ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರಯತ್ನಗಳೆಲ್ಲವೂ ಕೈಗೂಡುತ್ತವೆ

Nitya Bhavisya Vijayavani
Published on

ಮೇಷ: ಸ್ಟೇಷನರಿ ಅಂಗಡಿಯವರಿಗೆ ಆದಾಯದಲ್ಲಿ ಹೆಚ್ಚಳ. ಸಹೋದರಿಯರೊಂದಿಗೆ ಆಸ್ತಿ ವಿವಾದ. ಪ್ರಯತ್ನಗಳೆಲ್ಲವೂ ಕೈಗೂಡುತ್ತವೆ. ಶುಭಸಂಖ್ಯೆ: 5

ವೃಷಭ: ನೂತನ ವಸ್ತ್ರಾಭರಣಗಳನ್ನು ಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಅಭ್ಯುದಯವಾಗುವುದು. ತೀರ್ಥ ಯಾತ್ರೆಗೆ ಯೋಜನೆ ಹಾಕುವಿರಿ. ಶುಭಸಂಖ್ಯೆ: 9

ಮಿಥುನ: ಪತ್ನಿಯಿಂದ ಅದೃಷ್ಟ. ಧನ ಲಾಭವಾಗುವುದು. ಹೊಸ ಪದವಿಯಿಂದ ಅನುಕೂಲಗಳು ಹೆಚ್ಚುತ್ತವೆ. ಸೀರೆ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8

ಕಟಕ: ಹಿರಿಯರಿಂದ ಸೂಕ್ತ ಸಮಯದಲ್ಲಿ ಮಾರ್ಗ ದರ್ಶನ. ಬಿಸಿನೆಸ್ ಟೂರ್​ನಿಂದ ಲಾಭ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಶುಭಸಂಖ್ಯೆ:4

ಸಿಂಹ: ಕೃಷಿ ಮೂಲಗಳಿಂದ ಹೆಚ್ಚಿನ ಆದಾಯ ಬರುವುದು. ಕೈಗೊಂಡ ಕೆಲಸಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳ ಖರೀದಿ.ಶುಭಸಂಖ್ಯೆ: 6

ಕನ್ಯಾ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಮೇಲಧಿಕಾರಿಗಳಿಂದ ಅನುಕೂಲ. ಸುಖ ಭೋಜನ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ:1

ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಸಂಗಾತಿಯೊಂದಿಗೆ ಮನಸ್ತಾಪ. ಅವಕಾಶ ಬಳಸಿಕೊಳ್ಳುವಲ್ಲಿ ಉದಾಸೀನರಾಗಬೇಡಿ. ಶುಭಸಂಖ್ಯೆ: 7

ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರಿಕೆ ವಹಿಸಿ. ಭದ್ರತಾ ವಿಭಾಗದವರಿಗೆ ಕಾರ್ಯದೊತ್ತಡ ಹೆಚ್ಚುವುದು. ಕಣ್ಣಿನ ತೊಂದರೆ ಕಾಡಲಿದೆ. ಶುಭಸಂಖ್ಯೆ:2

ಧನುಸ್ಸು: ಬದಲಾದ ಪರಿಸರದಿಂದ ಮನಸ್ಸಿಗೆ ನೆಮ್ಮದಿ. ಅಲಂಕಾರಿಕ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಪೊಲೀಸ್ ಸಿಬ್ಬಂದಿಗೆ ಒತ್ತಡ. ಶುಭಸಂಖ್ಯೆ:5

ಮಕರ: ದಾನದಲ್ಲಿ ಆಸಕ್ತಿ. ಹೊಸ ಸ್ನೇಹಿತರ ಪರಿಚಯ ವಾಗುವುದು. ಸಹೋದರರೊಡನೆ ಒಡನಾಟ. ಸಗಟು ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:9

ಕುಂಭ:  ಕೌಟುಂಬಿಕ ಜೀವನದಲ್ಲಿ ಸುಖ. ವ್ಯಾಪಾರ ನಿಮಿತ್ತ ವಿದೇಶ ಪ್ರಯಾಣ. ಕ್ರೀಡೆ, ಮನರಂಜನೆಗಾಗಿ ಕಾಲಹರಣ ಮಾಡುವಿರಿ. ಶುಭಸಂಖ್ಯೆ:3

ಮೀನ: ಆಕಸ್ಮಿಕ ಅವಘಡ ಸಾಧ್ಯತೆಯಿದೆ, ಹುಷಾರು. ತಾಯಿಯೊಂದಿಗೆ ಬಾಂಧವ್ಯ ವೃದ್ಧಿ. ನಾಲ್ಕು ಚಕ್ರದ ವಾಹನ ಖರೀದಿಯೋಗ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net