ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸಾಮಾಜಿಕವಾಗಿ ಗೌರವ ಹೆಚ್ಚಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ

Nithya Bhavishya
Published on

ಮೇಷ: ಕುಟುಂಬದಲ್ಲಿ ಸಂತೋಷದ ವಾತಾವರಣ. ವ್ಯವಹಾರಕ್ಕೆ ಸಂಗಾತಿಯಿಂದ ಬೆಂಬಲ. ಪಾಲು ದಾರಿಕೆಯಲ್ಲಿ ಸಕಾರಾತ್ಮಕ ದಿನ. ಶುಭಸಂಖ್ಯೆ: 9

ವೃಷಭ: ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ಉದ್ಯೋಗ ಸ್ಥಳದಲ್ಲಿ ಬಡ್ತಿ. ಬಹುಕಾಲದಿಂದ ಬಾಕಿ ಉಳಿದಿರುವ ಹಣ ಬರಲಿದೆ. ಶುಭಸಂಖ್ಯೆ:7

ಮಿಥುನ: ಸಹೋದ್ಯೋಗಿಗಳೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ. ವ್ಯವಹಾರದಲ್ಲಿ ಪಾರದರ್ಶಕತೆ. ಮಹಿಳೆಯರು ಸವಾಲು ಗೆಲ್ಲುವಿರಿ. ಶುಭಸಂಖ್ಯೆ:6

ಕಟಕ: ಹಣಕಾಸಿನ ವಿಚಾರದಲ್ಲಿ ಹುಷಾರು. ಪ್ರಯಾಣದಲ್ಲಿ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಂತಸ, ಶಾಂತಿ ಇರುತ್ತದೆ.ಶುಭಸಂಖ್ಯೆ: 9

ಸಿಂಹ: ಸಂಗಾತಿಯೊಂದಿಗೆ ಉಂಟಾಗಿರುವ ತಪ್ಪು ತಿಳಿವಳಿಕೆಯನ್ನು ಬೇಗ ಸರಿಪಡಿಸಿಕೊಳ್ಳಿ. ಕಾನೂನು ವಿಷಯದಿಂದ ದೂರವಿರಿ. ಶುಭಸಂಖ್ಯೆ:6

ಕನ್ಯಾ: ಪೂಜಾ ಕಾರ್ಯದಿಂದ ಮಾನಸಿಕ ಶಾಂತಿ. ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ.ಶುಭಸಂಖ್ಯೆ:1

ತುಲಾ: ವೃತ್ತಿಜೀವನದಲ್ಲಿ ಪ್ರಗತಿ. ಸಮರ್ಪಣಾ ಬುದ್ಧಿಯಿಂದ ಕೆಲಸ ಮಾಡಿ, ಜಯ ನಿಮ್ಮದಾಗಲಿದೆ. ಸಾಲ ತೀರಿಸಲು ದಾರಿ ಸಿಗಲಿದೆ. ಶುಭಸಂಖ್ಯೆ:3

ವೃಶ್ಚಿಕ: ಕಲಾರಂಗದವರಿಗೆ ವಿಶೇಷ ವೇದಿಕೆ ಲಭ್ಯ. ಅನಗತ್ಯ ವಿವಾದಗಳಿಂದ ದೂರವಿರಿ. ಖಿನ್ನತೆಯಿಂದ ಹೊರಬರುವ ದಾರಿ ಸಿಗಲಿದೆ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗ ಸ್ಥಳದ ರಾಜಕೀಯದಿಂದ ದೂರವಿರಿ. ಸ್ತ್ರೀಯರ ಕ್ಷಮತೆಗೆ ಗೌರವ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ. ಶುಭಸಂಖ್ಯೆ:9

ಮಕರ: ಐಟಿ ಉದ್ಯೋಗಿಗಳು ಕೆಲಸದತ್ತ ಗಮನ ಕೇಂದ್ರೀಕರಿಸಿ. ಹೊಸ ಯೋಜನೆ ಸದ್ಯ ಬೇಡ. ದವಸ ಧಾನ್ಯವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:9

ಕುಂಭ:  ಸಾಮಾಜಿಕವಾಗಿ ಗೌರವ ಹೆಚ್ಚಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸಂಗೀತಗಾರರಿಗೆ ಅಪಾರ ಯಶಸ್ಸು ಸಿಗಲಿದೆ. ಶುಭಸಂಖ್ಯೆ:9

ಮೀನ: ಕಿರುಚಿತ್ರ ನಿರ್ದೇಶಕರಿಗೆ ಲಾಭ. ವೈದ್ಯ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ . ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಸಂದಾಯ.ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net