬಿಕ ವ್ಯವಹಾರವನ್ನು ಸರಿಯಾಗಿ ಇತ್ಯರ್ಥಪಡಿಸಬೇಕು. ವ್ಯಾಪಾರದ ಶತ್ರುಗಳು, ವಿರೋಧಿಗಳು ಸಕ್ರಿಯರಾಗಬಹುದು. ಶುಭಸಂಖ್ಯೆ:9
ಧನುಸ್ಸು: ಸಹೋದ್ಯೋಗಿಗಳೊಂದಿಗೆ ವಿವಾದ. ಚಿನ್ನ -ಬೆಳ್ಳಿ ವ್ಯಾಪಾರಿಗಳಿಗೆ ಲಾಭ. ಯುವಕರು ಕೆಟ್ಟ ಸಹವಾಸದಿಂದ ದೂರವಿರಿ.ಶುಭಸಂಖ್ಯೆ:3
ಮಕರ: ಆತ್ಮಾವಲೋಕನ ಪ್ರವೃತ್ತಿ ಅಳವಡಿಸಿಕೊಳ್ಳಿ. ಸರ್ಕಾರಿ ಕ್ಷೇತ್ರದಲ್ಲಿ ಲಾಭ. ಕೃಷಿ ಉತ್ಪನ್ನಗಳ ವ್ಯಾಪಾರಸ್ಥರ ಆದಾಯದ ಸ್ಥಿತಿ ಉತ್ತಮ. ಶುಭಸಂಖ್ಯೆ: 2
ಕುಂಭ: ಹಳೆಯದರ ಪುನರಾವರ್ತನೆ ತಪ್ಪಿಸಿದರೆ ಒಳ್ಳೆಯದು. ಸಮಯ ವ್ಯರ್ಥ ಮಾಡುವುದನ್ನು ನಿಲ್ಲಿಸಿ. ಆಲಸ್ಯಬಿಟ್ಟು ಕೆಲಸ ಮಾಡಿ. ಶುಭಸಂಖ್ಯೆ: 6
ಮೀನ: ದುಬಾರಿ ವಸ್ತುವಿನ ಖರೀದಿಯಲ್ಲಿ ಮೋಸವಾದೀತು. ಕಚೇರಿಯಲ್ಲಿ ಉದ್ಯೋಗಿಗಳೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಶುಭಸಂಖ್ಯೆ: 4