ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬಾಕಿ ಇದ್ದ ಹಣ ಕೈ ಸೇರುತ್ತದೆ

Nithya Bhavishya
Published on

ಮೇಷ: ಕುಲಕಸುಬಿನಲ್ಲಿ ಕೀರ್ತಿ ಲಭಿಸಲಿದೆ. ಸಾಹಿತಿಗಳಿಗೆ ಕೀರ್ತಿ, ಪ್ರತಿಷ್ಠೆ ದೊರೆಯಲಿದೆ. ನ್ಯಾಯಾಲಯಕ್ಕೆ ಅಲೆದಾಡಬೇಕಾದೀತು. ಶುಭಸಂಖ್ಯೆ: 9

ವೃಷಭ: ಯಕ್ಷಗಾನ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಆದಾಯ ತೆರಿಗೆ ಅಧಿಕಾರಿಗಳಿಂದ ತೊಂದರೆ. ಬಾಕಿ ಇದ್ದ ಹಣ ಕೈ ಸೇರುತ್ತದೆ. ಶುಭಸಂಖ್ಯೆ: 9

ಮಿಥುನ: ಕಳೆದಿದ್ದ ವಸ್ತು ಮರಳಿ ಸಿಗಲಿದೆ. ವೈದ್ಯಕೀಯ ವಸ್ತುಗಳ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಪತ್ರಕರ್ತರಿಗೆ ಅಪಮಾನ ಸಾಧ್ಯತೆ. ಶುಭಸಂಖ್ಯೆ:3

ಕಟಕ: ಲೆಕ್ಕಪತ್ರ ಪರಿಶೀಲಕರಿಗೆ ಶುಭದಾಯಕ ದಿನ. ಷೇರು ವ್ಯವಹಾರಗಳಲ್ಲಿ ಲಾಭ. ಪ್ರಯತ್ನಿಸುತ್ತಿರುವ ಕಾರ್ಯಗಳಲ್ಲಿ ಯಶಸ್ಸು. ಶುಭಸಂಖ್ಯೆ:2

ಸಿಂಹ: ನಿರ್ದೇಶಕರಿಗೆ ಹೊಸ ಅವಕಾಶಗಳು ಬರಲಿವೆ. ಭೂ ವ್ಯವಹಾರದಲ್ಲಿ ಮೋಸವಾದೀತು, ಎಚ್ಚರವಿರಲಿ. ಉದರ ಬಾಧೆ ಕಾಡೀತು. ಶುಭಸಂಖ್ಯೆ: 7

ಕನ್ಯಾ: ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿ. ಕೇಂದ್ರ ಸರ್ಕಾರದ ನೌಕರಿಯಲ್ಲಿ ಬಡ್ತಿ ಸಿಗಲಿದೆ. ಲೇವಾದೇವಿ ವ್ಯವಹಾರಕ್ಕೆ ಪರರಿಂದ ಕೆಡುಕು. ಶುಭಸಂಖ್ಯೆ: 7

ತುಲಾ: ಆತ್ಮೀಯರೊಬ್ಬರಿಂದ ಧನ ಸಹಾಯ. ಸ್ತ್ರೀಯರಿಗೆ ಉದ್ಯೋಗಲಾಭ. ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ತೊಂದರೆ. ಶುಭಸಂಖ್ಯೆ:2

ವೃಶ್ಚಿಕ: ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ ಇರುತ್ತದೆ. ಹಿತಶತ್ರುಗಳಿಂದ ತಡೆ. ಎಲೆಕ್ಟ್ರಾನಿಕ್ಸ್ ಸಂವಹನ ಕ್ಷೇತ್ರದವರಿಗೆ ಬೇಡಿಕೆ.ಶುಭಸಂಖ್ಯೆ:1

ಧನುಸ್ಸು: ಮಕ್ಕಳಿಂದ ನಷ್ಟವಾಗುವುದು. ಪದವೀಧರರಿಗೆ ಕೃಷಿಯ ಕಡೆ ಆಸಕ್ತಿ. ಕೈಗೊಂಡ ಕಾರ್ಯಗಳಲ್ಲಿ ಸಫಲತೆ ಹೊಂದುವಿರಿ.ಶುಭಸಂಖ್ಯೆ: 8

ಮಕರ: ಹಳೇ ಸಾಲ ತೀರಿಸಲು ಸ್ನೇಹಿತನಿಂದ ಸಹಾಯ. ಸಮಾಜದಲ್ಲಿ ಗೌರವ ಸ್ಥಾನ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ.ಶುಭಸಂಖ್ಯೆ:3

ಕುಂಭ:  ಕಛೇರಿಯಲ್ಲಿ ಭಿನ್ನಾಭಿಪ್ರಾಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ನಿವೇಶನ ಖರೀದಿಗೆ ಅಡ್ಡಿ. ಜೇನು ಮಾರಾಟದಲ್ಲಿ ಅಧಿಕ ಲಾಭ. ಶುಭಸಂಖ್ಯೆ:8

ಮೀನ: ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಗಣ್ಯ ವ್ಯಕ್ತಿಗಳ ಭೇಟಿ. ಆಧ್ಯಾತ್ಮಿಕ ಗ್ರಂಥಗಳ ಓದಿನಲ್ಲಿ ಹೆಚ್ಚಿನ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net