ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಒತ್ತಡ ಪರಿಹಾರವಾಗಿ ಸಮಾಧಾನವಾಗುವುದು

Nithya Bhavishya
Published on

ಮೇಷ: ಆತ್ಮೀಯರ ಭೇಟಿ. ಹೊಸ ಉದ್ಯಮಕ್ಕೆ ಚಿಂತನೆ. ಕೊಟ್ಟ ಸಾಲ ತಿರುಗಿ ಬರಲಿದೆ. ತೀರ್ಥಯಾತ್ರೆಯ ಸಂಕಲ್ಪ ಈಡೇರಲಿದೆ. ಶುಭಸಂಖ್ಯೆ: 2

ವೃಷಭ: ಉದರ ಸಂಬಂಧಿ ರೋಗ ಉಲ್ಬಣ. ಅಲಂಕಾರಿಕ ಸಾಮಗ್ರಿ ಖರೀದಿ. ಪೆಟ್ರೋಲ್ ಬಂಕ್ ಮಾಲೀಕರಿಗೆ ಕೆಲಸಗಾರರಿಂದ ನಷ್ಟ. ಶುಭಸಂಖ್ಯೆ: 7

ಮಿಥುನ: ಕಾನೂನು ವಿದ್ಯಾರ್ಥಿಗಳಿಗೆ ವೈಫಲ್ಯ ಕಾಡಲಿದೆ. ಮಗನ ವಿವಾಹ ಪ್ರಯತ್ನ ಸಫಲ. ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 9

ಕಟಕ: ಕಚೇರಿಯ ಒತ್ತಡದಿಂದ ಮಾನಸಿಕ ಅಸಮತೋಲನ ಉಂಟಾಗಲಿದೆ. ಆರ್ಥಿಕ ಒತ್ತಡ ಪರಿಹಾರವಾಗಿ ಸಮಾಧಾನವಾಗುವುದು. ಶುಭಸಂಖ್ಯೆ: 5

ಸಿಂಹ: ವಾಹನ ಚಾಲನೆಯಲ್ಲಿ ಎಚ್ಚರ. ಪದವೀಧರರಿಗೆ ಉದ್ಯೋಗ ಸಿಗಲಿದೆ. ಬಟ್ಟೆ ಗಿರಣಿ ಮಾಲೀಕರಿಗೆ ಅಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 2

ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಮನಸ್ತಾಪ. ತಂದೆಗೆ ಅನಿರೀಕ್ಷಿತ ಅನಾರೋಗ್ಯ. ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪ್ರಗತಿ. ಶುಭಸಂಖ್ಯೆ: 2

ತುಲಾ: ಚಲನಚಿತ್ರ ನಿರ್ದೇಶಕರಿಗೆ ಹೊಸ ಅವಕಾಶ ಸಿಗಲಿದೆ. ಕಲಾ ಪ್ರದರ್ಶನಕ್ಕೆ ವಿದೇಶ ಪ್ರಯಾಣ. ನೂತನ ಗೃಹ ಆರಂಭಕ್ಕೆ ಚಾಲನೆ. ಶುಭಸಂಖ್ಯೆ: 1

ವೃಶ್ಚಿಕ: ಪಿತ್ರಾರ್ಜಿತ ಆಸ್ತಿ ವಿಭಾಗ ಕಗ್ಗಂಟಾಗಲಿದೆ. ಮನೆ ಬದಲಾವಣೆಗೆ ಸುಸಮಯ. ಸೌಂದರ್ಯ ವರ್ಧಕ ವ್ಯಾಪಾರಿಗಳಿಗೆ ಅಧಿಕ ಲಾಭ. ಶುಭಸಂಖ್ಯೆ: 9

ಧನುಸ್ಸು: ಪ್ರಭಾವಿಗಳ ಸಂಪರ್ಕ. ವಿಚ್ಛೇದನ ಪ್ರಕರಣ ತೀರ್ಮಾನ ಆಗಲಿದೆ. ಪ್ರೇಮದ ಬಲೆಯಲ್ಲಿ ಸಿಲುಲುಕುವಿರಿ. ದಿನಾಂತ್ಯದಲ್ಲಿ ಅಶುಭ. ಶುಭಸಂಖ್ಯೆ: 6

ಮಕರ: ಮಹಿಳಾ ಸಹೋದ್ಯೋಗಿಗಳಿಂದ ಆರ್ಥಿಕ ಸಹಾಯ. ಆರಕ್ಷಕ ಅಧಿಕಾರಿಗಳಿಗೆ ವರ್ಗಾವಣೆ. ಪದೇ ಪದೇ ವಿಫಲತೆ ಕಾಡಲಿದೆ.ಶುಭಸಂಖ್ಯೆ: 3

ಕುಂಭ:  ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿದೆ. ಮನೆ ನವೀಕರಣಕ್ಕೆ ತೀರ್ವನಿಸುವಿರಿ. ವಿದೇಶದಲ್ಲಿರುವ ಸ್ನೇಹಿತರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 7

ಮೀನ: ಧಾರ್ವಿುಕ ನೇತಾರರಿಗೆ ತೊಂದರೆ. ಹೃದಯ ಸಂಬಂಧಿ ರೋಗ ಬಾಧೆ. ನವ ವಿವಾಹಿತರಿಗೆ ಶುಭಸುದ್ದಿ. ಹಳೇ ಸ್ನೇಹಿತೆ ಭೇಟಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net