ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅಧಿಕ ಖರ್ಚು ಆದರೂ ಆರ್ಥಿಕ ಅನುಕೂಲವಿದೆ

Nithya Bhavishya
Published on

ಮೇಷ: ಪತ್ರದಿಂದ ಅನುಕೂಲ. ಸಾರಿಗೆ ಅಧಿಕಾರಿಗಳಿಗೆ ಅಪಮಾನ. ಸ್ತ್ರೀಯರಿಗೆ ವೇದನೆ. ಕಾನೂನುಬಾಹಿರ ಸಂಪಾದನೆ ಬೇಡ. ಶುಭಸಂಖ್ಯೆ: 5

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ ಬರಬಹುದು. ಅನಾರೋಗ್ಯ ಸಮಸ್ಯೆ ಕಾಡಲಿದೆ. ಸ್ಥಿರಾಸ್ತಿ ಮೇಲೆ ಸಾಲ ಮಾಡುವಿರಿ. ಶುಭಸಂಖ್ಯೆ: 1

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ- ಪ್ರೇಮದ ವಿಷಯಗಳಲ್ಲಿ ಸಮಸ್ಯೆಯಾಗಬಹುದು. ಮಕ್ಕಳು ಶತ್ರುಗಳಾಗುವರು. ಶುಭಸಂಖ್ಯೆ: 7

ಕಟಕ: ಸ್ವಯಂಕೃತ ಅಪರಾಧದಿಂದ ನಷ್ಟ. ಹಿತಶತ್ರುಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಶುಭಸಂಖ್ಯೆ: 2

ಸಿಂಹ: ಆಸೆಗಳು ಈಡೇರಲಿವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಶುಭಸಂಖ್ಯೆ:1

ಕನ್ಯಾ: ಮೋಸ ಮತ್ತು ನಷ್ಟ ಸಂಭವಿಸುವ ಸಾಧ್ಯತೆಯಿದೆ. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 9

ತುಲಾ: ಸುಲಲಿತವಾಗಿ ಧನ ಸಂಪಾದನೆಯಾಗುವುದು. ಅನಿರೀಕ್ಷಿತ ಧನ ಲಾಭಯೋಗವೂ ಇದೆ. ಕಳೆದುಕೊಂಡ ವಸ್ತು ದೊರಕುವುದು. ಶುಭಸಂಖ್ಯೆ: 6

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ನಿರಾಸೆ. ಅವಕಾಶಗಳು ಕೈತಪ್ಪುವ ಸಾಧ್ಯತೆಯಿದೆ. ವೈಯಕ್ತಿಕ ನಿಂದನೆ. ಸಾಲಗಾರರ ಕಿರುಕುಳ. ಶುಭಸಂಖ್ಯೆ: 3

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ. ಮಹಿಳಾ ಉದ್ಯಮಿಗಳಿಗೆ ನಷ್ಟ ಮತ್ತು ಸಮಸ್ಯೆ.ಶುಭಸಂಖ್ಯೆ:3

ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸ ಮಾಡಲು ಬಣ್ಣದ ಮಾತಾಡುವರು, ನಂಬಬೇಡಿ. ಸೇವಾ ವೃತ್ತಿಯ ಉದ್ಯೋಗ ಲಾಭ. ಶುಭಸಂಖ್ಯೆ: 2

ಕುಂಭ:  ಮಕ್ಕಳ ನಡವಳಿಕೆಯಿಂದ ಬೇಸರವಾಗುವುದು. ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ಶುಭಸಂಖ್ಯೆ: 5

ಮೀನ: ಸಾಲ ಮಾಡುವ ಪರಿಸ್ಥಿತಿ ಬರಬಹುದು. ಕೋರ್ಟ್ ಕೇಸುಗಳಲ್ಲಿ ಜಯ. ಅಧಿಕ ಖರ್ಚು ಆದರೂ ಆರ್ಥಿಕ ಅನುಕೂಲವಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net