

ಮೇಷ: ಪಾರಂಪರಿಕ ವ್ಯವಹಾರಗಳಲ್ಲಿ ಮುನ್ನಡೆ. ಸಿನಿಮಾರಂಗದವರಿಗೆ ಶುಭದಾಯಕ ದಿನ. ವ್ಯಾಸಂಗದಲ್ಲಿ ತೊಂದರೆ. ಶುಭಸಂಖ್ಯೆ: 5
ವೃಷಭ: ಸ್ನೇಹಿತರ ಸಹಕಾರ ದೊರೆಯಲಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭಸುದ್ದಿ ಬರಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ತೀರ ಅಗತ್ಯ. ಶುಭಸಂಖ್ಯೆ: 4
ಮಿಥುನ: ಹೊಸ ಕೆಲಸದಲ್ಲಿ ಜಯಶಾಲಿಯಾಗುವಿರಿ. ಕಠಿಣ ಶ್ರಮದಿಂದ ಫಲ ದೊರೆಯುವುದು. ಕುಟುಂಬದ ಸದಸ್ಯರಿಂದ ತೊಂದರೆ. ಶುಭಸಂಖ್ಯೆ 9
ಕಟಕ: ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣಿಸಲಿದೆ. ಆಹಾರ ವಿಷಯದಲ್ಲಿ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ. ಶುಭಸಂಖ್ಯೆ: 7
ಸಿಂಹ: ಕಾರ್ವಿುಕ ವರ್ಗದವರಿಗೆ ಉತ್ತಮ ದಿನ. ಕರಕುಶಲ ವಸ್ತುಗಳ ತಯಾರಕರಿಗೆ ಸೂಕ್ತ ಕಾಲ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಲಿದೆ. ಶುಭಸಂಖ್ಯೆ:5
ಕನ್ಯಾ: ಸಾಲ ತೀರಿಸಲು ಸ್ನೇಹಿತರ ಸಹಕಾರ ಸಿಗಲಿದೆ. ಉದ್ಯೋಗದಲ್ಲಿ ಅಭಿವೃದ್ಧಿ. ಮಕ್ಕಳ ಆರೋಗ್ಯದ ವಿಷಯದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 3
ತುಲಾ: ಯೋಜನೆಗಳ ಬಗ್ಗೆ ಸಾರಾಸಾರ ವಿಚಾರಿಸಿ ಮುನ್ನಡೆಯಿರಿ. ಕಟ್ಟಡ ವಿನ್ಯಾಸಕರಿಗೆ ಲಾಭದ ದಿನ. ಮಾತುಗಳಿಂದ ಮುಜುಗರ. ಶುಭಸಂಖ್ಯೆ: 6
ವೃಶ್ಚಿಕ: ಆದಾಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಿರಿ. ಪರಿಸರವಾದಿಗಳಿಗೆ ಗೌರವ. ಸಂತ ಉದ್ಯೋಗದಲ್ಲಿ ಇರುವವರಿಗೆ ಆಶಾದಾಯಕ ದಿನ. ಶುಭಸಂಖ್ಯೆ: 2
ಧನುಸ್ಸು: ಬಂಧುಗಳಿಂದ ಸಮಸ್ಯೆ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿವಸ. ನೌಕರರಿಗೆ ಅಧಿಕಾರಿಗಳಿಂದ ಸಹಾಯ. ಶುಭಸಂಖ್ಯೆ: 6
ಮಕರ: ಸಿದ್ಧ ಉಡುಪುಗಳ ತಯಾರಿಕರಿಗೆ, ಸ್ತ್ರೀಯರಿಗೆ ಮಾನಸಿಕ ವೇದನೆ ಕಾಡಬಹುದು. ವಿವಾಹ ಯೋಗ. ಆದಾಯದಲ್ಲಿ ಏರಿಕೆ. ಶುಭಸಂಖ್ಯೆ: 6
ಕುಂಭ: ಬ್ಯಾಂಕಿನಿಂದ ಧನಸಹಾಯ ಒದಗಿಬರಲಿದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ಬಂಧುಗಳಿಂದ ಅನುಕೂಲ. ಶುಭಸಂಖ್ಯೆ: 4
ಮೀನ: ಮನೆಕಟ್ಟಿ ಮಾರುವ ವೃತ್ತಿಯವರಿಗೆ ಲಾಭ. ವಿದ್ಯುತ್ ಸ್ಥಾವರದ ಕಾರ್ವಿುಕರು ಹುಷಾರಾಗಿ ಇರಿ. ಹಳೆಯ ವಸ್ತು ಸಂಗ್ರಹದಲ್ಲಿ ಆಸಕ್ತಿ. ಶುಭಸಂಖ್ಯೆ: 1