ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ದಾನ ಮಾಡುವುದರಿಂದ ಕಷ್ಟಗಳು ದೂರವಾಗುವವು

Nithya Bhavishya
Published on

ಮೇಷ: ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ. ಹಿರಿಯರ ಆರೋಗ್ಯದ ಕಾಳಜಿ ಅನಿವಾರ್ಯ. ಶುಭಸಂಖ್ಯೆ: 9

ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ. ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಳ್ಳುವುದ ರಿಂದ ಯಶಸ್ವಿಯಾಗುವಿರಿ. ಶುಭಸಂಖ್ಯೆ: 1

ಮಿಥುನ: ಉದ್ಯೋಗ ಬದಲಿಸುವ ವಿಚಾರದಲ್ಲಿ ಸಾರಾಸಾರ ಯೋಚಿಸಿ. ವಿದೇಶ ವ್ಯವಹಾರದಿಂದ ವೃತ್ತಿಗೆ ಹೆಚ್ಚು ಸಮಯ ಕೊಡಬೇಕು. ಶುಭಸಂಖ್ಯೆ: 3

ಕಟಕ: ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುವಿರಿ. ಹೊಸವಸ್ತು ಖರೀದಿ. ದಾನ ಮಾಡುವುದರಿಂದ ಕಷ್ಟಗಳು ದೂರವಾಗುವವು. ಶುಭಸಂಖ್ಯೆ:9

ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆ ಎದುರಾಗಬಹುದು. ಹಣದ ಹೂಡಿಕೆಯನ್ನು ಈ ದಿನ ಮಾಡದಿರುವುದು ಒಳ್ಳೆಯದು. ಶುಭಸಂಖ್ಯೆ:2

ಕನ್ಯಾ: ವೈಯಕ್ತಿಕ ವಿಚಾರ ಹಂಚಿಕೊಳ್ಳಬೇಡಿ. ಸೇವಕರಲ್ಲಿ ವಿಶ್ವಾಸದಿಂದ ವ್ಯವಹರಿಸಿ. ಉದ್ಯೋಗ ಬದಲಾಗುವುದರಿಂದ ಅನುಕೂಲ. ಶುಭಸಂಖ್ಯೆ:9

ತುಲಾ: ಸಾಧನೆಯ ಫಲವಾಗಿ ಆತ್ಮವಿಶ್ವಾಸ ಹೆಚ್ಚುವುದು. ಸ್ನೇಹಿತರಿಂದ ಸಲಹೆ. ಸ್ಥಗಿತಗೊಂಡಿದ್ದ ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ.ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗಕ್ಕೆ ಸೇರಲು ಸಿದ್ಧತೆ. ಶ್ರೀಮಂತ ಬದುಕಿಗೆ ದುಂದು ವೆಚ್ಚ. ಯೋಜನೆಗಳು ಪೂರ್ವ ನಿಯೋಜಿತವಾಗಿ ಸಾಗಲಿವೆ. ಶುಭಸಂಖ್ಯೆ: 7

ಧನುಸ್ಸು: ಕುಟುಂಬ ನಿರ್ವಹಣೆಗಾಗಿ ಖರ್ಚು. ಸ್ತ್ರೀಯರಿಗೆ ಆದಾಯಕ್ಕೇನೂ ಕೊರತೆ ಇರುವುದಿಲ್ಲ. ಆತ್ಮೀಯ ಸ್ನೇಹಿತನ ಭೇಟಿಯಾಗಲಿದೆ. ಶುಭಸಂಖ್ಯೆ: 6

ಮಕರ: ಹೂವು-ಹಣ್ಣು, ಹಾಲಿನ ವ್ಯಾಪಾರಿಗಳಿಗೆ ಅಧಿಕ ವ್ಯಾಪಾರ. ಹೊಟ್ಟೆಗೆ ಸಂಬಂಧಿಸಿದ ರೋಗ ಬಾಧೆ ಸಂಭವ. ಕೃಷಿ ಮೂಲಗಳಿಂದ ಧನಾರ್ಜನೆ. ಶುಭಸಂಖ್ಯೆ: 4

ಕುಂಭ:  ಉದಾರತೆಯನ್ನು ದುರುಪಯೋಗವಾದೀತು ಜಾಗೃತೆ. ನೆರೆಯವರಿಂದ ಸಮಸ್ಯೆ. ಆಸ್ತಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಿ ಶುಭಸಂಖ್ಯೆ: 3

ಮೀನ: ಕಾಡುತ್ತಿರುವ ಸಮಸ್ಯೆಗೆ ಉತ್ತರ ಸಿಗುವುದು. ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ. ಕೃಷಿ ಸಾಮಗ್ರಿ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net