ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿವಿಧೆಡೆಯಿಂದ ಹಣಕಾಸು ನೆರವು ಹರಿದು ಬರಲಿದೆ

Nitya Bhavisya Vijayavani
Published on

ಮೇಷ: ಮಕ್ಕಳ ಪ್ರಗತಿಯಿಂದ ಸಂತೋಷ. ನಿಮ್ಮಿಷ್ಟದಂತೆ ಕಚೇರಿಯ ಕಾರ್ಯಗಳು ನೆರವೇರುತ್ತವೆ. ಅನಿರೀಕ್ಷಿತ ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 9

ವೃಷಭ: ಜಟಿಲ ಸಮಸ್ಯೆಯ ಇತ್ಯರ್ಥಕ್ಕೆ ಕುಟುಂಬ ಸದಸ್ಯರ ಸಹಾಯ ದೊರೆಯುವುದು. ವ್ಯಾಪಾರ- ವ್ಯವಹಾರದಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ:5

ಮಿಥುನ: ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ. ವಿವಿಧೆಡೆಯಿಂದ ಹಣಕಾಸು ನೆರವು ಹರಿದು ಬರಲಿದೆ. ಶುಭಸಂಖ್ಯೆ: 9

ಕಟಕ: ಆಸ್ತಿ ನೊಂದಣಿ ಕಾರ್ಯದಲ್ಲಿ ಜಯ. ಮಾತನಾಡುವಾಗ ಎಚ್ಚರ ವಹಿಸಿ. ಸ್ವಯಂ ಉದ್ಯೋಗದ ಮಹಿಳೆಯರಿಗೆ ಹಿನ್ನಡೆ. ಶುಭಸಂಖ್ಯೆ: 7

ಸಿಂಹ: ಕುಟುಂಬ ಸದಸ್ಯರೊಂದಿಗೆ ವಿಹಾರ. ಕ್ರೀಡಾಂಗಣ ಮಾಲೀಕರಿಗೆ ಸರ್ಕಾರದ ಸಹಾಯ ಸಿಗಲಿದೆ. ಪ್ರಯಾಣದಿಂದ ತೊಂದರೆ. ಶುಭಸಂಖ್ಯೆ: 4

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಮೊಬೈಲ್ ವ್ಯಾಪಾರದಲ್ಲಿ ನಷ್ಟ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ದಾನ ಮಾಡುವಿರಿ. ಶುಭಸಂಖ್ಯೆ: 2

ತುಲಾ: ದೂರದ ಬಂಧುಗಳ ಭೇಟಿಯಾಗುವುದು. ಕುಲದೇವರನ್ನು ದರ್ಶಿಸಿಬರಲು ಯೋಚಿಸುವಿರಿ. ವಾಹನ ಚಾಲಕರಿಗೆ ತೊಂದರೆ. ಶುಭಸಂಖ್ಯೆ: 8

ವೃಶ್ಚಿಕ: ಸಾಲ ಮಾಡುವ ಸಾಧ್ಯತೆ ಜಾಸ್ತಿ ಇದೆ. ಸ್ವಂತ ಪರಿಶ್ರಮದಿಂದ ಅನುಕೂಲವಾಗುವುದು. ಕೃಷಿ ಚಟುವಟಿಕೆಗಳಿಗೆ ಚಾಲನೆ. ಶುಭಸಂಖ್ಯೆ: 4

ಧನುಸ್ಸು: ವಿದ್ಯಾಭ್ಯಾಸಕ್ಕಾಗಿ ಪ್ರಯಾಣ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ತಿರುಗಾಟ. ಹೊಸ ಪ್ರಯತ್ನದಲ್ಲಿ ಜಯ. ಶುಭಸಂಖ್ಯೆ: 8

ಮಕರ: ಪಿತ್ರಾರ್ಜಿತ ಆಸ್ತಿಗೆ ತಕರಾರು. ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ಸ್ವಯಂಕೃತ ಅಪರಾಧದಿಂದ ತೊಂದರೆಗೆ ಸಿಲುಕುವಿರಿ. ಶುಭಸಂಖ್ಯೆ: 1

ಕುಂಭ:  ರೇಷ್ಮೆ, ಜೇನು ಕೃಷಿಕರಿಗೆ ಅಧಿಕ ಲಾಭ. ತೀರ್ಥಯಾತ್ರಾ ದರ್ಶನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉತ್ತಮ ಸಂಪಾದನೆ. ಶುಭಸಂಖ್ಯೆ: 9

ಮೀನ: ಮಹಿಳೆಯರಿಗೆ ಪದವಿ ಪ್ರಾಪ್ತಿಯಾಗಲಿದೆ. ನಾನಾ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net