ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಅನುಕೂಲ

Nithya Bhavishya
Published on

ಮೇಷ: ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯಲಿದೆ. ಸಾಲದ ಚಿಂತೆ. ಮಾತಿನಿಂದ ಸಮಸ್ಯೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 8

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲಿದೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು. ಮಕ್ಕಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 1

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯ. ದೈಹಿಕ ಅಸಮತೋಲನದಿಂದ ಸಮಸ್ಯೆ. ಜಲದಿಂದ ಅಪಘಾತ ಸಾಧ್ಯತೆೆ. ಶುಭಸಂಖ್ಯೆ:3

ಕಟಕ: ಆತ್ಮೀಯರ ವಿಯೋಗ. ಅಲಂಕಾರಿಕ ವಸ್ತುಗಳಿಂದ ಚರ್ಮದ ಸಮಸ್ಯೆ ಕಾಡಲಿದೆ. ಆರ್ಥಿಕ ಒತ್ತಡಗಳಿಂದ ಅನಾರೋಗ್ಯ. ಶುಭಸಂಖ್ಯೆ: 2

ಸಿಂಹ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾದೀತು. ಉದ್ಯೋಗದಲ್ಲಿ ತೊಂದರೆ. ವೈರಿಗಳಿಂದ ದೂರವಿರುವುದು ಕ್ಷೇಮ. ಶುಭಸಂಖ್ಯೆ:7

ಕನ್ಯಾ: ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ. ದೈಹಿಕ ಕಸರತ್ತನ್ನು ನಡೆಸುವವರಿಗೆ ಲಾಭ. ಗಳಿಸಿದ ಹಣ ನಷ್ಟವಾಗಲಿದೆ. ಶುಭಸಂಖ್ಯೆ:1

ತುಲಾ: ಅಡಕೆ ಮಂಡಿ ವ್ಯವಹಾರದಲ್ಲಿ ಹಿನ್ನಡೆಯಾಗುವುದು. ಅಧಿಕಾರಿಗಳಿಂದ ಭರವಸೆ. ದುಶ್ಚಟಗಳಿಂದ ಕೌಟುಂಬಿಕ ಸಮಸ್ಯೆಗಳು. ಶುಭಸಂಖ್ಯೆ:8

ವೃಶ್ಚಿಕ: ಸಂಗಾತಿಯಿಂದ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಅನುಕೂಲ. ಶುಭಸಂಖ್ಯೆ: 1

ಧನುಸ್ಸು: ಪ್ರಯಾಣದಲ್ಲಿ ಅಪಘಾತವಾಗುವ ಸಾಧ್ಯತೆ. ತಂದೆಯಿಂದ ಮನೆ ಕಟ್ಟಲು ನೆರವು. ಹೊಸ ಮಹಿಳಾ ಹೂಡಿಕೆದಾರರ ಸೇರ್ಪಡೆ. ಶುಭಸಂಖ್ಯೆ:4

ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಘಟನೆ ನಡೆಯಲಿದೆ. ಶುಭಸಂಖ್ಯೆ:7

ಕುಂಭ:  ಸ್ಥಿರಾಸ್ತಿಯಿಂದ ಬ್ಯಾಂಕ್ ಸಾಲ ದೊರೆಯಲಿದೆ. ವಿದ್ಯಾರ್ಥಿನಿಯರಿಗೆ ಮಾನಸಿಕ ನೋವು. ಭತ್ತ ಕೃಷಿಕರಿಗೆ ಅನಾನುಕೂಲ. ಶುಭಸಂಖ್ಯೆ: 9

ಮೀನ: ಹೋಟೆಲ್ ವ್ಯವಹಾರದಲ್ಲಿ ನಷ್ಟ. ಅನಗತ್ಯ ಮಾತಿನಿಂದ ಬಂಧುಗಳೊಂದಿಗೆ ನಿಷ್ಠುರ. ಔಷಧಿ ವ್ಯಾಪಾರಿಗಳಿಗೆ ದ್ವಿಗುಣ ಲಾಭ.ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net