ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವುದು

Nithya Bhavishya
Published on

ಮೇಷ: ಹೊಸ ಉದ್ಯೋಗದಲ್ಲಿ ತೊಂದರೆ ಎದುರಿಸಬೇಕಾಗು ವುದು. ತಾಯಿಗೆ ಅನಾರೋಗ್ಯ ಕಾಡಬಹುದು. ಬಾಡಿಗೆದಾರರಿಂದ ಕಿರಿಕಿರಿ. ಶುಭಸಂಖ್ಯೆ: 9

ವೃಷಭ: ಸಹೋದರಿಯಿಂದ ಲಾಭ. ಮನೆಯಲ್ಲಿ ಶುಭ ಸಮಾರಂಭದ ಸಡಗರ. ಆತ್ಮ ಗೌರವಕ್ಕೆ ಧಕ್ಕೆ ತರುವ ಘಟನೆ ನಡೆಯುವ ಸಾಧ್ಯತೆ. ಶುಭಸಂಖ್ಯೆ: 2

ಮಿಥುನ: ಅನಾರೋಗ್ಯದಿಂದ ಕೆಲಸ ಹೋಗುವ ಭೀತಿ. ನ್ಯಾಯಾಲಯದ ವಿವಾದಕ್ಕೆ ರ್ತಾಕ ಅಂತ್ಯ. ಸಹೋದರರೊಂದಿಗೆ ಘರ್ಷಣೆ. ಶುಭಸಂಖ್ಯೆ: 7

ಕಟಕ: ತೀರ್ಥಯಾತ್ರೆಯಿಂದ ಸಮಾಧಾನ. ವಿದೇಶ ಪ್ರಯಾಣಕ್ಕೆ ತಯಾರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ತೆಂಗು ಕೃಷಿಕರಿಗೆ ಲಾಭ. ಶುಭಸಂಖ್ಯೆ: 2.

ಸಿಂಹ: ಬಹುಕಾಲದ ನಿರೀಕ್ಷೆ ಫಲಕಾರಿಯಾಗಿ ಸಂತೋಷ. ಮೇಲಧಿಕಾರಿಗಳಿಂದ ಒತ್ತಡ. ಆಸ್ತಿ ನೋಂದಣಿ ಕೆಲಸಗಳಲ್ಲಿ ವಿಳಂಬ. ಶುಭಸಂಖ್ಯೆ: 7

ಕನ್ಯಾ: ಪಿತ್ರಾರ್ಜಿತ ಆಸ್ತಿ ವಿವಾದ ಮುಕ್ತಾಯವಾಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆಯುವುದು. ಮಕ್ಕಳ ಭವಿಷ್ಯದಚಿಂತೆ. ಶುಭಸಂಖ್ಯೆ: 6

ತುಲಾ: ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸ್ಥಿರಾಸ್ತಿ ವಿವಾದ ನ್ಯಾಯಾಲಯಕ್ಕೆ ಹೋಗಲಿದೆ. ಖರೀದಿಯಲ್ಲಿ ವಂಚನೆ ಸಾಧ್ಯತೆ. ಶುಭಸಂಖ್ಯೆ: 6

ವೃಶ್ಚಿಕ: ಮೋಜಿನಿಂದ ಸಮಸ್ಯೆ. ಅವಿವಾಹಿತರಿಗೆ ಶುಭಯೋಗ. ಅನಿರೀಕ್ಷಿತ ಘಟನೆ ಪರಿವರ್ತನೆಗೆ ಕಾರಣವಾಗಲಿದೆ. ಅನವಶ್ಯಕ ಖರ್ಚು. ಶುಭಸಂಖ್ಯೆ: 3

ಧನುಸ್ಸು: ಷೇರು ವ್ಯವಹಾರದಲ್ಲಿ ಲಾಭ. ನಿವೇಶನ ಖರೀದಿಸುವಿರಿ. ಶುಭ ಸಮಾರಂಭಕ್ಕೆ ಚಾಲನೆ. ಕೃಷಿ ಸಲಕರಣೆಗಾಗಿ ಹಣ ವ್ಯಯಿಸುವಿರಿ. ಶುಭಸಂಖ್ಯೆ: 8

ಮಕರ: ಅಹಂಭಾವದಿಂದ ಅವಮಾನ. ಆಪ್ತ ಸ್ನೇಹಿತನ ಭೇಟಿ. ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5

ಕುಂಭ:  ಹೊಸ ವಾಹನದಿಂದ ತೊಂದರೆ. ನ್ಯಾಯಾಲಯದ ವಿವಾದದಲ್ಲಿ ಸೋಲು. ವಿದ್ಯಾರ್ಥಿಗಳ ಪ್ರಗತಿ ಯಲ್ಲಿ ಅಡೆತಡೆಯಾದೀತು. ಶುಭಸಂಖ್ಯೆ:2

ಮೀನ: ಧರ್ಮಕಾರ್ಯಗಳಲ್ಲಿ ಅನಾಸಕ್ತಿ. ದೂರಪ್ರಯಾಣ ಸಾಧ್ಯತೆ. ಭತ್ತ ಕೃಷಿಕರು ಮಾರುಕಟ್ಟೆಯಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net