ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಿಮ್ಮ ಆತ್ಮಬಲ ದೈವ ಬಲದಿಂದ ಕೆಲಸದಲ್ಲಿ ಯಶಸ್ಸು

Nithya Bhavishya
Published on

ಮೇಷ: ಕಲಾವಿದರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ. ಗೆಳೆಯರಿಂದ ಮೋಸ. ನಿಮ್ಮ ಆತ್ಮಬಲ ದೈವ ಬಲದಿಂದ ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 2

ವೃಷಭ: ಮಹಿಳಾ ಉದ್ಯಮಿಗಳಿಗೆ ತಿರುವು. ಧಾರ್ವಿುಕ ಕ್ಷೇತ್ರದ ಮೇಲ್ವಿಚಾರಕರಿಗೆ ಮಾನಸಿಕವಾಗಿ ಅಶಾಂತಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ:9

ಮಿಥುನ: ಅಸಹನೆಯಿಂದ ಒತ್ತಡ ಜಾಸ್ತಿ. ಅಸಹಾಯಕರಿಗೆ ಸಹಾಯ ಮಾಡಿದ ಸಮಾಧಾನ. ಮನೆಯಲ್ಲಿ ಶುಭ ಕಾರ್ಯದ ಸಡಗರ. ಶುಭಸಂಖ್ಯೆ: 3

ಕಟಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಬೇಡ. ಮಕ್ಕಳ ಅವಿಧೇಯತೆಯನ್ನು ಬುದ್ಧಿ ಮಾತುಗಳಿಂದ ಸರಿಪಡಿಸುವಿರಿ. ಶುಭಸಂಖ್ಯೆ: 3

ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಪ್ರಯತ್ನ ಮುಂದುವರಿಸಿ. ಹಿತಶತ್ರುಗಳಿಂದ ತೊಂದರೆ. ಆಸ್ತಿ ವಿಚಾರಕ್ಕೆ ಅಸಮಧಾನ. ಶುಭಸಂಖ್ಯೆ: 9

ಕನ್ಯಾ: ಮಿತ್ರರು ಶತ್ರುವಾಗಿ ಪರಿವರ್ತನೆ. ಸಾಕಷ್ಟು ಯೋಚಿಸಿ ಕೆಲಸ ಮಾಡಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7

ತುಲಾ: ಅನಗತ್ಯವಸ್ತುಗಳಿಗೆ ವೆಚ್ಚ. ಬರಬೇಕಾಗಿದ್ದ ಹಣದ ವಿಷಯದಲ್ಲಿ ನಿರಾಸೆ. ಕುಟುಂಬದ ಅಗತ್ಯಕ್ಕೆ ಪರ್ಯಾಯ ವ್ಯವಸ್ಥೆಗೆ ಚಿಂತನೆ. ಶುಭಸಂಖ್ಯೆ: 1

ವೃಶ್ಚಿಕ: ಸಮಯಸಾಧಕರಿಂದ ದೂರವಿರಿ. ನಂಬಿದವರಿಂದಲೇ ಮೋಸ. ಸಂಗೀತಗಾರರಿಗೆ ವಿಶೇಷ ವೇದಿಕೆ. ದಿನಾಂತ್ಯದಲ್ಲಿ ಧನಲಾಭ. ಶುಭಸಂಖ್ಯೆ: 6

ಧನುಸ್ಸು: ಕಿರುಚಿತ್ರ ನಟರಿಗೆ ವಿಶೇಷ ಬೆಂಬಲ. ರಾಜಕೀಯ ರಂಗದವರಿಗೆ ಸಾಮಾಜಿಕವಾಗಿ ಕಿರಿಕಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ. ಶುಭಸಂಖ್ಯೆ: 3

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ ದೂರದೂರಿಗೆ ಪ್ರಯಾಣ. ಬಂಧುಮಿತ್ರರ ಬೇಟಿ. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ ನೀಡುವಿರಿ. ಶುಭಸಂಖ್ಯೆ: 1

ಕುಂಭ: ವೈದ್ಯರ ಸಲಹೆಯನ್ನು ಶಿಸ್ತಿನಿಂದ ಪಾಲಿಸಿ. ನಿಮಗೆ ಸಂಬಂಧವಿರದ ವಿಷಯದಲ್ಲಿ ಸೂಕ್ತ ಅಂತರವಿರಲಿ. ಮಕ್ಕಳಿಂದ ಹೆಮ್ಮೆ. ಶುಭಸಂಖ್ಯೆ: 7

ಮೀನ: ನಿಮ್ಮ ಬಗ್ಗೆ ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ಹೊಸ ಉದ್ದಿಮೆ ಪ್ರಾರಂಭಕ್ಕೆ ನಿರ್ಧಾರ. ಮಗನ ಮದುವೆಗೆ ಮುಹೂರ್ತ ನಿಗದಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net