

ಮೇಷ: ಋಣಾತ್ಮಕ ಚಿಂತೆಗಳು ಜಾಸ್ತಿ ಕಾಡುವ ಸಾಧ್ಯತೆ. ತರಕಾರಿ ವ್ಯಾಪಾರಿಗಳಿಗೆ ನಷ್ಟ. ಸಿನಿಮಾ ಕಲಾವಿದರಿಗೆ ಶುಭದಾಯಕ ದಿನ. ಶುಭಸಂಖ್ಯೆ: 5
ವೃಷಭ: ಸಣ್ಣಪುಟ್ಟ ಅಡಚಣೆಗಳಿಂದ ಕೆಲಸ ವಿಳಂಬ. ವಿದ್ಯಾರ್ಥಿಗಳ ಸಾಧನೆಗೆ ತಕ್ಕ ಪುರಸ್ಕಾರ. ಮಕ್ಕಳ ಆರೋಗ್ಯದತ್ತ ಗಮನಹರಿಸಿ. ಶುಭಸಂಖ್ಯೆ:9
ಮಿಥುನ: ಮಗಳಿಂದ ಶುಭವಾರ್ತೆ. ಕ್ರೀಡಾಪಟುಗಳಿಗೆ ಯಶದಾಯಕ ದಿನ. ಮಾಧ್ಯಮ ಕ್ಷೇತ್ರದ ವರದಿಗಾರರು ಎಚ್ಚರಿಕೆಯಿಂದಿರಿ. ಶುಭಸಂಖ್ಯೆ: 3
ಕಟಕ: ದಿನಸಿ ವರ್ತಕರಿಗೆ ಅನಿರೀಕ್ಷಿತ ಲಾಭ ಒದಗಿಬರಲಿದೆ. ಕೌಟುಂಬಿಕವಾಗಿ ಭಿನ್ನ ಅಭಿಪ್ರಾಯಗಳು ಚರ್ಚೆಯಿಂದ ಸರಿಯಾಗುತ್ತವೆ. ಶುಭಸಂಖ್ಯೆ: 3
ಸಿಂಹ: ಹೈನು ಉತ್ಪನ್ನಗಳಿಂದ ಆದಾಯ. ನಿರ್ಧಾರ ಕೈಗೊಳ್ಳುವಾಗ ಸಮಾಧಾನಚಿತ್ತರಾಗಿರಿ. ಹಣಕಾಸಿನ ವ್ಯಾಮೋಹದಿಂದ ತೊಂದರೆ. ಶುಭಸಂಖ್ಯೆ:2
ಕನ್ಯಾ: ಗುತ್ತಿಗೆದಾರರಿಗೆ, ವ್ಯಾಪಾರಸ್ಥರಿಗೆ ಲಾಭದ ದಿನ. ಜಟಿಲ ವಿಷಯಗಳತ್ತ ಗಮನಹರಿಸಿ. ವಿವಾಹಾಕಾಂಕ್ಷಿಗಳಿಗೆ ಶುಭ ಸಂದೇಶ. ಶುಭಸಂಖ್ಯೆ:9
ತುಲಾ: ಜವಾಬ್ದಾರಿಯುತ ಕೆಲಸಗಳ ನಿರ್ವಹಣೆ. ಸ್ಪರ್ಧಾತ್ಮಕ ವಾತಾವರಣ ಎದುರಿಸಬೇಕಾಗುವುದು. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ:4
ವೃಶ್ಚಿಕ: ಹಿರಿಯ ಸಹೋದ್ಯೋಗಿಗಳಿಂದ ಸಹಾಯ. ಔಷಧ ವ್ಯಾಪಾರಿಗಳಿಗೆ ಲಾಭ. ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ. ಶುಭಸಂಖ್ಯೆ:7
ಧನುಸ್ಸು: ಸಹಾಯ ಪಡೆದವರೇ ದೂಷಿಸುವರು. ಅವರ ತಪ್ಪಿಗೆ ಬೇಸರಿಸಬೇಡಿ. ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ. ಕುಟುಂಬದಲ್ಲಿ ಅಶಾಂತಿ. ಶುಭಸಂಖ್ಯೆ: 8
ಮಕರ: ಶೀಘ್ರ ಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ. ಕಪಟವಿಲ್ಲದ ಮಾತಿನಿಂದ ನಿಷ್ಠುರ. ಮಗಳ ಉನ್ನತಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:2
ಕುಂಭ: ಛಾಯಾಗ್ರಾಹಕರಿಗೆ ಶುಭದಾಯಕ ದಿನ. ಮಾನಸಿಕ ವ್ಯಥೆ ನಿವಾರಣೆ. ಮಹಿಳೆಯರಿಗೆ ಸರ್ಕಾರಿ ಸವಲತ್ತು ದೊರೆಯುತ್ತದೆ. ಶುಭಸಂಖ್ಯೆ:8
ಮೀನ: ಸಹೋದರಿಯರ ಸಹಕಾರದಿಂದ ಆರ್ಥಿಕ ಸಮಸ್ಯೆಯಿಂದ ಹೊರಬರುವಿರಿ. ಪ್ರಾಮಾಣಿಕ ದುಡಿಮೆಯಿಂದಾಗಿ ಮನಃಶಾಂತಿ. ಶುಭಸಂಖ್ಯೆ: 9