

ಮೇಷ : ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಲಭ್ಯ. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ. ಲೆಕ್ಕ ಪರಿಶೋಧಕರಿಗೆ ಹೆಚ್ಚಿದ ಆದಾಯ. ಶುಭಸಂಖ್ಯೆ:1
ವೃಷಭ: ಜೇನು, ರೇಷ್ಮೆ ಕೃಷಿಕರಿಗೆ ಧನ ನಷ್ಟ. ಪೀಠೋಪಕರಣ ಗಳ ಖರೀದಿಯಲ್ಲಿ ಮೋಸ ಹೋಗುವಿರಿ. ಪಿತ್ರಾರ್ಜಿತ ಆಸ್ತಿಗಾಗಿ ಕಲಹ. ಶುಭಸಂಖ್ಯೆ:8
ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ ಸಾಧ್ಯತೆ. ಕುಟುಂಬದೊಂದಿಗೆ ವಿಹಾರ. ದಾಂಪತ್ಯದಲ್ಲಿ ಸಾಮರಸ್ಯಸಾಧಿಸುವಿರಿ. ಶುಭಸಂಖ್ಯೆ: 3
ಕಟಕ: ವಾಣಿಜ್ಯೋದ್ಯಮಿಗಳಿಗೆ ಪಾಲುಗಾರರಿಂದ ಕಿರಿಕಿರಿ. ಕಾನೂನು ವಿದ್ಯಾರ್ಥಿಗಳಿಗೆ ವೈಫಲ್ಯ. ಹೈನೋತ್ಪನ್ನ ಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9
ಸಿಂಹ: ಮಕ್ಕಳ ಭವಿಷ್ಯದ ಚಿಂತೆ. ವಾಹನ ದುರಸ್ತಿಗೆ ಅಧಿಕ ಖರ್ಚು. ವಿಮಾನ ಪ್ರಯಾಣ. ಸಂಗೀತ ಕಲಾವಿದರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 6
ಕನ್ಯಾ: ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶಿಕ್ಷಕರಿಗೆ ವರ್ಗಾವಣೆ . ಆಸ್ತಿ ನೋಂದಣಿಗೆ ಹಲವು ಅಡೆತಡೆಗಳು. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ:9
ತುಲಾ: ಆತ್ಮೀಯರ ವಿಯೋಗ. ವಿದ್ಯಾರ್ಥಿಗಳಿಗೆ ಪರಿಶ್ರಮದ ಕೊರತೆ, ಸೋಲು. ನಟನಾ ಕ್ಷೇತ್ರದಲ್ಲಿ ಪ್ರಗತಿ. ಪುಣ್ಯಕ್ಷೇತ್ರಕ್ಕೆಪ್ರಯಾಣ. ಶುಭಸಂಖ್ಯೆ: 5
ವೃಶ್ಚಿಕ: ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ವಿಶೇಷ ಸನ್ಮಾನ ಪುರಸ್ಕಾರ. ನೂತನ ದಂಪತಿಗಳಿಗೆ ಶುಭ ಸುದ್ದಿ. ದಾಂಪತ್ಯ ಕಲಹ ತಾರಕಕ್ಕೆ. ಶುಭಸಂಖ್ಯೆ: 6
ಧನುಸ್ಸು: ಉನ್ನತ ಶಿಕ್ಷಣಕ್ಕೆ ವಿದೇಶದಲ್ಲಿ ಅವಕಾಶ ಸಿಗಲಿದೆ. ಮಗಳ ವಿವಾಹ ಪ್ರಯತ್ನದಲ್ಲಿ ಪುನಃ ನಿರಾಸೆ. ಕೃಷಿಕರಿಗೆ ವಿಶೇಷ ಸೌಲಭ್ಯ. ಶುಭಸಂಖ್ಯೆ:4
ಮಕರ: ಪಾಲುದಾರರೊಂದಿಗೆ ಮನಸ್ತಾಪ ಸ್ನೇಹಿತರೊಂದಿಗೆ ವಾಗ್ವಾದ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಕಾರ್ಯಸಾಧನೆಯಾಗುವುದು. ಶುಭಸಂಖ್ಯೆ: 9
ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಅಲಂಕಾರಿಕ ವಸ್ತುಗಳ ಖರೀದಿ. ಆನ್ಲೈನ್ ವ್ಯವಹಾರದಲ್ಲಿ ಮೋಸ ಹೋಗುವಿರಿ. ಶುಭಸಂಖ್ಯೆ: 3
ಮೀನ: ಮಕ್ಕಳ ಪ್ರಗತಿಯಿಂದ ಸಂತೋಷ. ಬಂಧು ಬಾಂಧವರೊಂದಿಗೆ ಮನಸ್ತಾಪ. ಮಾಟ ಮಂತ್ರ ಪ್ರಯೋಗದ ಭಯ ಕಾಡಲಿದೆ.ಶುಭಸಂಖ್ಯೆ: 2