

ಮೇಷ: ಯತ್ನಿಸಿದ ಕಾರ್ಯದಲ್ಲಿ ವಿಳಂಬವಾಗುವುದು. ಅಪರಿಚಿತರಿಂದ ದೂರವಿರಿ. ಸಹೋದ್ಯೋಗಿಗಳ ಸಹಕಾರದಿಂದ ಪ್ರಗತಿ. ಶುಭಸಂಖ್ಯೆ: 5
ವೃಷಭ: ಆಧ್ಯಾತ್ಮದಲ್ಲಿ ಒಲವು. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಕೂಡಿಟ್ಟ ದ್ರವ್ಯ ನಷ್ಟವಾದೀತು. ಆಹಾರ ಸೇವನೆಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 2
ಮಿಥುನ: ಶ್ರಮಕ್ಕೆ ತಕ್ಕ ಫಲ ದೊರೆಯುವುದು. ಮಗಳ ವಿವಾಹದ ವಿಷಯವನ್ನು ಚಿಂತಿಸುವುದು ಅಗತ್ಯವಿಲ್ಲ. ಸಣ್ಣ ವಿಷಯಕ್ಕೆ ಕಲಹ. ಶುಭಸಂಖ್ಯೆ:4
ಕಟಕ: ವಿವಾದಾತ್ಮಕ ವಿಷಯದಿಂದ ದೂರವಿರಿ. ಆಲಸ್ಯತನದಿಂದ ಅವಕಾಶ ವಂಚಿತರಾಗುವಿರಿ. ಮನಸ್ಸಿನ ಮೇಲೆ ದುಷ್ಟ ಪರಿಣಾಮ. ಶುಭಸಂಖ್ಯೆ: 9
ಸಿಂಹ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಅನಿರೀಕ್ಷಿತ ಖರ್ಚು. ದುಡುಕು ಸ್ವಭಾವ. ವಿನಾಕಾರಣ ದ್ವೇಷ. ಶುಭಸಂಖ್ಯೆ:3
ಕನ್ಯಾ: ಆಹಾರ ಪದಾರ್ಥ ಮಾರಾಟದಲ್ಲಿ ಧನ ಲಾಭ. ಪುಣ್ಯ ಕ್ಷೇತ್ರ ದರ್ಶನ. ಮನಃಶಾಂತಿ. ಭೂ ಲಾಭ. ಸ್ತ್ರೀಯರಿಗೆ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 6
ತುಲಾ: ಪ್ರಯತ್ನಗಳಿಗೆ ಉತ್ತಮ ಸಹಕಾರ ಸಿಗಲಿದೆ. ಸ್ತ್ರೀಯರಿಗೆ ಪದವಿ ಪ್ರಾಪ್ತಿ. ದಾಂಪತ್ಯ ಕಿರಿಕಿರಿ. ಮರೆತು ಆಡಿದ ಮಾತಿಗೆ ಪಶ್ಚಾತ್ತಾಪ. ಶುಭಸಂಖ್ಯೆ:2
ವೃಶ್ಚಿಕ: ಪರಸ್ಥಳ ವಾಸ. ದಾಯಾದಿ ಕಲಹ. ಕೃಷಿ ಉಪಕರಣಗಳ ಅಭಿವೃದ್ಧಿಗೆ ಅನಗತ್ಯ ಖರ್ಚು. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 9
ಧನುಸ್ಸು: ಯತ್ನ ಕಾರ್ಯಗಳಲ್ಲಿ ವಿಳಂಬವಾಗುವುದು. ಶ್ರಮಕ್ಕೆ ತಕ್ಕ ಫಲ. ಆಕಸ್ಮಿಕ ಘಟನೆ ನಡೆಯಲಿದೆ. ದೃಷ್ಟಿ ದೋಷ. ಹಿತ ಶತ್ರು ಬಾಧೆ. ಶುಭಸಂಖ್ಯೆ:5
ಮಕರ: ಕಾರ್ಯಗಳಲ್ಲಿ ತೊಂದರೆಯಾಗಬಹುದು. ಕಾರ್ಯ ಸಾಧನೆಗಾಗಿ ತಿರುಗಾಟ. ನಟರು ಮತ್ತು ಕಲಾವಿದರಿಗೆ ಗೌರವ ಸನ್ಮಾನ. ಶುಭಸಂಖ್ಯೆ:2
ಕುಂಭ: ಮನಸ್ಸಿನಲ್ಲಿ ದುಗುಡ. ಸಾಲಗಾರರಿಂದ ಕಿರಿಕಿರಿ. ಮಿತ್ರರ ಭೇಟಿ. ಆರೋಗ್ಯದಲ್ಲಿ ವ್ಯತ್ಯಾಸ. ದಾಂಪತ್ಯ ಜೀವನದಲ್ಲಿ ತಾಳ್ಮೆ ಅಗತ್ಯ.ಶುಭಸಂಖ್ಯೆ:1
ಮೀನ: ಅನವಶ್ಯಕ ಮಾತು ಬೇಡ. ಕುಟುಂಬ ಸೌಖ್ಯ. ದಾಂಪತ್ಯದಲ್ಲಿ ಪ್ರೀತಿ. ಉದ್ಯೋಗದಲ್ಲಿ ಬಡ್ತಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ಶುಭಸಂಖ್ಯೆ: 9